ಕರ್ನಾಟಕ

karnataka

ಸಿಎಂ ಬೆದರಿಸೋ ತಂತ್ರ ಒಳ್ಳೆಯದಲ್ಲ: ವಚನಾನಂದ ಶ್ರೀ ನಡೆಗೆ ನಿಡುಮಾಮಿಡಿ ಶ್ರೀ ಬೇಸರ

By

Published : Jan 15, 2020, 7:23 PM IST

ಹರಿಹರದ ಪಂಚಮಸಾಲಿ ಮಠದ ವನಾಚನಂದ ಸ್ವಾಮೀಜಿ ಸಿಎಂ ಯಡಿಯೂರಪ್ಪ ಜೊತೆ ನಡೆದುಕೊಂಡ ರೀತಿಗೆ ನಿಡುಮಾಮಿಡಿ ಮಠದ ಚನ್ನಮಲ್ಲವೀರಭದ್ರ ಮಹಾಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Nidumamidi sri
ನಿಡುಮಾಮಿಡಿ ಶ್ರೀ

ಹಾವೇರಿ:ಹರಿಹರದ ಪಂಚಮಸಾಲಿ ಶ್ರೀ ಸಿಎಂ ಯಡಿಯೂರಪ್ಪ ಜೊತೆ ನಡೆದುಕೊಂಡ ರೀತಿಗೆ ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ಮಹಾಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಚನ್ನಮಲ್ಲ ವೀರಭದ್ರ ಮಹಾ ಸ್ವಾಮೀಜಿ

ಹಾವೇರಿ ತಾಲೂಕಿನ ನರಸೀಪುರದಲ್ಲಿ ನಡೆದ ಅಂಬಿಗರ ಚೌಡಯ್ಯ ಪೀಠದಲ್ಲಿ ನಡಿತಿರೋ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಕಂಡಂತಹ ಅಂತಃಕರಣ ಇರುವಂತಹ ಮುಖ್ಯಮಂತ್ರಿ ಯಡಿಯೂರಪ್ಪ. ಅವರು ಯಾವತ್ತೂ ಕೋಮುವಾದ ಮಾಡಿಲ್ಲಾ. ಮಠ ಮಾನ್ಯಗಳಿಗೆ ದರ್ಪ, ದಬ್ಬಾಳಿಕೆಯಿಂದ ಆದೇಶ ಮಾಡೋದು ಗುರುಗಳ ಕೆಲಸವಲ್ಲ. ಮುಖ್ಯಮಂತ್ರಿಗಳನ್ನ ಬೆದರಿಸೋ ತಂತ್ರ ಒಳ್ಳೆಯದಲ್ಲ. ಸಂಖ್ಯಾಬಲದಿಂದ, ಅಧಿಕಾರ ಬಲದಿಂದ ಸಿಎಂರನ್ನ ನಿಯಂತ್ರಣ ಮಾಡ್ತೀವಿ ಅನ್ನೋದು ಸರಿಯಲ್ಲ ಎಂದು ವಚನಾನಂದ ಸ್ವಾಮೀಜಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಧಾನಿ, ಸಿಎಂರನ್ನು ಸ್ವಾಮೀಜಿಗಳು ಅವರ ಎತ್ತರದ ಕೆಳಗೆ ಕೂರಿಸಬಾರದು. ನಮ್ಮ ಸಿಎಂರನ್ನ ಕಡಿಮೆ‌ ಎತ್ತರದಲ್ಲಿ ಕೂರಿಸಿದರೆ ನಾವು ಅವಮಾನ ಮಾಡ್ತಿದ್ದೇವೆ ಅನಿಸುತ್ತೆ. ತಿಳಿದೋ, ತಿಳಿಯದೆಯೋ ಯಡಿಯೂರಪ್ಪ ಕೆಲವು ತಪ್ಪುಗಳನ್ನ ಮಾಡಿದ್ದಾರೆ. ನಿಮಗೆ ಕೆಟ್ಟ ಹೆಸರು ತರೋರನ್ನ ಆದಷ್ಟು ದೂರವಿಡಿ. ಇತಿಹಾಸದಲ್ಲಿ ಹೆಸರು ಅಜರಾಮರ ಆಗಿರುವಂತಹ ಕೆಲಸ ಮಾಡಿ. ಬಲಿಷ್ಠರಿಗೆ ಬಾಗಬೇಡಿ, ದಮನಿತರ ಧ್ವನಿಯಾಗಿ. ನಿಮ್ಮ ಸಹನೆ, ತಾಳ್ಮೆಯನ್ನ ಕೆಲವರು ದುರುಪಯೋಗ ಮಾಡಿಕೊಳ್ತಿದ್ದಾರೆ ಅಂತವರಿಗೆ ತಕ್ಕ ಪಾಠ ಕಲಿಸಿ ಎಂದು ಸಿಎಂಗೆ ಸಲಹೆ ನೀಡಿದರು.

Intro:Body:

hvr swamiji


Conclusion:

ABOUT THE AUTHOR

...view details