ಕರ್ನಾಟಕ

karnataka

ಹಾಸನದಲ್ಲಿ ಪಾಳೇಗಾರಿಕೆ ಸಂಸ್ಕೃತಿ ನಡೆಯಲ್ಲ: ಶಾಸಕ ಪ್ರೀತಂ ಗೌಡ

By

Published : Oct 14, 2020, 5:18 PM IST

ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಆರೋಪಕ್ಕೆ ಶಾಸಕ ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದ್ದು, ಪಾಳೇಗಾರಿಕೆ ಸಂಸ್ಕೃತಿ ಈಗ ನಡೆಯಲ್ಲ ಎಂದಿದ್ದಾರೆ.

muncipality election
ಶಾಸಕ ಪ್ರೀತಂಗೌಡ

ಹಾಸನ:ರೇವಣ್ಣ ಅವರು ಮಾಡಿದ್ರೆ ರಾಜಕಾರಣ, ಬೇರೆಯವರು ಮಾಡಿದ್ರೆ ಕಾನೂನು ಬಾಹಿರ ಅನ್ನೋದಾದ್ರೆ ನಾವು ಕೂಡ ರಾಜಕಾರಣಾನೇ ಮಾಡುತ್ತಿರೋದು. ಹಾಸನದಲ್ಲಿ ಪಾಳೇಗಾರಿಕೆ ಸಂಸ್ಕೃತಿ ನಡೆಯಲ್ಲ ಎಂದು ಮಾಜಿ ಸಚಿವ ರೇವಣ್ಣಗೆ ಶಾಸಕ ಪ್ರೀತಂ ಗೌಡ ಟಾಂಗ್ ನೀಡಿದ್ದಾರೆ.

ಶಾಸಕ ಪ್ರೀತಂಗೌಡ
ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂ ಗೌಡ, ಮುಂಚೆ ಇವರು ಹೇಳಿದ್ದೇ ಶಾಸನ ಎಂಬಂತೆ ಇತ್ತು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಜನ ಏನು ಅಪೇಕ್ಷೆ ಪಡುತ್ತಾರೋ ಆ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ರೇವಣ್ಣ ಅವರು ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಹೇಳಿದ್ದಾರೆ.
ಹಾಸನ ನಗರಸಭೆ ಅಧ್ಯಕ್ಷಗಾದಿ ಎಸ್‌ಟಿ ಪಂಗಡಕ್ಕೆ ಮೀಸಲಾಗಿರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದ ರೇವಣ್ಣ ಇದು ಕಾನೂನು ಬಾಹಿರ ಎಂದು ಹೇಳಿದ್ರು. ಮಾಜಿ ಸಚಿವ ರೇವಣ್ಣ ಆರೋಪಕ್ಕೆ ಶಾಸಕ ಪ್ರೀತಂ ಗೌಡ ಖಡಕ್ಕಾಗೇ ಪ್ರತಿಕ್ರಿಯಿಸಿದ್ದು, ಸರ್ಕಾರ ಕಾನೂನಿನಂತೆ ಮೀಸಲಾತಿ ನಿಗದಿ ಮಾಡಿದೆ. ಈ ಹಿಂದೆ ಹಾಸನ ನಗರಸಭೆಯ 35 ವಾರ್ಡ್‌ನ ಮೀಸಲಾತಿಯನ್ನ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರಕಟಿಸಿತ್ತು. ಇವರು ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ಯಾಕೆ ಬದಲಾಯಿಸಿದ್ರು ನೆನಪಿಸಿಕೊಳ್ಳಬೇಕು. ಆಗ ಕಾನೂನು ಎಲ್ಲಿ ಹೋಗಿತ್ತು? ‌ಅವರು ಮಾಡಿದ್ರೆ ರಾಜಕಾರಣ, ಬೇರೆಯವರು ಮಾಡಿದ್ರೆ ಕಾನೂನು ಬಾಹಿರ ಅನ್ನೋದಾದ್ರೆ ನಾವು ರಾಜಕಾರಣಾನೆ ಮಾಡುತ್ತಿರೋದು ಎಂದರು.
4 ನೇ ವಾರ್ಡ್‌ನಲ್ಲಿ ಅತೀ ಹೆಚ್ಚು ಪರಿಶಿಷ್ಟಜಾತಿ ಜನಾಂಗದವರಿದ್ರು. ಆದರೆ ಅದನ್ನು ಜನರಲ್ ಮಾಡಿ ಯಾವ ಕಾನೂನು ಪಾಲನೆ ಮಾಡಿದ್ರು ಎಂದ್ರು. ಹಾಸನ ನಗರಸಭೆಯಲ್ಲಿ ಯಾರಿಗೂ ಬಹುಮತವಿಲ್ಲ. ಹಾಸನ ವಿಧಾನಸಭೆ ಜನ ಅವರ ಪರವಾಗಿಲ್ಲ‌ ಎಂಬುದನ್ನು ರೇವಣ್ಣ ಅರ್ಥ ಮಾಡಿಕೊಳ್ಳಬೇಕು. ಹಾಸನ ಜನ ಅಭಿವೃದ್ಧಿ ಪರ, ಬಿಜೆಪಿ ಪರ ಇದ್ದಾರೆ. ಹೀಗಾಗಿ ರೇವಣ್ಣ ಅವರು ನಮಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details