ಕರ್ನಾಟಕ

karnataka

ರಸ್ತೆ ದಾಟುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ಟ್ಯಾಂಕರ್​​: ಬಾಲಕ ಸ್ಥಳದಲ್ಲೇ ಮೃತ

By

Published : Nov 29, 2019, 5:44 PM IST

ಎಂಟು ವರ್ಷದ ಬಾಲಕನೋರ್ವ ಬಿಸ್ಕತ್​ ತರಲೆಂದು ಅಂಗಡಿಗೆ ತೆರಳುತ್ತಿದ್ದ ವೇಳೆ ಟ್ಯಾಂಕರ್​​ ಡಿಕ್ಕಿ ಹೊಡೆದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Boy died in spot
ಬಾಲಕ ಸ್ಥಳದಲ್ಲೇ ಮೃತ

ಕಲಬುರಗಿ: ರಸ್ತೆ ದಾಟುತ್ತಿದ್ದ ವೇಳೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬಾಲಕ ಸಾವನ್ನಪ್ಪಿರುವ ಘಟನೆ ಫರತಾಬಾದ್ ಬಳಿ ನಡೆದಿದೆ.

ತೆಲಂಗಾಣ ರಾಜ್ಯದ ವಿಠಲ್ ವಾಡಿ ಗ್ರಾಮದ ಅರವಿಂದ (8) ಮೃತ ದುರ್ದೈವಿ ಬಾಲಕ. ಮಗುವಿನ ಪಾಲಕರು ಕಬ್ಬು ಕಡೆಯುವ ಕೆಲಸದ ನಿಮಿತ್ತ ಕಲಬುರಗಿಗೆ ಆಗಮಿಸಿದ್ದು, ಅವರೊಂದಿಗೆ ಆಗಮಿಸಿದ ಬಾಲಕ ರಸ್ತೆ ದಾಟಿ ಬಿಸ್ಕತ್​​​​ ತರಲು ರಸ್ತೆ ದಾಟುತ್ತಿರುವ ವೇಳೆ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಕುರಿತು ಕಲಬುರ್ಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details