ಕರ್ನಾಟಕ

karnataka

ಹಾವೇರಿ: ಅತ್ತಿಗೆಯನ್ನು ಕೊಂದು ನೇಣಿಗೆ ಶರಣಾದ ನಾದಿನಿ

By

Published : Oct 31, 2021, 1:08 PM IST

ಹಾವೇರಿಯಲ್ಲಿ ಅತ್ತಿಗೆಯನ್ನು ಕೊಲೆ ಮಾಡಿ ನಾದಿನಿ ನೇಣಿಗೆ ಶರಣಾಗಿದ್ದಾಳೆ.

haveri murder and suicide case
ಹಾವೇರಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ

ಹಾವೇರಿ: ಅತ್ತಿಗೆಯನ್ನು ಹೊಡೆದು ಕೊಲೆ ಮಾಡಿ ಬಳಿಕ ನಾದಿನಿ ನೇಣಿಗೆ ಶರಣಾದ ಘಟನೆ ಶಿಗ್ಗಾವಿಯ ಮ್ಯಾಗೇರಿ ಓಣಿಯಲ್ಲಿ ನಡೆದಿದೆ. ಜಯಶ್ರೀ ಪಾಟೀಲ (66) ಕೊಲೆಯಾದ ಅತ್ತಿಗೆಯಾಗಿದ್ದು, ಮಂಜುಳಾ ಪಾಟೀಲ (50) ಕೊಲೆ ಮಾಡಿ ನೇಣಿಗೆ ಶರಣಾಗಿರುವ ನಾದಿನಿ.

ಹಾವೇರಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ

ಮಂಜುಳಾ ಮನೆಯಲ್ಲಿದ್ದ ಸುತ್ತಿಗೆಯಿಂದ ಜಯಶ್ರಿ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. 'ಪೊಲೀಸರೊಂದಿಗೆ ನಾಲ್ಕು ಜನ ಊರವರನ್ನು ಕರೆದುಕೊಂಡು ಬಾಗಿಲು ಒಡೆದು ಒಳಗೆ ಬನ್ನಿರಿ' ಅಂತ ಬರೆದ ಹಾಳೆಯನ್ನು ಬಾಗಿಲಿಗೆ ನೇತು ಹಾಕಿ ಮಂಜುಳಾ ನೇಣಿಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.

'ಪೊಲೀಸರೊಂದಿಗೆ ನಾಲ್ಕು ಜನ ಊರವರನ್ನು ಕರೆದುಕೊಂಡು ಬಾಗಿಲು ಒಡೆದು ಒಳಗೆ ಬನ್ನಿರಿ' - ಬಾಗಿಲಲ್ಲಿ ಸಿಕ್ಕಿದ ಪತ್ರ

ಇದನ್ನೂ ಓದಿ:ಪುನೀತ್ ಅಂತ್ಯಸಂಸ್ಕಾರದ ಬಳಿಕ ಕಂಠೀರವ ಸ್ಟುಡಿಯೋ ಬಳಿ ಕರಗಿದ ಜನದಟ್ಟಣೆ

ಸ್ಥಳಕ್ಕೆ ಶಿಗ್ಗಾಂವಿ ಡಿವೈಎಸ್ಪಿ ಕಲ್ಲೇಶಪ್ಪ ಹಾಗೂ ಸಿಪಿಐ ಬಸವರಾಜ ಹಲಬಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details