ಕರ್ನಾಟಕ

karnataka

ರಾಣೇಬೆನ್ನೂರಿನಲ್ಲಿ ಉಪ ಚುನಾವಣೆ ಕಾವು : ನ.13ರ ಸುಪ್ರೀಂಕೋರ್ಟ್ ತೀರ್ಪಿನತ್ತ ಮತದಾರನ ಚಿತ್ತ

By

Published : Nov 10, 2019, 9:03 PM IST

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಡಿ.5 ರಂದು ಉಪ ಚುನಾವಣೆ ನಡೆಯಲಿದ್ದು ರಾಜಕೀಯ ಮುಖಂಡರಲ್ಲಿ ಮತ್ತೆ ರಾಜಕೀಯ ಕಾವು ಜೋರಾಗಿದೆ.

ರಾಣೇಬೆನ್ನೂರಿನಲ್ಲಿ ಮತ್ತೆ ಉಪಚುನಾವಣೆ ಕಾವು ಜೋರು : ನ.13ರ ಸುಪ್ರೀಂಕೋರ್ಟ್ ತೀರ್ಪಿನತ್ತ ಮತದಾರ

ರಾಣೇಬೆನ್ನೂರು :ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಡಿ.5 ರಂದು ಉಪ ಚುನಾವಣೆ ನಡೆಯಲಿದ್ದು ರಾಜಕೀಯ ಮುಖಂಡರಲ್ಲಿ ಮತ್ತೆ ರಾಜಕೀಯ ಕಾವು ಜೋರಾಗಿದೆ.

ಸೆ.21 ರಂದು ಉಪಚುನಾವಣೆ ಘೋಷಣೆಯಾಗಿತ್ತು ಆದರೆ ಸುಪ್ರೀಂಕೋರ್ಟ್ ಅನರ್ಹ ಶಾಸಕರ ವಿಚಾರಣೆ ಅಂತಿಮ ತೀರ್ಪು ನೀಡದ ಹಿನ್ನೆಲೆಯಲ್ಲಿ, ಚುನಾವಣೆ ಆಯೋಗ ಚುನಾವಣೆಯನ್ನು ಮುಂದೂಡಿತ್ತು. ನಂತರ ಚುನಾವಣ ಆಯೋಗ ‌ ಡಿ.05 ರಂದು ಉಪಚುನಾವಣೆ ನಡೆಸುವುದಾಗಿ ದಿನಾಂಕ ಘೋಷಣೆ ಮಾಡಿದ್ದು, ರಾಣೇಬೆನ್ನೂರ ಕ್ಷೇತ್ರದಲ್ಲಿ ರಾಜಕೀಯ ಸಂಚಲನಗಳು ಹೆಚ್ಚಾಗಿವೆ.

ರಾಣೇಬೆನ್ನೂರ ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾದ ಆರ್.ಶಂಕರ್​ ಪಕ್ಷ ವಿರೋಧಿ ಚಟುವಟಿಕೆ ಅಡಿಯಲ್ಲಿ ಅನರ್ಹಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧದ ಅನರ್ಹತೆ ತೀರ್ಪು ಬಹಳ ಕುತೂಹಲ ಮೂಡಿಸಿದ್ದು, ಕ್ಷೇತ್ರದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅವರು ಪಕ್ಷಾಂತರ ಮಾಡಿಲ್ಲ, ಯಾವುದೇ ಪಕ್ಷದ ಜತೆ ಅವರು ಸೇರಿಕೊಂಡಿಲ್ಲವೆಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸುಪ್ರೀಂಕೋರ್ಟ್ ತೀರ್ಪು ಏನಾಗುತ್ತದೆ ಎಂಬುದು ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇನ್ನೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 1,18,396 ಪುರುಷ, 1,14,076 ಮಹಿಳಾ ಹಾಗೂ 13 ಇತರೆ ಮತದಾರರು ಸೇರಿ ಒಟ್ಟು 2,32,485 ಮತದಾರರಿದ್ದಾರೆ.

Intro:KN_RNR_03_BY ELECTION RANEBENNUR ASSEMBLY-KAC10001

ರಾಣೆಬೆನ್ನೂರ ನಗರದಲ್ಲಿ ಮತ್ತೆ ಉಪಚುನಾವಣೆ ಕಾವು ಜೋರು..
ನ.13 ರ ಸುಪ್ರೀಂಕೋರ್ಟ್ ತಿರ್ಪಿನತ್ತ ಮತದಾರ...

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಡಿ.5 ರಂದ ಉಪ ಚುನಾವಣೆ ನಡೆಯಲಿದ್ದು ಮತ್ತೆ ರಾಜಕೀಯ ಮುಖಂಡರಲ್ಲಿ ರಾಜಕೀಯ ಕಾವು ಜೋರಾಗಿದೆ.
ನ.11 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ರಾಣೆಬೆನ್ನೂರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತದೆಯೊ ಅಥವಾ ಇಲ್ಲವೋ ಎಂಬ ಗೊಂದಲದಲ್ಲಿರುವ ಮತದಾರನಿಗೆ ನ.13 ರಂದು ಸುಪ್ರೀಂಕೋರ್ಟ್ ಅಂತಿಮ ತಿರ್ಪಿನ ನಂತರ ಗೊತ್ತಾಗಲಿದೆ.

Body:ಸೆ.21 ರಂದು ಉಪಚುನಾವಣೆ ಘೋಷಣೆಯಾಗಿತ್ತು ಆದರೆ ಸುಪ್ರೀಂಕೋರ್ಟ್ ಅನರ್ಹ ಶಾಸಕರ ವಿಚಾರಣೆ ಅಂತಿಮ ತಿರ್ಪು ನೀಡದೆ ಹಿನ್ನೆಲೆಯಲ್ಲಿ, ಚುನಾವಣೆ ಆಯೋಗ ಚುನಾವಣೆಯನ್ನು ಮುಂದೂಡಲಾಗಿತ್ತು. ನಂತರ ಮತ್ತೆ ಚುನಾವಣೆ ಆಯೋಗ ‌ ಡಿ.05 ರಂದು ಉಪಚುನಾವಣೆ ನಡೆಸುವುದಾಗಿ ದಿನಾಂಕ ಘೋಷಣೆ ಮಾಡಿದ್ದು, ರಾಣೆಬೆನ್ನೂರ ಕ್ಷೇತ್ರದಲ್ಲಿ ರಾಜಕೀಯ ಸಂಚಲನಗಳು ಗರಿಗೇದರಿವೆ.

Conclusion:ಆರ್.ಶಂಕರ ಅಳಿವು-ಉಳುವಿನ ಪ್ರಶ್ನೆ..

ರಾಣೆಬೆನ್ನೂರ ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾದ ಆರ್.ಶಂಕರ ಪಕ್ಷ ವಿರೋಧಿ ಚಟುವಟಿಕೆ ಅಡಿಯಲ್ಲಿ ಅನರ್ಹಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅನರ್ಹತೆ ತಿರ್ಪು ಬಹಳ ಕುತೂಹಲ ಮೂಡಿಸಿದ್ದು, ಕ್ಷೇತ್ರದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಅವರು ಪಕ್ಷಾಂತರ ಮಾಡಿಲ್ಲ, ಯಾವುದೇ ಪಕ್ಷದ ಜತೆ ಅವರು ಸೇರಿಕೊಂಡಿಲ್ಲ ಎಂದು ಅವರ ಅಭಿಮಾನಿಗಳು ಮಾತಾಗಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ, ಅವರು ಅನರ್ಹವಾಗುವುದು ಪಕ್ಕಾ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಸುಪ್ರೀಂಕೋರ್ಟ್ ತಿರ್ಪು ಏನಾಗುತ್ತದೆ ಎಂಬುದು ಕ್ಷೇತ್ರದಲ್ಲಿ ಬಾರಿ ಸಂಚಲನ ಮೂಡಿಸಿದೆ.

2.32.485.. ಮತದಾರರು....
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 1,18,396 ಪುರುಷ, .1,14,076 ಮಹಿಳಾ ಹಾಗೂ 13 ಇತರೇ ಮತದಾರರು ಸೇರಿ ಒಟ್ಟು 2,32,485 ಮತದಾರರಿದ್ದಾರೆ.

ABOUT THE AUTHOR

...view details