ಕರ್ನಾಟಕ

karnataka

ಅನ್ಯ ಧರ್ಮದ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ.. ಕಲಬುರಗಿಯಲ್ಲಿ ನಾಲ್ವರು ಆರೋಪಿಗಳು ಅರೆಸ್ಟ್​

By

Published : Mar 10, 2022, 4:51 PM IST

Kalaburagi murder case.. ನಗರದ ಪಿಎನ್‌ಟಿ ಬಡಾವಣೆಯ ಗಣೇಶ ನಗರದಲ್ಲಿ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರವಿಂದ ಡೆಂಕಿ, ಶಿವಪುತ್ರಪ್ಪ ಡೆಂಕಿ, ಮಹೇಬೂಬ್ ಮಂಜೂರ್ ಅಲಿ ಶೇಕ್ ಮತ್ತು ಮದನ್‌ಗೋಪಾಲ್ ಬಂಧಿತ ಆರೋಪಿಗಳು.

ಕಲಬುರಗಿ
ಕಲಬುರಗಿ

ಕಲಬುರಗಿ : ಮಾರ್ಚ್ 3 ರಂದು ನಗರದ ಪಿಎನ್‌ಟಿ ಬಡಾವಣೆಯ ಗಣೇಶ ನಗರದಲ್ಲಿ ಪ್ರೀತಂ ಬನ್ನಿಕಟ್ಟಿ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳು

ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜೇವರ್ಗಿ ಕಾಲೋನಿ ನಿವಾಸಿ ಅರವಿಂದ ಡೆಂಕಿ, ಶಿವಪುತ್ರಪ್ಪ ಡೆಂಕಿ, ಮಹೇಬೂಬ್ ಮಂಜೂರ್ ಅಲಿ ಶೇಕ್ ಮತ್ತು ಮದನ್‌ಗೋಪಾಲ್ ಸೇರಿದಂತೆ ನಾಲ್ವರನ್ನ ಪೊಲೀಸರು ‌ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕು, ಸ್ಕೂಟಿ ಮತ್ತು ಪಲ್ಸರ್ ಬೈಕ್‌ನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣದ ಕುರಿತು ಡಿಸಿಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ

ಅನ್ಯ ಧರ್ಮದ ಯುವತಿ ಪ್ರೀತಿಸಿದಕ್ಕೆ ಕೊಲೆ :ಕೊಲೆಯಾದ ಯುವಕ ಪ್ರೀತಂ ಬನ್ನಿಕಟ್ಟಿ, ಅನ್ಯ ಧರ್ಮದ ಯುವತಿಯಾದ ಜೇವರ್ಗಿ ಕಾಲೋನಿ ನಿವಾಸಿ ಶಿವಪುತ್ರಪ್ಪ ಡೆಂಕಿ ಎಂಬಾತರ ಮೊಮ್ಮಗಳನ್ನ ಪ್ರೀತಿಸಿ ಮನೆಯಿಂದ ಓಡಿಹೋಗಿ ಮದುವೆಯಾಗಿದ್ದರು.

ಮದುವೆಯಾದ ನಂತರ ಪ್ರೀತಂ ಮತ್ತು ಸುಶ್ಮೀತಾ ಬೆಂಗಳೂರನಲ್ಲಿ ವಾಸವಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಕಲಬುರಗಿಗೆ ಆಗಮಿಸಿದ್ದರು. ಇವರನ್ನ ನೋಡಿ ಆಕ್ರೋಶಗೊಂಡ ಸುಶ್ಮಿತಾಳ ಚಿಕ್ಕಪ್ಪ ಪ್ರೀತಂನನ್ನ ಮನೆ ಸಮೀಪವೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

TAGGED:

ABOUT THE AUTHOR

...view details