ಕರ್ನಾಟಕ

karnataka

ಜನರು ಪ್ರಾಣಕ್ಕಾಗಿ ಭಿಕ್ಷೆ ಬೇಡಿದರೆ, ಸರ್ಕಾರ ಅಧಿಕಾರಕ್ಕಾಗಿ ಭಿಕ್ಷೆ ಬೇಡುತ್ತಿದೆ: ಡಿಕೆಶಿ ವಾಗ್ದಾಳಿ

By

Published : Jun 3, 2021, 6:48 AM IST

ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲು ಹೊರಟಿದ್ದೇನೆ. ನಾನು ಹಾಸನಕ್ಕೆ ರಾಜಕೀಯ ಮಾಡಲು ಬಂದಿಲ್ಲ. ಮಾನವೀಯತೆ ದೃಷ್ಟಿಯಿಂದ ಜನಪರ ಕೆಲಸ ಮಾಡಲು ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

KPCC President DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಹಾಸನ: ದೇಶದ ಜನ ಆಮ್ಲಜನಕಕ್ಕಾಗಿ, ಔಷಧಿಗಾಗಿ, ಪ್ರಾಣಕ್ಕಾಗಿ ಭಿಕ್ಷೆ ಬೇಡಿದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ನಮಗೆ ಅಧಿಕಾರಕ್ಕಾಗಿ ಅವಕಾಶ ಕೊಡಿ ಎಂದು ಭಿಕ್ಷೆ ಬಿಡುತ್ತಿವೆ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ

ನಗರದ ಖಾಸಗಿ ಹೋಟೆಲ್​​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಮಾಡುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ನಾನು ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲು ಹೊರಟಿದ್ದೇನೆ. ನಾನು ಹಾಸನಕ್ಕೆ ರಾಜಕೀಯ ಮಾಡಲು ಬಂದಿಲ್ಲ. ಮಾನವೀಯತೆ ದೃಷ್ಟಿಯಿಂದ ಜನಪರ ಕೆಲಸ ಮಾಡಲು ಬಂದಿದ್ದೇನೆ ಎಂದರು.

ಹಾಸನದ ಸಾವಿರಾರು ರೈತರ ಪರವಾಗಿ ಕೆಲ ರೈತರು ನನಗೆ ಕರೆ ಮಾಡಿದ್ರು. ವಾರದಲ್ಲಿ 4 ದಿನ ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ನಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಇವತ್ತು ಬೆಳೆಗಳು ಗೊಬ್ಬರವಾಗುತ್ತಿವೆ ಎಂಬ ಅಳಲನ್ನು ತೋಡಿಕೊಂಡ್ರು. ಹೀಗಾಗಿ ರೈತರಿಗೆ ನೀವು ಬೆಂಬಲ ಬೆಲೆ ಕೊಡುವುದು ಬೇಡ. ರೈತರ ಬಗ್ಗೆ ಕಾಳಜಿ ಇದ್ರೆ ಅವರು ಬೆಳೆದ ಬೆಳೆಗಳನ್ನು ಸರ್ಕಾರವೇ ಖರೀದಿ ಮಾಡಿ ಎಷ್ಟಕ್ಕಾದರೂ ಮಾರಿಕೊಳ್ಳಲಿ. ಆದರೆ ಮಾರಿದ ನಂತರ ಅವರಿಗೆ ಅರ್ಧ ಹಣವನ್ನು ಪಾವತಿಸಿ ರೈತರ ರಕ್ಷಣೆಗೆ ಬರಬೇಕು ಎಂದು ಒತ್ತಾಯಿಸಿದರು.

ಇನ್ನು ಶಿಕ್ಷಕರು ಭಿಕ್ಷುಕರಾಗುತ್ತಿದ್ದಾರೆ. ಅವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಡೀ ದೇಶದಲ್ಲಿ ಪ್ರಧಾನಮಂತ್ರಿ ಉಚಿತವಾಗಿ ವ್ಯಾಕ್ಸಿನ್ ಕೊಡುವಂತಹ ಕೆಲಸ ಮಾಡಬೇಕು. ದಿನಕ್ಕೆ 10 ಸಾವಿರ ಜನ ಪ್ರಾಣ ಬಿಡುತ್ತಿದ್ದಾರೆ. ಸರ್ಕಾರ ಮಾತ್ರ ಕೇವಲ 2ರಿಂದ 3 ಸಾವಿರ ಎಂದು ಲೆಕ್ಕ ಕೊಡುತ್ತಿದೆ. ಹೀಗಾಗಿ ನಾನು ಡೆತ್ ಆಡಿಟ್ ಮಾಡಿಸಬೇಕು ಎಂದು ಒತ್ತಾಯಿಸುತ್ತೇನೆ. ಜತೆಗೆ ಪಿಯುಸಿ ಪರೀಕ್ಷೆಯನ್ನು ಕೇಂದ್ರ ಸರ್ಕಾರವೇ ರದ್ದು ಮಾಡಿದ್ದು, ಮೊದಲು ಅವರಿಗೆ ಲಸಿಕೆ ಕೊಟ್ಟು ಜೀವ ಉಳಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಓದಿ:ಪುಲ್ವಾಮದಲ್ಲಿ ಬಿಜೆಪಿ ಮುಖಂಡನನ್ನು ಹತ್ಯೆಗೈದ ಉಗ್ರರು

ABOUT THE AUTHOR

...view details