ಕರ್ನಾಟಕ

karnataka

ಶೂಟೌಟ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ: ಹಳೇ ವೈಷಮ್ಯದಿಂದ ಕೊಲೆ, ತನಿಖೆಯಿಂದ ಬಹಿರಂಗ

By

Published : Jan 11, 2023, 9:56 PM IST

Updated : Jan 11, 2023, 11:11 PM IST

ತಂಬಲಗೆರೆ ಶೂಟ್ ಔಟ್ ಪ್ರಕರಣ: ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಯಸಳೂರು ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿ - ಅಕ್ರಮ ಮರಳುಗಾರಿಕೆ ಬಗ್ಗೆ ದೂರು ನೀಡಿದ್ದರಿಂದ ಬೆಳೆದಿದ್ದ ವೈಷಮ್ಯ ಕೊಲೆಯಲ್ಲಿ ಅಂತ್ಯ

Etv Bharat
Etv Bharat

ಹರಿರಾಮ ಶಂಕರ ಎಸ್ಪಿ

ಹಾಸನ: ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಕಲೇಶಪುರ ತಾಲೂಕಿನ ಯಸಳೂರು ಸಮೀಪದ ತಂಬಲಗೆರೆ ಗ್ರಾಮದ ಅನಿಲ್(28) ಮತ್ತು ನಾಗರಾಜ್ (64)ಬಂಧಿತ ಆರೋಪಿಗಳು. ಜ.9ರಂದು ರಾತ್ರಿ ನವೀನ್ ಮತ್ತು ಸ್ನೇಹಿತರು ಕೆರೆಯ ದಡದಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಹಳೆಯ ದ್ವೇಷವಿದ್ದ ನಾಗರಾಜ್ ಮತ್ತು ಅನಿಲ್ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ ಹಿನ್ನೆಲೆ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ನೇಹಿತರಾದ ದಯಾನಂದ ಮತ್ತು ಪದ್ಮನಾಭ ಅವರಿಗೆ ಗಂಭೀರ ಗಾಯಗಳಾಗಿದ್ದವು. ಅವರೀಗ ಪ್ರಸ್ತುತ ಸಕಲೇಶಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೂಟ್ ಔಟ್ ಪ್ರಕರಣ ಏನು?:ಬಿಜೆಪಿಯ ಸಕ್ರಿಯ ಕಾರ್ಯಕರ್ತ ಮತ್ತು ಸ್ವಯಂಸೇವಾ ಸಂಘದಲ್ಲಿ ಗುರುತಿಸಿಕೊಂಡಿದ್ದ ಮೃತಪಟ್ಟ ನವೀನ್, ಅಕ್ರಮವಾಗಿ ಮರಳು ದಂಧೆ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಪೊಲೀಸರಿಗೆ ಆರೋಪಿ ನಾಗರಾಜ್ ಮಾಹಿತಿ ನೀಡಿದ್ದರು. ಇದರಿಂದಾಗಿ ಮೃತ ನವಿನ್ ಅವರು ನಾಗರಾಜ್​​ಗೆ ಬೆದರಿಕೆ ಜತೆಗೆ ಕೊಲೆ ಮಾಡುವುದಾಗಿ ಬೆದರಿಸಿದ್ದರು.

ಇದರಿಂದಾಗಿ ಕೋಪಗೊಂಡ ನಾಗರಾಜ್ ಅವರು ನವೀನ್ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ನವೀನ್ ಮತ್ತು ಆತನ ಸ್ನೇಹಿತರು ಕೆರೆಯ ದಡದಲ್ಲಿ ಪಾರ್ಟಿ ಮಾಡುವ ವೇಳೆ ಆರೋಪಿ ನಾಗರಾಜ್ ಮತ್ತು ಅನಿಲ್ ಲೈಸೆನ್ಸ್ ಪಡೆದಿದ್ದ ಬಂದೂಕಿನಿಂದ ಗುಂಡು ಹಾರಿಸಿ ನವೀನನ್ನು ಕೊಲೆಗೆ ಯತ್ನಿಸಿದ್ದನು. ಇನ್ನು ಪ್ರಕರಣಕ್ಕೆ ಪರೋಕ್ಷವಾಗಿ ಪೊಲೀಸರು ಕಾರಣ ಎಂಬ ಆರೋಪಗಳಿವೆ. ಅಕ್ರಮ ಮರಳುಗಾಡಿಕೆ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಗೌಪ್ಯ ಮಾಹಿತಿ ನೀಡಿದರೆ, ಆ ಮಾಹಿತಿ ಅಕ್ರಮ ಮರಳುಗಾರಿಕೆ ಮಾಡುವವರ ಗಮನಕ್ಕೆ ಬರುತ್ತದೆ. ಹಾಗಾದರೆ ಈ ಮಾಹಿತಿ ಅವರಿಗೆ ತಲುಪುವುದಾದರೂ ಹೇಗೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ

ನಾಲ್ವರು ಸ್ನೇಹಿತರು ಕೂಡಿ ಪಾರ್ಟಿ:ಮೀನು ಹಿಡಿಯಲು ಹೋಗಿದ್ದ ವೇಳೆ ಗುಂಡಿನ ದಾಳಿಗೆ ಹಾಸನ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿಯ ನವೀನ್ ಅಲಿಯಾಸ್ ಪಚ್ಚಿ (39) ಗುಂಡಿಗೆ ಬಲಿಯಾಗಿದ್ದರು. ನವೀನ್​ ನಾಲ್ವರು ಸ್ನೇಹಿತರ ಜೊತೆಗೂಡಿ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಇದೇ ವೇಳೆ, ಅಪರಿಚಿತರು ಹಾರಿಸಿದ ಗುಂಡಿಗೆ ನವೀನ್​ ಬಲಿಯಾಗಿದ್ದರು. ನವೀನ್​ ಸ್ನೇಹಿತ ದಯಾನಂದ ಹಾಗೂ ಪದ್ಮನಾಭ ಎಂಬುವರಿಗೂ ಗುಂಡು ತಗುಲಿ ಗಾಯಗೊಂಡಿದ್ದರು. ಮತ್ತೊಬ್ಬ ಯುವಕ ರಾಜಾಚಾರಿ ಯಾವುದೇ ಅಪಾಯ ಸಂಭವಿಸದೇ ಪ್ರಾಣಾಪಾಯದಿಂದ ಪಾರಾಗಿದ್ದರು.

ಪೊಲೀಸರು ಪ್ರಕರಣದ ಬಗ್ಗೆ ಹೇಳುವುದೇನು?:ಶೂಟೌಟ್​ ಪ್ರಕರಣಕ್ಕೆ ಹಳೇ ವೈಷಮ್ಯವೇ ಪ್ರಮುಖ ಕಾರಣ ಎಂದು ತನಿಖೆಯಿಂದ ಗೊತ್ತಾಗಿದೆ. ಯಸಳೂರು ಸಮೀಪದ ತಂಬಲಗೆರೆ ಗ್ರಾಮ ಕೆರೆಯ ದಡದಲ್ಲಿ ನವೀನ ಹಾಗೂ ಮೂವರು ಸ್ನೇಹಿತರು ಪಾರ್ಟಿ ಮಾಡುತ್ತಿದ್ದರು. ಇದರ ಮಾಹಿತಿ ಅರಿತ ಆರೋಪಿ ನಾಗರಾಜ್, ಅನಿಲ್ ಅವರು ಬಂದೂಕಿನಿಂದ ರಾತ್ರಿ ಗುಂಡು ಹಾರಿಸಿದ್ದರು. ಆವೇಳೆ, ನವೀನ ಸ್ಥಳದಲ್ಲೇ ಮೃತಪಟ್ಟರೇ,ಇಬ್ಬರು ಸ್ನೇಹಿತರಿಗೆ ಗುಂಡು ತಗಲಿ ಗಾಯಗೊಂಡಿದ್ದರು. ಇನ್ನೊಬ್ಬ ಅಪಾಯದಿಂದ ಪಾರಾಗಿದ್ದ.

ಈ ವೇಳೆ, ಆರೋಪಿ ನಾಗರಾಜನೇ ಪೊಲೀಸರಿಗೆ ಈ ರೀತಿ ಘಟನೆ ಸಂಭವಿಸಿದೆ ಎಂದು ತಿಳಿಸಿ, ಮೃತಪಟ್ಟ ನವೀನ್ ಹಾಗೂ ದಯಾನಂದ ಮತ್ತು ಪದ್ಮನಾಭ ಅವರನ್ನು ಹಾಸನ ಆಸ್ಪತ್ರೆಗೆ ಸೇರಿಸುತ್ತಾರೆ. ಘಟನೆ ನಡೆದ ಎರಡು ನಿಮಿಷದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಘಟನೆ ಬಳಿಕ ಪೊಲೀಸರು ಸ್ಥಳ ಪರಿಶೀಲಿಸಿ, ಶೂಟೌಟ್​ಗೆ ಬಳಸಿದ ಬಂದೂಕು ಬಳಸಿದ್ದನ್ನು ಕಂಡು ಹಿಡಿಯಲೂ ಬೆಂಗಳೂರು ಎಕ್ಸ್​ಪರ್ಟ್​​ ತಂಡವನ್ನು ಕರೆಯಿಸಿ, ತನಿಖೆ ಮಾಡಲಾಯಿತು. ಈ ಕೊಲೆಗೆ​ ಪೆಲೆಟ್​ ಗನ್​ ಬಳಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನವೀನ್ ಅಕ್ರಮವಾಗಿ ಮರಳು ದಂಧೆ ಮಾಡುತ್ತಿದ್ದ ಎಂಬ ವಿಚಾರವನ್ನು ಆರೋಪಿ ನಾಗರಾಜ್​ ಪೊಲೀಸ​ರಿಗೆ ತಿಳಿಸಿದ್ದನು. ಈ ವಿಷಯ ನವೀನ್ ಅವರಿಗೆ ತಲುಪಿ ವೈಷಮ್ಯವೇ ಬೆಳೆಯಿತು. ನಾಗರಾಜ್​ಗೆ ಕೊಲೆ, ಬೆದರಿಕೆ ಒಡ್ಡುತ್ತಿದ್ದನು. ನವೀನನ್ನು ಮುಗಿಸಬೇಕು ಎಂದು ತೀರ್ಮಾನಿಸಿದ್ದ ನಾಗರಾಜ್ ತನ್ನ ಲೈಸನ್ಸ್​ ಆಧಾರಿತ ಬಂದೂಕಿನಿಂದ ಶೌಟೌಟ್ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸ್ಥಳೀಯರನ್ನು ವಿಚಾರಿಸಿದಾಗ, ತಂಬಲಗೆರೆ ಗ್ರಾಮದ ಆರೋಪಿಗಳಾದ ಅನಿಲ್ ಮತ್ತು ನಾಗರಾಜ್ ಶಸ್ತ್ರ ಸಹಿತ ತಿರುಗಾಡುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿ ಯಶಸ್ವಿಯಾಯಿತು.

ಇದನ್ನೂ ಓದಿ:ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪ.. ದಂಪತಿ ವಿರುದ್ಧ ದೂರ

Last Updated : Jan 11, 2023, 11:11 PM IST

ABOUT THE AUTHOR

...view details