ಕರ್ನಾಟಕ

karnataka

ಸಕಲೇಶಪುರದಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕನ ಸ್ಥಿತಿ ಗಂಭೀರ

By

Published : Feb 11, 2021, 10:40 AM IST

ಸಕಲೇಶಪುರ ತಾಲೂಕಿನ ಹಲಸುಲಿಗೆ ಸಮೀಪದ ಅಸಿಡೇ ಗ್ರಾಮದ ಮಂಜುನಾಥ್ ಎಂಬವರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಸಂತ್ ಮೇಲೆ ಸಂಜೆ ಕಾಡಾನೆ ದಾಳಿ ನಡೆಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

Man injured for elephant attack
ಸಕಲೇಶಪುರದಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕನ ಸ್ಥಿತಿ ಗಂಭೀರ

ಹಾಸನ/ಸಕಲೇಶಪುರ:ಕೂಲಿ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಸಾವು-ಬದುಕಿನ ನಡುವೆ ಹೊರಾಟ ನಡೆಸುತ್ತಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಹಲಸುಲಿಗೆ ಸಮೀಪದ ಅಸಿಡೇ ಗ್ರಾಮದ ಮಂಜುನಾಥ್ ಎಂಬುವರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಸಂತ್ ಮೇಲೆ ಸಂಜೆ ಕಾಡಾನೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ವಸಂತ್​, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾತಾವರಣದ ವೈಪರೀತ್ಯಕ್ಕೆ ಸವಾಲೊಡ್ಡಿ ಕುಂಬಳ ಬೆಳೆದ ಯುವ ಕೃಷಿಕರು: ಬೆಂಬಲ ಬೆಲೆ ಸಿಗದೆ ಕಂಗಾಲು

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಒಂಟಿ ಸಲಗ ಏಕಾಏಕಿ ಕಾರ್ಮಿಕನನ್ನು ಎತ್ತಿ ಬಿಸಾಡಿದೆ. ಇದರಿಂದ ಆತ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾನೆ. ಗೀಳಿಟ್ಟುಕೊಂಡು ದಾಳಿ ನಡೆಸಿದ ಆನೆಯ ಆರ್ಭಟವನ್ನು ಕೇಳಿಸಿಕೊಂಡ ಸ್ಥಳಿಯರು ತಕ್ಷಣ ತೋಟದ ಸಮೀಪ ಹೋದಾಗ ವಸಂತ್ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ABOUT THE AUTHOR

...view details