ಕರ್ನಾಟಕ

karnataka

ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರೆ, ಅದು ಕಾಂಗ್ರೆಸ್: ಸಚಿವ ಆರ್.ಅಶೋಕ್

By

Published : Apr 27, 2022, 7:50 PM IST

Updated : Apr 27, 2022, 8:30 PM IST

ದೇಶದಲ್ಲಿ ದುಡ್ಡು, ಹೆಂಡ ಹಂಚುವುದನ್ನು ಕಲಿಸಿದ್ದೇ ಕಾಂಗ್ರೆಸ್ಸಿಗರು. ಅವರು ಒಂದು ರೀತಿ ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಮಾತನಾಡುತ್ತಾರೆ. ದೇಶದಲ್ಲಿ ಭ್ರಷ್ಟಾಚಾರಕ್ಕೆ ಪಿತಾಮಹ ಯಾರು ಎಂದು ಕೇಳಿದ್ರೆ ಅದು ಕಾಂಗ್ರೆಸ್ ಪಕ್ಷದವರು ಅಂತ ಹೇಳಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

Revenue Minister R. Ashok spoke in Hassan
ಸಚಿವ ಆರ್.ಅಶೋಕ್

ಹಾಸನ:2023ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅದ್ಭುತ ಜಯ ಸಾಧಿಸುತ್ತದೆ. ಅದಕ್ಕೆ ಬೇಕಾದ ಎಲ್ಲಾ ನೀಲ ನಕ್ಷೆಯನ್ನು ಕೇಂದ್ರದ ನಾಯಕರು ಕೊಟ್ಟಿದ್ದಾರೆ. ಹಾಗಾಗಿ ಮುಂದೆ ಸ್ವತಂತ್ರವಾಗಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆಯ ಮಾತುಗಳನ್ನಾಡಿದರು.

ಕಂದಾಯ ಸಚಿವ ಆರ್.ಅಶೋಕ್

ಹಾಸನದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಸಚಿವರು, ಉತ್ತರಪ್ರದೇಶದ ಚುನಾವಣೆ ಮಾದರಿಯಲ್ಲಿಯೇ ಕರ್ನಾಟಕದ ಚುನಾವಣೆ ನಡೆಯಲಿದೆ. ಗೆಲ್ಲುವ ಭರವಸೆ ಮಾತ್ರವಲ್ಲ, ನಾವೇ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿಯನ್ನೂ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ಅನಾವಶ್ಯಕ ಕೋವಿಡ್‌ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ

ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡುತ್ತಾ, ಮಂಡ್ಯದಲ್ಲಿ ಒಬ್ಬರ ಹೆಸರು ಬೇಡ, ಒಂದು ತಿಂಗಳ ಒಳಗೆ ಬಹಳಷ್ಟು ಜನ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಕಾದುನೋಡಿ ಎಂದರು.

Last Updated :Apr 27, 2022, 8:30 PM IST

TAGGED:

ABOUT THE AUTHOR

...view details