ಕರ್ನಾಟಕ

karnataka

ಜಮೀರ್ ಜತೆ ಶ್ರೀಲಂಕಾಗೆ ಹೋಗಿದ್ದು ನಿಜ, ಕ್ಯಾಸಿನೋಗೆ ಹೋಗಿಲ್ಲ : ಜೆಡಿಎಸ್ ರಾಜ್ಯಾಧ್ಯಕ್ಷ

By

Published : Sep 14, 2020, 8:56 PM IST

ನಾವು ಶ್ರೀಲಂಕಾದಲ್ಲಿ ಇದ್ದಿದ್ದು ಎರಡೇ ದಿನ. ಅಲ್ಲಿ ಉಳಿದುಕೊಂಡಿದ್ದು ಒಂದೇ ರಾತ್ರಿ. ಅದು ಸಾಮಾನ್ಯ ಹೋಟೆಲ್​​ನಲ್ಲಿ ಉಳಿದುಕೊಂಡು ಮತ್ತೆ ವಾಪಸಾದೆವು..

I went to Sri Lanka with MLA Zameer Ahmed Khan: HK Kumaraswamy
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​​.ಕೆ. ಕುಮಾರಸ್ವಾಮಿ

ಸಕಲೇಶಪುರ :ಶಾಸಕ ಜಮೀರ್ ಅಹ್ಮದ್ ಜೊತೆ ಶ್ರೀಲಂಕಾಕ್ಕೆ ಹೋಗಿದ್ದು ನಿಜ. ಆದರೆ, ನಾವು ಯಾರೂ ಅವರ ಜೊತೆ ಕ್ಯಾಸಿನೋಗೆ ಹೋಗಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ ಕೆ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅವರ ಜೊತೆ ಶ್ರೀಲಂಕಾಗೆ ಹೋಗಿದ್ದ ಸಮಯದಲ್ಲಿ ನಾನು ಶಾಸಕನಾಗಿದ್ದೆ. ಆದರೆ, ನಾವ್ಯಾರೂ ಅವರ ಜೊತೆ ಕ್ಯಾಸಿನೋಗೆ ಹೋಗಿಲ್ಲ. ನಾವು ಶ್ರೀಲಂಕಾದಲ್ಲಿ ಇದ್ದಿದ್ದು ಎರಡೇ ದಿನ. ಅಲ್ಲಿ ಉಳಿದುಕೊಂಡಿದ್ದು ಒಂದೇ ರಾತ್ರಿ. ಅದು ಸಾಮಾನ್ಯ ಹೋಟೆಲ್​​ನಲ್ಲಿ ಉಳಿದುಕೊಂಡು ಮತ್ತೆ ವಾಪಸಾದೆವು ಎಂದು ಜಮೀರ್ ಹೇಳಿಕೆಗೆ ತಿರುಗೇಟು ನೀಡಿದರು.

ಕ್ಯಾಸಿನೋ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

ಇದೇ ವೇಳೆ ಬಿಎಸ್​ವೈಹಾಗೂ ಹೆಚ್​ಡಿಕೆಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 650 ಕೋಟಿ ರೂ. ಮಂಜೂರು ಮಾಡಿದ್ದರು. ಆದರೆ, ಈವರೆಗೂ ಆ ಹಣ ಬಿಡುಗಡೆಯಾಗಿಲ್ಲ.

ಅಷ್ಟೇ ಅಲ್ಲ, ರಾಜ್ಯದಲ್ಲಿ ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ನಿಗದಿಯಾದ ಹಣ ಕೂಡ ಬಿಡುಗಡೆಯಾಗಿಲ್ಲ. ಅದನ್ನು ಕೇಳಲು ಕುಮಾರಸ್ವಾಮಿ ಅವರು ಹೋಗಿದ್ದರು. ಇದನ್ನು ಬಿಟ್ಟು ಭೇಟಿ ಹಿಂದೆ ಬೇರೆ ಯಾವ ರಾಜಕೀಯವೂ ಇಲ್ಲ, ಬೇರೆ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details