ಕರ್ನಾಟಕ

karnataka

ಶಿಡ್ಲಾಪುರ ಕೆರೆ ಭರ್ತಿ: ಜಮೀನಿಗೆ ತೆರಳಲು ರೈತರ ಹರಸಾಹಸ

By

Published : Jul 17, 2022, 3:42 PM IST

ಶಿಡ್ಲಾಪುರ ಕೆರೆ ಭರ್ತಿಯಾಗಿದ್ದು, ಕೆರೆ ಬಳಿಯ ಜಮೀನುಗಳಿಗೆ ತೆರಳಲು ರೈತರು ಹರಸಾಹಸ ಪಡುತ್ತಿದ್ದಾರೆ.

farmers facing difficulties to go their land as Shidlapura lake filled
ಶಿಡ್ಲಾಪುರ ಕೆರೆ ಭರ್ತಿ: ಜಮೀನಿಗೆ ತೆರಳಲು ರೈತರ ಹರಸಾಹಸ

ಹಾವೇರಿ: ನಿರಂತರ ಮಳೆ ಹಿನ್ನೆಲೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಕೆರೆ ತುಂಬಿದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮೀನಿಗೆ ತೆರಳಲು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಮೀನಿಗೆ ತೆರಳಲು ಸೂಕ್ತ ರಸ್ತೆ ಇಲ್ಲದ ಹಿನ್ನೆಲೆ ಕೆರೆಯ ಮೂಲಕವೇ ರೈತರು ದಾಟಿ ಜಮೀನಿಗೆ ತೆರಳುತ್ತಿದ್ದಾರೆ. ಕೆಲ ರೈತರು ತೆಪ್ಪದಲ್ಲಿ ಕುಳಿತು ಕೆರೆಯನ್ನು ದಾಟಿ ಹೋಗುತ್ತಿದ್ದಾರೆ. ಇನ್ನೂರಕ್ಕೂ ಅಧಿಕ ಎಕರೆ ಜಮೀನಿಗೆ ತೆರಳಲು ಇಪ್ಪತ್ತು ಮೀಟರ್ ದೂರದಷ್ಟು ಕೆರೆ ದಾಟಲು ರೈತರು ಹರಸಾಹಸ ಪಡುತ್ತಿದ್ದಾರೆ.

ಶಿಡ್ಲಾಪುರ ಕೆರೆ ಭರ್ತಿ: ಜಮೀನಿಗೆ ತೆರಳಲು ರೈತರ ಹರಸಾಹಸ

ಇದನ್ನೂ ಓದಿ:ಮಡಿಕೇರಿ ಜಿಲ್ಲಾ ಕಚೇರಿ ತಡೆಗೋಡೆ ಕುಸಿತ: ಮಂಗಳೂರು ಸಂಪರ್ಕಿಸುವ ಹೆದ್ದಾರಿ ಬಂದ್

ತೆಪ್ಪದ ಮೂಲಕ ಇಲ್ಲವೇ ಆಳೆತ್ತರದ ನೀರಿನಲ್ಲಿ ಈಜಿಕೊಂಡು ತಮ್ಮ ಜಮೀನಿಗೆ ಹೋಗಿ ದನಕರುಗಳಿಗೆ ಮೇವು, ಬೆಳೆದು ನಿಂತ ಫಸಲು ತರುವುದು ರೈತರಿಗೆ ಅನಿವಾರ್ಯವಾಗಿದೆ. ರೈತರ ಜಮೀನಿಗೆ ತೆರಳುವ ಮಾರ್ಗದಲ್ಲಿ ಕೆರೆಯ ನೀರು ಹರಿಯೋ ಸ್ಥಳದಲ್ಲಿ ಸಣ್ಣದೊಂದು ಸೇತುವೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ರೈತರು ಒತ್ತಾಯ ಮಾಡುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆರೆಗೆ ಭರಪೂರ ನೀರು ತುಂಬಿದಾಗ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ.

ABOUT THE AUTHOR

...view details