ಕರ್ನಾಟಕ

karnataka

ಅನುದಾನಿತ ಶಾಲೆಯ ವೇತನ ಬಿಡುಗಡೆಗೆ ಲಂಚ: ಎಸಿಬಿ ಬಲೆಗೆ ಬಿದ್ದ ಅಫ್ಜಲಪುರ ಬಿಇಒ

By

Published : Jun 15, 2022, 3:04 PM IST

ಅನುದಾನಿತ ಶಾಲೆಯೊಂದರ ಎರಡು ತಿಂಗಳದ 6 ಲಕ್ಷ ರೂಪಾಯಿ ವೇತನ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟ ಅಫ್ಜಲಪುರ ಬಿಇಒ ಎಸಿಬಿ ಬಲೆ ಬಿದ್ದಿದ್ದಾರೆ.

Afzalpur beo trapped by acb
ಎಸಿಬಿ ಬಲೆಗೆ ಬಿದ್ದ ಅಫಜಲಪುರ ಬಿಇಓ

ಕಲಬುರಗಿ: ಅನುದಾನಿತ ಶಾಲೆಯ ವೇತನ ಬಿಡುಗಡೆಗೆ ಅಫ್ಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎಚ್.ಎಸ್.ದೇಶಮುಖ ಅವರು ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಹೇರೂರ ಗ್ರಾಮದ ಅನುದಾನಿತ ಶಾಲೆಯ ಎರಡು ತಿಂಗಳ ಆರು ಲಕ್ಷ ರೂಪಾಯಿ ವೇತನ ಬಿಡುಗಡೆಗೆ ಶಿಕ್ಷಕ ರಾಜಶೇಖರ ಖಿಲಾರಿ ಎಂಬವರಿಂದ ಇವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಪಡೆಯಲು ಈ ಅಧಿಕಾರಿ ಅಫ್ಜಲಪುರದಿಂದ ಕಲಬುರಗಿಗೆ ಬಂದಿದ್ದು, ಹೋಟೆಲ್​ವೊಂದರ ಬಳಿ 15 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಅಕ್ರಮ : ಬ್ಯಾಡರಹಳ್ಳಿ ಸಬ್ ಇನ್‌ಸ್ಪೆಕ್ಟರ್​ನನ್ನು ಬಂಧಿಸಿದ ಸಿಐಡಿ ಅಧಿಕಾರಿಗಳು!

ABOUT THE AUTHOR

...view details