ಕರ್ನಾಟಕ

karnataka

ಕಲಬುರಗಿ ಬರ್ಬರ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

By

Published : Nov 13, 2019, 11:00 AM IST

ಕಲಬುರಗಿಯ ಶಿವಲಿಂಗ ಭಾವಿಕಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ರವಿ ಹೊಸಮನಿ, ರಾಜಕುಮಾರ ಮಯೂರ, ರೋಹಿತ್ ಹೊಸಮನಿ, ಲೋಹಿತ್ ಸೋಮರಾಯ ಹಾಗೂ ಗೋವಿಂದ ಕಾಂಬಳೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ: ಐವರು ಆರೋಪಿಗಳ ಬಂಧನ

ಕಲಬುರಗಿ:ಶಿವಲಿಂಗ ಭಾವಿಕಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರಿಗೆ ಕಾರಿನ ಮೂಲಕ ಡಿಕ್ಕಿ ಹೊಡೆಸಿ ಸಿನಿಮಿಯ ರೀತಿಯಲ್ಲಿ ನವೆಂಬರ್ 4 ರಂದು ಹಡಗಿಲ್ ಬಳಿ ಶಿವಲಿಂಗ ಭಾವಿಕಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈಯಲಾಗಿತ್ತು. ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಇನ್ನು ತಲೆಮರೆಸಿಕೊಂಡಿರುವ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿ ಹೊಸಮನಿ, ರಾಜಕುಮಾರ ಮಯೂರ, ರೋಹಿತ್ ಹೊಸಮನಿ, ಲೋಹಿತ್ ಸೋಮರಾಯ ಹಾಗೂ ಗೋವಿಂದ ಕಾಂಬಳೆ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ, ವಾಹನ ಮತ್ತಿತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Intro:ಕಲಬುರಗಿ: ಶಿವಲಿಂಗ ಭಾವಿಕಟ್ಟಿ ಕೊಲೆ ಪ್ರಕರಣದಲ್ಲಿ
ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ‌.
Body:ರವಿ ಹೊಸಮನಿ, ರಾಜು @ ರಾಜಕುಮಾರ ಮಯೂರ, ರೋಹಿತ್ ಹೊಸಮನಿ, ಲೋಹಿತ್ ಸೋಮರಾಯ ಹಾಗೂ ಗೋವಿಂದ ಕಾಂಬಳೆ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ, ವಾಹನ ಮತ್ತಿತರ ವಸ್ತು ಜಪ್ತಿ ಮಾಡಲಾಗಿದೆ.

ಕಾರಿಗೆ ಕಾರಿನ ಮೂಲಕ ಢಿಕ್ಕಿ ಹೊಡೆಸಿ ಸಿನೀಮಿಯಾ ರೀತಿಯಲ್ಲಿ ನವೆಂಬರ್ 04 ರಂದು ಹಡಗಿಲ್ ಬಳಿ ಶಿವಲಿಂಗ ಭಾವಿಕಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈಯಲಾಗಿತ್ತು. ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿದೆ. ತಲೆಮರೆಸಿಕೊಂಡಿರುವ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:

ABOUT THE AUTHOR

...view details