ಕರ್ನಾಟಕ

karnataka

ಶಿಗ್ಗಾಂವಿಯ ಉತ್ಸವ ರಾಕ್ ಗಾರ್ಡನ್ ರೂವಾರಿ, ಖ್ಯಾತ ಕಲಾವಿದ ಸೊಲಬಕ್ಕನವರ ನಿಧನ

By

Published : Nov 19, 2020, 8:08 AM IST

Updated : Nov 19, 2020, 8:59 AM IST

Haveri rock garden founder solabakkanavr no more
ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಇನ್ನಿಲ್ಲ

07:58 November 19

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಇನ್ನಿಲ್ಲ

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಇನ್ನಿಲ್ಲ

ಹಾವೇರಿ:ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಹಾಗೂ ಶಿಗ್ಗಾಂವಿಯ ಉತ್ಸವ ರಾಕ್ ಗಾರ್ಡನ್ ರೂವಾರಿ ಡಾ.ಟಿ.ಬಿ.ಸೊಲಬಕ್ಕನವರ(73) ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  

ಕಳೆದ ಕೆಲವು ದಿನಗಳಿಂದ ಸೊಲಬಕ್ಕನವರ ಅನಾರೋಗ್ಯದಿಂದ ಬಳಲುತ್ತಿದ್ದರು. ಅಂತಾರಾಷ್ಟ್ರೀಯ ಕಲಾವಿದರಾಗಿ ಖ್ಯಾತರಾಗಿದ್ದ ಸೊಲಬಕ್ಕನವರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.  

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮದ ಬಳಿ ಇರೋ ಜಮೀನಿನಲ್ಲಿ ಮಧ್ಯಾಹ್ನ 12 ಗಂಟೆಗೆ ಸೊಲಬಕ್ಕನವರ ಅಂತ್ಯಕ್ರಿಯೆ ನಡೆಯಲಿದೆ. 

Last Updated : Nov 19, 2020, 8:59 AM IST

TAGGED:

ABOUT THE AUTHOR

...view details