ಕರ್ನಾಟಕ

karnataka

ಮತ್ತೆ ಮೂರು ದಿನ ಭಾರಿ ಮಳೆ ಸಾಧ್ಯತೆ; ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಲು ಸೂಚನೆ

By

Published : Oct 20, 2020, 9:33 PM IST

22ರವರೆಗೆ ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಜನರು ನದಿ ಸಮೀಪ ತೆರಳದಂತೆ ಸೂಚನೆ ನೀಡಲಾಗಿದೆ..

Three days heavy rain again
ತಹಶೀಲ್ದಾರ್​​ ಬಸವರಾಜ ಬೆಣ್ಣೆಶಿರೂರ

ಸೇಡಂ: ಕೆಲ ದಿನಗಳ ಹಿಂದಷ್ಟೇ ಭಾರಿ ಮಳೆಯಿಂದ ಆಘಾತಕ್ಕೆ ಒಳಗಾಗಿದ್ದ ಸೇಡಂ ತಾಲೂಕಿನಲ್ಲಿ ಈಗ ಮತ್ತೆ ವರುಣನ ಅಬ್ಬರದ ಮುನ್ಸೂಚನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ತಹಶೀಲ್ದಾರ್​​ ಬಸವರಾಜ ಬೆಣ್ಣೆಶಿರೂರ ಕೋರಿದ್ದಾರೆ.

ಇಂದಿನಿಂದ 22ರವರೆಗೆ ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಕೇಂದ್ರಸ್ಥಾನದಲ್ಲಿರಲು ಸೂಚಿಸಿದ್ದಾರೆ. ಅಲ್ಲದೆ ಜನರು ಸಹ ನದಿ ಸಮೀಪ ತೆರಳದಂತೆ ಕೋರಿದ್ದಾರೆ. ಪ್ರವಾಹದಿಂದ ಆಗಿರುವ ನೆರೆ ಪರಿಹಾರ, ಇತ್ಯಾದಿ ಕೆಲಸಗಳನ್ನು ಶೀಘ್ರ ಮುಗಿಸಲು ಕಾರ್ಯ ಪ್ರವೃತ್ತರಾಗಲು ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಸಮಸ್ಯೆಯಾದಲ್ಲಿ ಇವರನ್ನು ಸಂಪರ್ಕಿಸಬಹುದು:

  • ಮಳಖೇಡ ಜೆ ಮತ್ತು ಬಿಜನಳ್ಳಿ ಗ್ರಾಮ - ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ ಮೋತಕಪಲ್ಲಿ ಮೊ. 7975636269
  • ಮೀನಹಾಬಾಳ, ಬೀರನಹಳ್ಳಿ ಗ್ರಾಮ - ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಮೊ. 9449639015
  • ಅರೆಬೊಮ್ನಳ್ಳಿ, ಕಾಚೂರ, ಬಿಬ್ಬಳ್ಳಿ, ಕುಕ್ಕುಂದಾ ಗ್ರಾಮ - ಸಣ್ಣ ನೀರಾವರಿ ಇಲಾಖೆಯ ಬಾಲರೆಡ್ಡಿ ಮುನ್ನೂರ ಮೊ. 9448586349
  • ಸಮಖೇಡ ತಾಂಡಾ ಗ್ರಾಮ - ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೊ. 9663106010
  • ತೆಲ್ಕೂರ, ಸಟಪಟನಹಳ್ಳಿ, ಯಡ್ಡಳ್ಳಿ, ಲೋಹಾಡ ಗ್ರಾಮ - ಪಂಚಾಯತರಾಜ ಇಲಾಖೆಯ ಶರಣಬಸಪ್ಪ ಮೊ. 9901542953
  • ತೊಟ್ನಳ್ಳಿ, ಸಂಗಾವಿ ಎಂ ಗ್ರಾಮ - ತೋಟಗಾರಿಕೆ ಎಡಿ ಅವಿನಾಶ ರ‍್ಯಾಗಿ ಮೊ. 9731439282ಗೆ ಸಂಪರ್ಕಿಸಲು ಕೋರಲಾಗಿದೆ.

ABOUT THE AUTHOR

...view details