ಕರ್ನಾಟಕ

karnataka

9 ವರ್ಷ ಸಂಸಾರ ಮಾಡಿ ಪತ್ನಿಗೆ ಕೈಕೊಟ್ಟ ಪತಿ : ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

By

Published : Dec 24, 2021, 6:53 AM IST

ಯಾವಾಗಲೂ ಮದ್ಯದ ನಶೆಯಲ್ಲಿ ತೇಲುತ್ತಿದ್ದ ಲೋಹಿತ್, ಆಸ್ತಿ ಆಸೆಗಾಗಿ ಒಪ್ಪಿ ಪ್ರೀತಿಸಿ ಕೈಹಿಡಿದಿದ್ದ ಪತ್ನಿ ಬಿಟ್ಟು ಅಪ್ಪ ಅಮ್ಮ ಹೇಳಿದಂತೆ ನಡೆದುಕೊಳ್ಳಲಾರಂಭಿಸಿದ‌. ಗಂಡ-ಹೆಂಡತಿ ದೂರ ಮಾಡಿದ ಲೋಹಿತ್ ಪೋಷಕರು,‌ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದರು..

ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
Husband cheats wife

ಹಾಸನ: ಪ್ರೀತಿಸಿ ಮದುವೆಯಾಗಿ 9 ವರ್ಷಗಳ ಕಾಲ ಸಂಸಾರ ಮಾಡಿ ಇದೀಗ ಪತ್ನಿಗೆ ಮೋಸ ಮಾಡಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕುಂದೂರು ಗ್ರಾಮದ ಅಕ್ಷತಾ ಕಾಲೇಜ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಲೋಹಿತ್ ಎಂಬಾತನ ಪರಿಚಯವಾಗಿತ್ತು. ನಂತರ ಆತನೊಂದಿಗೆ ಪ್ರೇಮಾಂಕುರವಾಗಿ ಪೋಷಕರ ವಿರೋಧದ ನಡುವೆ ಮದುವೆಯಾಗಿದ್ರು.

ಅನ್ಯಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ, ತಾಯಿ ಜಯಶೀಲಾ ಅಕ್ಷತಾಳಿಗೆ ಇನ್ನಿಲ್ಲದ ಕಿರುಕುಳ ನೀಡಿ ನವಜೋಡಿಯನ್ನು ಮನೆಯಿಂದ ಹೊರ ಹಾಕಿದ್ರು. ಆನಂತರ ಇಬ್ಬರೂ ಮನೆಯಿಂದ ಹೊರ ಹೋಗಿ ಅನ್ಯೋನ್ಯವಾಗಿದ್ದರು.

ಕೆಲ ದಿನಗಳ ನಂತರ ಲೋಹಿತ್ ಪೋಷಕರು ಆತನನ್ನು ಮನೆಗೆ ಕರೆಸಿಕೊಂಡು ಹಕ್ಕು ಖುಲಾಸೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಲ್ಲದೆ ಪತ್ನಿಯನ್ನು ಬಿಟ್ಟು ಬರುವಂತೆ ಒತ್ತಾಯಿದ್ದಾರೆ.

ಅತ್ತ ಪೋಷಕರು ಇತ್ತ ಕೈಹಿಡಿದ ಪತ್ನಿ ಬಿಡಲಾಗದೆ ಲೋಹಿತ್ ಕುಡಿತದ ದಾಸನಾಗಿದ್ದ. ಲೋಹಿತ್ ಪೋಷಕರಿಗೆ ಕೋಟಿಗಟ್ಟಲೆ ಆಸ್ತಿಯಿತ್ತು. ಇದನ್ನೇ ಮುಂದಿಟ್ಟುಕೊಂಡು ನೀನು ಅಕ್ಷಾತಳನ್ನು ಬಿಟ್ಟು ಬಂದರೆ ಆಸ್ತಿ ಕೊಡುವುದರ ಜೊತೆಗೆ ಮತ್ತೊಂದು ಮದುವೆ ಮಾಡುವುದಾಗಿ ಆತನ ಪೋಷಕರು ಹೇಳಿದ್ದಾರೆ.

ಯಾವಾಗಲೂ ಮದ್ಯದ ನಶೆಯಲ್ಲಿ ತೇಲುತ್ತಿದ್ದ ಲೋಹಿತ್, ಆಸ್ತಿ ಆಸೆಗಾಗಿ ಒಪ್ಪಿ ಪ್ರೀತಿಸಿ ಕೈಹಿಡಿದಿದ್ದ ಪತ್ನಿ ಬಿಟ್ಟು ಅಪ್ಪ ಅಮ್ಮ ಹೇಳಿದಂತೆ ನಡೆದುಕೊಳ್ಳಲಾರಂಭಿಸಿದ‌. ಗಂಡ-ಹೆಂಡತಿ ದೂರ ಮಾಡಿದ ಲೋಹಿತ್ ಪೋಷಕರು,‌ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದರು.

ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ಎಂಗೇಜ್ಮೆಂಟ್ ಕೂಡ ಆಗಿತ್ತು. ಈ ವಿಷಯ ಅಕ್ಷಾತಾಗೆ ತಿಳಿಯುತ್ತಿದ್ದಂತೆ ಎಂಗ್ಮೇಂಟ್ ಆಗಿದ್ದ ಯುವತಿಗೆ ಫೋನ್ ಮಾಡಿ ಸತ್ಯಾಂಶ ತಿಳಿಸಿದ್ದಾಳೆ. ಕೂಡಲೇ ಆಕೆಯೂ ಕೂಡ ಲೋಹಿತ್ ವಿರುದ್ಧ ಸೂರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಅಷ್ಟೇ ಅಲ್ಲದೆ ಈ ದಂಪತಿಗೆ ಎಂಟು ವರ್ಷದ ಮಗ ಕೂಡ ಇದ್ದಾನೆ. ಘಟನೆಯಿಂದ ಮನನೊಂದ ಅಕ್ಷತಾ ಇದೀಗ ಪೊಲೀಸ್​ ಠಾಣೆ ಮೇಟ್ಟಿಲೇರಿದ್ದಾಳೆ. ಪತ್ನಿಯ ನಡೆಯಿಂದ ಕೋಪಗೊಂಡ ಲೋಹಿತ್, ಅಕ್ಷತಾ ಕೆಲಸ ಮಾಡುತ್ತಿರುವ ಫ್ಯಾಕ್ಟರಿ ಮುಂದೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.

ಅಲ್ಲದೇ ಲೋಹಿತ್ ಹಾಗೂ ಆತನ ಪೋಷಕರ ವಿರುದ್ಧ ಎರಡನೇ ಮದುವೆಯಾಗಲು ನಂಬಿಸಿರುವ ಆಡಿಯೋ ಸಾಕ್ಷಿ ಇಟ್ಟುಕೊಂಡು ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ. ಸಂಸಾರ ಹಾಳಾಗಲು ಕಾರಣನಾದ ಮಾವ ಮಲ್ಲಿಕಾರ್ಜುನ, ಅತ್ತೆ ಜಯಶೀಲ, ಮೈದುನ ದರ್ಶನ್ ವಿರುದ್ಧ ಕಠಿಣ ಕ್ರಮ‌ಕೈಗೊಳ್ಳುವಂತೆ ಅಕ್ಷತಾ ಮತ್ತು ಆಕೆಯ ಪೋಷಕರು ಆಗ್ರಹಿದ್ದಾರೆ.

ABOUT THE AUTHOR

...view details