ಕರ್ನಾಟಕ

karnataka

ಸಿಎಂ ಬೊಮ್ಮಾಯಿಗೆ ಅವಾಚ್ಯ ಪದಗಳಿಂದ ನಿಂದನೆ: ವಿಷಾದ ವ್ಯಕ್ತಪಡಿಸಿದ ಓಲೇಕಾರ್

By

Published : Apr 16, 2023, 6:51 PM IST

Updated : Apr 16, 2023, 7:01 PM IST

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದೇನೆ. ಇದರಿಂದ ಯಾವುದೇ ಸಮಾಜ, ಸಮುದಾಯಕ್ಕೆ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಾಸಕ ನೆಹರು ಓಲೇಕಾರ್ ತಿಳಿಸಿದ್ದಾರೆ.

ಶಾಸಕ ನೆಹರು ಓಲೇಕಾರ್
ಶಾಸಕ ನೆಹರು ಓಲೇಕಾರ್

ಶಾಸಕ ನೆಹರು ಓಲೇಕಾರ್ ವಿಷಾದ

ಹಾವೇರಿ : ಶಾಸಕ ನೆಹರು ಓಲೇಕಾರ್ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಹಾವೇರಿಯಲ್ಲಿ ಮಾತನಾಡಿದ ಅವರು, ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಸಿಎಂಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೇನೆ. ಇದರಿಂದಾಗಿ ಯಾವುದೇ ಸಮಾಜ, ಸಮುದಾಯದ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ತಿಳಿಸಿದರು.

ನಾನು ಸಿಎಂ ಬೊಮ್ಮಾಯಿಗೆ ಬೈದಿರುವುದು ಎಲ್ಲರಿಗೂ ಗೊತ್ತಿದೆ. ಅವರು ನನ್ನ ಬಗ್ಗೆ ಮಾತನಾಡಿದ್ದಾರೆ. ನಮ್ಮ ಬಳಿಯೂ ಸಾಕ್ಷಿಗಳಿವೆ. ಅವರ ಮಾತು ಕೇಳಿಸಿಕೊಂಡು ನಾವು ಕೂಡಾ ಎಮೋಷನಲ್ ಆಗಿ ಮಾತನಾಡಬೇಕಾಯಿತು ಎಂದರು. ನಮ್ಮ ಹುಡುಗ್ರು ಅವರ ಬಳಿ ಹೋಗಿ ಫೋನ್ ಕೊಡಲು ಹೋದಾಗ ಅವಾಚ್ಯವಾಗಿ ಮಾತನಾಡಿದ್ದಾರೆ. ಇನ್ನೂ ಬೇರೆ ಬೇರೆ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಮೊದಲಿನಿಂದಲೂ ದ್ವೇಷ ಸಾಧನೆ ಮಾಡಿರುವುದರಿಂದ ಇಂತಹ ಹೇಳಿಕೆ ಬಂದಿದೆಯೇ ಹೊರತು ವೈಯಕ್ತಿಕವಾಗಿ ಬರುವಂಥದ್ದಲ್ಲ ಎಂದು ತಿಳಿಸಿದರು. ಈ ಕುರಿತಂತೆ ಆಣೆ ಪ್ರಮಾಣ ಮಾಡಲು ಸಿಎಂ ಬೊಮ್ಮಾಯಿ ಬರಲಿ ಎಂದು ನೆಹರು ಓಲೇಕಾರ್ ಸವಾಲು ಹಾಕಿದ್ದಾರೆ.

ಕಾರ್ಯಕರ್ತರು ಮತ್ತು ಬೆಂಬಲಿಗರ ಸಭೆ ನಡೆಸಿದ್ದೇನೆ. ರವಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಮುಂದೆ ನೀಡುತ್ತೇನೆ. ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ನಾನು ಜೆಡಿಎಸ್‌ನಿಂದ ಸ್ಪರ್ಧಿಸಬೇಕಾ ಅಥವಾ ಪಕ್ಷೇತರನಾಗಿ ಸ್ಪರ್ಧಿಸಬೇಕಾ ಎಂಬುದರ ಕುರಿತಂತೆ ಗೊಂದಲವಿದೆ ಎಂದರು.

ಗೊಂದಲ ಬಗೆಹರಿದ ನಂತರ ಶಾಸಕ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ನೆಹರು ಓಲೇಕಾರ್ ತಿಳಿಸಿದರು. ತಮ್ಮ ವಿರುದ್ಧ ಸಿಎಂ ಅಭಿಮಾನಿಗಳು, ಬಿಜೆಪಿಯ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವಿಚಾರ ಕುರಿತಂತೆ ಮಾತನಾಡಿ, ನನಗೂ ಅಭಿಮಾನಿಗಳಿದ್ದಾರೆ, ನನಗೂ ಬೆಂಬಲಿಗರಿದ್ದಾರೆ, ನಾನೂ ಪ್ರತಿಭಟನೆ ನಡೆಸಬಹುದಲ್ಲ ಎಂದು ತಿಳಿಸಿದರು.

ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ನೆಹರು ಓಲೇಕಾರ್ ಸಿಎಂಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ಹಾವೇರಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ರವಿವಾರ ಪ್ರತಿಭಟನೆ ನಡೆಸಿದ್ದಾರೆ. ಹಾವೇರಿ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೆಹರು ಓಲೇಕಾರ್ ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಕೆಲ ಕಾರ್ಯಕರ್ತರು ಓಲೇಕಾರ್ ಮನೆಗೆ ಮುತ್ತಿಗೆ ಹಾಕಲು ಮುಂದಾದರು. ಪೊಲೀಸರು ಕಾರ್ಯಕರ್ತರನ್ನ ತಡೆದರು.

ಇದನ್ನೂ ಓದಿ:ಬಿಜೆಪಿ ಶಾಸಕ ಸ್ಥಾನಕ್ಕಿಂದು ನೆಹರು ಓಲೇಕಾರ್​ ರಾಜೀನಾಮೆ: ಜೆಡಿಎಸ್ ಸೇರೋದಾಗಿ ಹೇಳಿಕೆ

Last Updated :Apr 16, 2023, 7:01 PM IST

ABOUT THE AUTHOR

...view details