ಕರ್ನಾಟಕ

karnataka

ಸಿದ್ದರಾಮಯ್ಯ ಮನೆಯಲ್ಲಿ ಎಷ್ಟು ಹಣ ಸಿಗಬಹುದು?: ಸಚಿವ ಬಿ.ಸಿ ಪಾಟೀಲ್

By

Published : Mar 19, 2023, 2:31 PM IST

ಐಟಿ ದಾಳಿ ಮಾಡಿದರೆ ಸಾವಿರ ಕೋಟಿ ರೂಪಾಯಿ ಸಿಗುತ್ತದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

Minister BC Patil
ಸಚಿವ ಬಿ.ಸಿ ಪಾಟೀಲ್

ಸಚಿವ ಬಿ.ಸಿ.ಪಾಟೀಲ್

ಹಾವೇರಿ:ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆ ಮೇಲೆ ಐಟಿ ದಾಳಿ ಮಾಡಿದರೆ ಸಾವಿರ ಕೋಟಿ ರೂಪಾಯಿ ಸಿಗುತ್ತದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಸಚಿವರು (ಬಿ.ಸಿ.ಪಾಟೀಲ್) ತಿರುಗೇಟು ನೀಡಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿ, ಒಬ್ಬ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮನೆಯಲ್ಲಿ ಎಷ್ಟು ಹಣ ಸಿಗಬಹುದು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, "ಅವರಿಗೆ ಎಲ್ಲೂ ಗ್ಯಾರಂಟಿ ಇಲ್ಲ. ಅದಕ್ಕೆ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಅನುಮಾನ. ಸಿದ್ದರಾಮಯ್ಯ ಗ್ಯಾರಂಟಿ ಕಾರ್ಡ್ ಅಂತಾರೆ. ಆದರೆ ಅವರ ಕ್ಷೇತ್ರವೇ ಗ್ಯಾರಂಟಿ ಇಲ್ಲ" ಎಂದು ಪಾಟೀಲ್ ವ್ಯಂಗ್ಯವಾಡಿದರು. ತಾಲೂಕಿಗೆ ಈಗಾಗಲೇ ವಿವಿಧ ಅಭಿವೃದ್ಧಿ ಕೆಲಸ ಬಂದಿದೆ. ಕೃಷಿ ಇಲಾಖೆಯಿಂದ ರೈತ ಶಕ್ತಿ ಯೋಜನೆಯಡಿ ರೈತರಿಗೆ, ರೈತರ ಮಕ್ಕಳಿಗೆ ವಿವಿಧ ಯೋಜನೆ ನೀಡಲಾಗುತ್ತಿದೆ. ನಮ್ಮದು ಗ್ಯಾರಂಟಿ ಕಾರ್ಡ್ ಅಲ್ಲ. ನಮ್ಮದು ಅಭಿವೃದ್ಧಿ ಕಾರ್ಡ್. ಅದಕ್ಕೆ ನಾವು ಅಭಿವೃದ್ಧಿ ಕಾರ್ಡ್ ಮೂಲಕ ಮತ ಕೇಳುತ್ತಿದ್ದೇವೆ" ಎಂದರು.

ರಟ್ಟಿಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ಮಾತನಾಡಿದ ಪಾಟೀಲ್, "ನಾವು ಯಾರಿಗೊ ಕಲ್ಲು ಹೊಡೆಯಿರಿ ಎಂದು ಹೇಳಿಲ್ಲ. ಬಿಜೆಪಿ ಶಿಸ್ತಿನ ಪಕ್ಷ" ಎಂದು ಹೇಳಿದರು.

'ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ': "ಗೆದ್ದ ಕ್ಷೇತ್ರದಲ್ಲಿಯೇ ಒಳ್ಳೆಯ ಕೆಲಸ ಮಾಡಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್​​ ನಿರಾಣಿ ಟೀಕಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಬಾದಾಮಿಯಲ್ಲಿ ಸಿದ್ಧರಾಮಯ್ಯ ನನ್ನ ಜೊತೆ ಪಾಲುದಾರರಾಗಿದ್ದಾರೆ. ಬಾದಾಮಿ ತಾಲೂಕಿನ ಮೂರನೇ ಒಂದು ಭಾಗ ನನ್ನ ಕ್ಷೇತ್ರಕ್ಕೆ ಒಳಪಟ್ಟಿದ್ದು, ಇನ್ನೆರಡು ಭಾಗ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರಕ್ಕೆ ಸೇರಿದೆ. ಆ ಕ್ಷೇತ್ರದಲ್ಲೇ ಉತ್ತಮ ಕೆಲಸ ಮಾಡಿದ್ದರೆ ಕ್ಷೇತ್ರ ಬಿಟ್ಟು ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಇದೀಗ ಕೋಲಾರದಲ್ಲೂ ಗೆಲ್ಲುವುದು ಖಾತ್ರಿ ಇಲ್ಲ ಎಂದಾಗ ಮತ್ತೆ ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿಯೂ ಅವರು ನಿಲ್ಲೋದು ಗ್ಯಾರಂಟಿ ಇಲ್ಲ" ಎಂದು ಟೀಕಿಸಿದರು.

ಇದನ್ನೂ ಓದಿ:ಒಳ್ಳೆ ಕೆಲಸ ಮಾಡಿದ್ದರೆ ಸಿದ್ದರಾಮಯ್ಯಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ: ಸಚಿವ ​​ನಿರಾಣಿ

ಆರ್​. ಅಶೋಕ್ ವ್ಯಂಗ್ಯ: "ನನಗಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಇನ್ನೂ ಕೂಡ ಅವರು ಅಲೆಯಬೇಕಿದೆ, ನನ್ನ ಪ್ರಕಾರ ರಾಜ್ಯದ 224 ಕ್ಷೇತ್ರಗಳು ಕೂಡ ಅವರಿಗೆ ಸೇಫ್ ಅಲ್ಲ. ಅವರು ಅಫ್ಘಾನಿಸ್ತಾನ, ಇರಾನ್ ಅಥವಾ ಇರಾಕಿಗೆ ಹೋದರೆ ಒಳ್ಳೆಯದು. ಎಲ್ಲಿಯವರೆಗೆ ಅವರು ಟಿಪ್ಪು ಟಿಪ್ಪು ಎಂದು ಹೇಳುತ್ತಾರೆಯೋ ಅಲ್ಲಿಯವರೆಗೂ ಅವರಿಗೆ ಕರ್ನಾಟಕ ಸೇಫ್ ಅಲ್ಲ. ಟಿಪ್ಪು ಎಂದು ಹೇಳುವುದನ್ನು ಬಿಟ್ಟರೆ ಅವರಿಗೆ ಕರ್ನಾಟಕದಲ್ಲಿ ಎಲ್ಲಿಯಾದರೂ ಒಂದು ಸುರಕ್ಷಿತವಾದ ಕ್ಷೇತ್ರ ಲಭಿಸಲಿದೆ. ಎಲ್ಲಿವರೆಗೂ ಟಿಪ್ಪುನನ್ನು ಬಿಡಲ್ಲ, ಶಾದಿ ಭಾಗ್ಯವನ್ನು ಬಿಡಲ್ಲ ಅಲ್ಲಿವರೆಗೂ ಅವರು ಗೆಲ್ಲಲ್ಲ" ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ: ಆರ್​ ಅಶೋಕ್

ABOUT THE AUTHOR

...view details