ಕರ್ನಾಟಕ

karnataka

ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉತ್ಸುಕನಾಗಿದ್ದೇನೆ : ಡಾ.ಮಹೇಶ ಜೋಶಿ

By

Published : Feb 11, 2022, 7:04 PM IST

ಶಿಸ್ತು ಮತ್ತು ವೈವಿಧ್ಯತೆಯಲ್ಲಿ ಹೆಸರಾಗುವಂತೆ ಹಾವೇರಿಯಲ್ಲಿ ಎಲ್ಲ ವರ್ಗದವರನ್ನ, ಸಮುದಾಯದವರನ್ನ ಜೊತೆಯಾಗಿ ಕರೆದುಕೊಂಡು ಸಮ್ಮೇಳನ ಮಾಡಲಾಗುವುದು. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ನಿಧನರಾದ ಬಳಿಕ ರಾಷ್ಟ್ರಕವಿ ಪದವಿ ಖಾಲಿ ಇದೆ. ಈ ಕುರಿತಂತೆ ಆಯ್ಕೆ ಸಮಿತಿ ಸಹ ರಚಿಸಲಾಗಿತ್ತು ಎಂದು ಜೋಶಿ ತಿಳಿಸಿದರು..

Mahesh Joshi talks over  AKhil Bharat Kannada Sahitya Sammelana
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ

ಹಾವೇರಿ :ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉತ್ಸುಕನಾಗಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಆದಷ್ಟು ಶೀಘ್ರ ಸಮ್ಮೇಳನ ನಡೆಸಲು ತೀರ್ಮಾನಿಸಲಾಗುವುದು. ರಾಜ್ಯದ ಮುಖ್ಯಮಂತ್ರಿಗಳು ಹಾವೇರಿ ಜಿಲ್ಲೆಯವರು. ಕಸಾಪ ರಾಜ್ಯಾಧ್ಯಕ್ಷ ನಾನು ಸಹ ಹಾವೇರಿಯವನಾಗಿದ್ದು, ಇದು ದೈವ ಸಂಕಲ್ಪವಾಗಿದೆ ಎಂದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಡಾ. ಮಹೇಶ್ ಜೋಶಿ ಮಾತನಾಡಿರುವುದು..

ಸಮ್ಮೇಳನ ನಡೆಸುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿದ್ದೇನೆ. ಸಿಎಂ ಬೊಮ್ಮಾಯಿ ಬಜೆಟ್ ಆದ ನಂತರ, ಕೊರೊನಾ ನಿಯಮಗಳು ಸಡಿಲಿಕೆಯಾದ ನಂತರ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಂತೆ ಮಾತನಾಡಿದ್ದಾರೆ ಎಂದು ಜೋಶಿ ತಿಳಿಸಿದರು.

ಶಿಸ್ತು ಮತ್ತು ವೈವಿಧ್ಯತೆಯಲ್ಲಿ ಹೆಸರಾಗುವಂತೆ ಹಾವೇರಿಯಲ್ಲಿ ಎಲ್ಲ ವರ್ಗದವರನ್ನ, ಸಮುದಾಯದವರನ್ನ ಜೊತೆಯಾಗಿ ಕರೆದುಕೊಂಡು ಸಮ್ಮೇಳನ ಮಾಡಲಾಗುವುದು. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ನಿಧನರಾದ ಬಳಿಕ ರಾಷ್ಟ್ರಕವಿ ಪದವಿ ಖಾಲಿ ಇದೆ. ಈ ಕುರಿತಂತೆ ಆಯ್ಕೆ ಸಮಿತಿ ಸಹ ರಚಿಸಲಾಗಿತ್ತು ಎಂದು ಜೋಶಿ ತಿಳಿಸಿದರು.

ಬೆಳಕಿನ ಕವಿ ಡಾ.ಚೆನ್ನವೀರ ಕಣವಿ ಅವರಿಗೆ ರಾಷ್ಟ್ರಕವಿ ಪದವಿ ದೊರೆಯಬೇಕು ಎಂಬುದು ಸಾಹಿತ್ಯ ಪರಿಷತ್​​ನ ಮಹದಾಸೆ. ವೈಯಕ್ತಿಕವಾಗಿ ಸಹ ಆ ಪದವಿ ಕಣವಿಯವರಿಗೆ ಸಲ್ಲಬೇಕು ಎನ್ನುವುದು ನನ್ನ ಆಶಯ. ಆದರೆ, ಕಣವಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೊನೆಯ ಪಕ್ಷ ಅವರು ರಾಷ್ಟ್ರಕವಿಯಾಗಿ ಕೊನೆಯುಸಿರೆಳೆಯುವ ಅವಕಾಶವಾದರೂ ನೀಡಬೇಕು ಎಂದು ಡಾ.ಮಹೇಶ್ ಜೋಶಿ ಅಭಿಪ್ರಾಯಪಟ್ಟರು.

ಇದೇ ವೇಳೆ ರಾಜ್ಯದಲ್ಲಿ ಸಮವಸ್ತ್ರ ವಿವಾದ ನ್ಯಾಯಲಯದಲ್ಲಿದೆ. ಈ ಕುರಿತಂತೆ ನಾನು ಮಾತನಾಡುವದಿಲ್ಲ. ಆದರೆ, ನ್ಯಾಯಾಲಯದ ಆದೇಶವನ್ನ ಎಲ್ಲರೂ ಪಾಲಿಸಬೇಕಾಗಿರುವುದು ಕರ್ತವ್ಯ. ವಿವಾದ ಹೈಕೋರ್ಟ್‌ನಲ್ಲಿರುವಾಗ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು, ಸರಿಯಾದ ಮಾರ್ಗವಲ್ಲ ಎಂದು ಜೋಶಿ ಹೇಳಿದರು.

ಇದನ್ನೂ ಓದಿ:8 ವರ್ಷಗಳ ಬಳಿಕ ಕಲಬುರಗಿಯಲ್ಲಿ 371(ಜೆ) ಸಂಪುಟ ಉಪ ಸಮಿತಿ ಸಭೆ: ಹಲವು ಸಚಿವರು ಗೈರು

ABOUT THE AUTHOR

...view details