ಕರ್ನಾಟಕ

karnataka

ಸರ್ಕಾರದೊಂದಿಗೆ ಕೂತು ಚರ್ಚೆ ನಡೆಸಿದರೆ ರೈತರ ಸಮಸ್ಯೆಗೆ ತಾತ್ವಿಕ ಅಂತ್ಯ : ಕೇಂದ್ರ ಸಚಿವೆ ಕರಂದ್ಲಾಜೆ

By

Published : Nov 3, 2021, 8:31 AM IST

Updated : Nov 3, 2021, 2:14 PM IST

ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಹರಿಸಿದ ವಿಚಾರ ಘಟನೆಯಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ಹಾಗೂ ಮುಂದಿನ ಉಪಚುನಾವಣೆ ದೃಷ್ಟಿಯಿಂದ ಘಟನೆ ಪೂರ್ವ ನಿಯೋಜಿತವಾಗಿದೆ. ಘಟನೆಯ ಹಿಂದೆ ಸಮಾಜವಾದಿ ಹಾಗೂ ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಎಂದು ಆರೋಪಿಸಿದರು..

ಕೇಂದ್ರ ಸಚಿವೆ ಕರಂದ್ಲಾಜೆ
ಕೇಂದ್ರ ಸಚಿವೆ ಸಚಿವ ಶೋಭಾ ಕರಂದ್ಲಾಜೆ

ಹಾಸನ :ಪ್ರತಿ ವರ್ಷವೂ ಹಾಸನಾಂಬೆ ದರ್ಶನಕ್ಕೆ ನಾನು ಆಗಮಿಸುತ್ತಿದ್ದು, ತಾಯಿ ಆಶೀರ್ವಾದದಿಂದಲೇ ಕೇಂದ್ರ ಸಚಿವೆಯಾದೆ. ಅದಕ್ಕೆ ಈ ಬಾರಿಯೂ ದರ್ಶನಕ್ಕೆ ಬಂದಿದ್ದೇನೆ ಎಂದು ಕೇಂದ್ರ ಸಚಿವೆ ಸಚಿವ ಶೋಭಾ ಕರಂದ್ಲಾಜೆ ತಿಳಿಸಿದರು.

ಕೇಂದ್ರ ಸಚಿವೆ ಕರಂದ್ಲಾಜೆ

ನಗರದಲ್ಲಿ ಹಾಸನಾಂಬೆಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ರೈತರ ಹೋರಾಟವನ್ನು ಕೇಂದ್ರ ಸರ್ಕಾರ ಗಮನಿಸುತ್ತಿದೆ. ರೈತ ಮುಖಂಡರು ಚರ್ಚೆಗೆ ಬಂದರೆ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದರು.

ಕೇಂದ್ರ ಸರ್ಕಾರವು 11 ಬಾರಿ ದೆಹಲಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದೆ. ಆದರೆ, ಈವರೆಗೂ ಸಮಸ್ಯೆ ಬಗೆಹರಿದಿಲ್ಲ. ರಸ್ತೆಯಲ್ಲಿ ನಿಂತು ಹೋರಾಟ ಮಾಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯದು.

ಸರ್ಕಾರದೊಂದಿಗೆ ಕೂತು ಚರ್ಚೆ ನಡೆಸಿದರೆ ರೈತರ ಸಮಸ್ಯೆಗೆ ತಾತ್ವಿಕ ಅಂತ್ಯ ಕಾಣಿಸಬಹುದು. ಕೇಂದ್ರ ಸರ್ಕಾರ ರೈತರಿಗೆ ಸಹಾಯ ಮಾಡಲು ಸಿದ್ಧವಿದೆ ಎಂದರು.

ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಹರಿಸಿದ ವಿಚಾರ ಘಟನೆಯಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ಹಾಗೂ ಮುಂದಿನ ಉಪಚುನಾವಣೆ ದೃಷ್ಟಿಯಿಂದ ಘಟನೆ ಪೂರ್ವ ನಿಯೋಜಿತವಾಗಿದೆ. ಘಟನೆಯ ಹಿಂದೆ ಸಮಾಜವಾದಿ ಹಾಗೂ ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಎಂದು ಆರೋಪಿಸಿದರು.

ಈ ಘಟನೆ ಬಗ್ಗೆ ತನಿಖೆ ಆಗಬೇಕಿದ್ದು, ಇದರ ಹಿಂದೆ ಇರುವವರನ್ನು ಪತ್ತೆ ಮಾಡಬೇಕು. ಈ ಬಗ್ಗೆ ತನಿಖೆ ನಡೆಯುವುದಕ್ಕಿಂತ ಮುಂಚೆ ನಾವು ಯಾರು ಆರೋಪಿಗಳು ಎಂದು ಹೇಳಲಾಗುವುದಿಲ್ಲ.

ಲಖಿಂಪುರ ಖೇರಿ ರೈತರ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು, ಸಮಿತಿ ರಚನೆ ಮಾಡಲಾಗಿದೆ. ವರದಿಯ ನಂತರ ಸತ್ಯಾಸತ್ಯತೆ ಹೊರ ಬೀಳಲಿದೆ. ನಂತರವಷ್ಟೇ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

Last Updated : Nov 3, 2021, 2:14 PM IST

TAGGED:

ABOUT THE AUTHOR

...view details