ಕರ್ನಾಟಕ

karnataka

ಲಂಚ ಪಡೆಯುತ್ತಿದ್ದ ಎಸಿಬಿ ಬಲೆಗೆ ಬಿದ್ದ ಪಿಡಿಒ..

By

Published : Jun 12, 2020, 4:14 PM IST

ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆಯಲು ಎನ್‌ಒಸಿ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಪಿಡಿಒ ಪದ್ದವ್ವ ಕಮ್ಮಾರ್‌ ಎಸಿಬಿ ಬಲೆಗೆ ಬಿದ್ದಿದ್ದಾರೆ.

Paddavva kammara
Paddavva kammara

ಹಾವೇರಿ: ಮೂರೂವರೆ ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪಿಡಿಒ ಎಸಿಬಿ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಪಿಡಿಒ ಪದ್ದವ್ವ ಕಮ್ಮಾರ್, ಭದ್ರಾಪೂರ ಗ್ರಾಮದ ಮಹಾಂತೇಶ ರಾಮನಕೊಪ್ಪ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆದಿತ್ತು.

ಎಸಿಬಿ ಡಿವೈಎಸ್‌ಪಿ ಸೋಮಲಿಂಗ ನೇತೃತ್ವದಲ್ಲಿ ದಾಳಿ ನಡೆದಿತ್ತು. ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆಯಲು ಎನ್‌ಒಸಿ ನೀಡಲು ಡಿಡಿಒ ಲಂಚ ಪಡೆಯುತ್ತಿದ್ದರು. ಈ ವೇಳೆ ಪಿಡಿಒ ಪದ್ದವ್ವ ಕಮ್ಮಾರ್‌ ಸಿಕ್ಕಿ ಹಾಕಿಕೊಂಡಿದ್ದಾರೆ.‌ ಸದ್ಯ ಈ ಕುರಿತು ಹಾವೇರಿ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details