ಕರ್ನಾಟಕ

karnataka

ಕುಮಾರಣ್ಣ ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾರೆ: ಶಾಸಕ ಪ್ರೀತಂ ಗೌಡ ವ್ಯಂಗ್ಯ

By

Published : Oct 20, 2021, 7:01 PM IST

ನಾನು ಆಕಸ್ಮಿಕ ಶಾಸಕನೆಂದು ಹೇಳಿರುವ ಮಾಜಿ ಸಿಎಂ ಕುಮಾರಣ್ಣನವರು ಏನೇ ಮಾತನಾಡಿದರೂ ನನಗೆ ಅದು ಆಶೀರ್ವಾದ ಎಂದುಕೊಳ್ಳುತೇನೆ. ಕುಮಾರಣ್ಣ ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾರೆ ಎಂದು ನಂಬಿದ್ದೇನೆ ಎಂದು ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ.

bjp mla preetham gowda reaction to hd kumarswamy statement
ಹೆಚ್​ಡಿಕೆ ಹೇಳಿಕೆಗೆ ಶಾಸಕ ಪ್ರೀತಂ ಗೌಡ ಪ್ರತಿಕ್ರಿಯೆ

ಹಾಸನ:ನಾನು ಗೆಲುವು ಪಡೆದಿರುವುದು ಒಂದೇ ಚುನಾವಣೆಯಲ್ಲಿ. ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಯಾರು ಆಕಸ್ಮಿಕವಾಗಿ ಏನೇನೋ ಆಗಿದ್ದಾರೆ ಎಂಬುದನ್ನು ಇತಿಹಾಸ ಪುಟ ತೆರೆದು ನೋಡಿದರೆ ತಿಳಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಶಾಸಕ ಪ್ರೀತಮ್ ಜೆ. ಗೌಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಹೆಚ್​ಡಿಕೆ ಹೇಳಿಕೆಗೆ ಶಾಸಕ ಪ್ರೀತಂ ಗೌಡ ಪ್ರತಿಕ್ರಿಯೆ

ನಗರದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಆಕಸ್ಮಿಕ ಶಾಸಕನೆಂದು ಹೇಳಿರುವ ಮಾಜಿ ಸಿಎಂ ಕುಮಾರಣ್ಣನವರು ಏನೇ ಮಾತನಾಡಿದರೂ ನನಗೆ ಅದು ಆಶೀರ್ವಾದ ಎಂದುಕೊಳ್ಳುತೇನೆ. ಕುಮಾರಣ್ಣ ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾರೆ ಎಂದು ನಂಬಿದ್ದೇನೆ. ಪಕ್ಷ ಬೇರೆ ಇದ್ದರೂ ಪ್ರೀತಂ ಗೌಡ ಬಗ್ಗೆ ಅವರಿಗೆ ಕಾಳಜಿ ಹೆಚ್ಚಿದೆ ಎಂದು ವ್ಯಂಗ್ಯವಾಡಿದರು.

ಮೊದಲ ಬಾರಿ ಶಾಸಕನಾಗಿರುವ ನನ್ನ ಬಗ್ಗೆ ಎರಡು ಬಾರಿ ಸಿಎಂ ಆಗಿದ್ದವರು ಮಾತನಾಡಿದ್ದಾರೆ ಎಂದರೆ ನನ್ನ ಶಕ್ತಿ ಏನೆಂದು ಗೊತ್ತಾಗುತ್ತದೆ. ಅವರ ಆಶೀರ್ವಾದವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತೇನೆ. ನಾನು ಯಾವ ಸ್ಪೀಡಲ್ಲೂ ಬಂದಿಲ್ಲ. ಮೂರುವರೆ ವರ್ಷ ಕಷ್ಟಪಟ್ಟು ಜನರ ಮಧ್ಯೆ ಇದ್ದು, ಜನರ ಸೇವೆ ಮಾಡಿಕೊಂಡು ಚುನಾವಣೆಯಲ್ಲಿ ಜನರ ಆಶೀರ್ವಾದ ಪಡೆದುಕೊಂಡು ಶಾಸಕನಾಗಿದ್ದೇನೆ. ಯಾವುದೇ ಕಾರಣಕ್ಕೂ ಆಕಸ್ಮಿಕವಾಗಿ ಶಾಸಕನೂ ಆಗಿಲ್ಲ, ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಆಕಸ್ಮಿಕ ಎಂಬ ಪದ ಯಾರಿಗೆ ಸಮಂಜಸ ಎಂದು ಜನರು ತೀರ್ಮಾನಿಸುತ್ತಾರೆ. ಯಾರು ಆಕಸ್ಮಿಕವಾಗಿ ಯಾರ ನಾಮಬಲದಲ್ಲಿ ಶಾಸಕರಾದ್ರು, ಸಚಿವರಾದರು, ಯಾವ ಸ್ಟ್ರ್ಯಾಟಜಿ ಬಳಸಿ ಅಧಿಕಾರ ಹಿಡಿದರು ಎಂಬುದು ಇಡೀ ರಾಜ್ಯದ ಜನರಿಗೆ ತಿಳಿದಿರುವ ವಿಚಾರವಾಗಿದೆ ಹೆಚ್​ಡಿಕೆ ಪ್ರೀತಂ ಗೌಡ ಟಾಂಗ್ ನೀಡಿದ್ರು.

ಯಾರೋ ಒಬ್ಬರು ಸಂಘಟನೆ ಬಗ್ಗೆ ಮಾತನಾಡಿದ ತಕ್ಷಣ ಅದರ ಶಕ್ತಿ ಕುಗ್ಗುವುದಿಲ್ಲ:

ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚನೆ ಮಾಡಿದರು. ರಾಮಾಯಣದಲ್ಲಿ ಆದರ್ಶ ಪುರುಷ ಎಂದರೇ ಶ್ರೀರಾಮಚಂದ್ರ ಎಂದು ಇಡೀ ಜಗತ್ತು ನಂಬಿದೆ. ಭಾರತದ ಪರಂಪರೆ ತಿಳಿಸಿಕೊಟ್ಟಿರುವ ಮಹರ್ಷಿಗಳಿಂದ ಪ್ರೇರಣೆ ಪಡೆದ ಸಂಘ ಇಲ್ಲವೇ ಸಂಘಟನೆ ಇದ್ದರೇ ಅದು ಆರ್‌ಎಸ್‌ಎಸ್ ಮಾತ್ರ. ನಾವುಗಳೆಲ್ಲಾ ಆದರ್ಶವನ್ನು ಹಿಂಬಾಲಿಸುವ ಕಾರ್ಯಕರ್ತರಾಗಿದ್ದೇವೆ. ಯಾರೋ ಒಬ್ಬರು ಸಂಘಟನೆ ಬಗ್ಗೆ ಮಾತನಾಡಿದ ತಕ್ಷಣ ಅದರ ಶಕ್ತಿ ಕುಗ್ಗುವುದಿಲ್ಲ. ಮಾತನಾಡುವವರ ಬಾಯಿ ಚಪಲ ತೀರುತ್ತದೆಯೇ ಹೊರತು ಸಂಘಟನೆಗೆ ಯಾವ ಪರಿಣಾಮ ಬೀರುವುದಿಲ್ಲ ಎಂದ್ರು. ಇಡೀ ಪ್ರಪಂಚದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಅಸ್ತಿತ್ವ ಇಟ್ಟುಕೊಂಡು ಮುನ್ನಡೆಯುತ್ತಿದೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದರು.

ಚುನಾವಣಾ ಮತಕ್ಕಾಗಿ, ರಾಜಕಾರಣಕ್ಕಾಗಿ ಏನು ಬೇಕಾದ್ರೂ ಮಾತನಾಡಬಹುದು ಎಂದು ರಾಜಕೀಯ ಪಕ್ಷಗಳು ಅಂದುಕೊಂಡಿದ್ರೆ ಅದು ದುರ್ದೈವ. ಅವರು ನಮ್ಮ ದೇಶದ ಸಂಸ್ಕೃತಿ ಪರಂಪರೆ ಉಳಿಸುವ ಸಂಘಟನೆ ಬಗ್ಗೆ ಎಂದು ಹಗುರವಾಗಿ ಮಾತನಾಡಬಾರದು ಎಂದು ಹಿರಿಯರಾದ ಹೆಚ್.ಡಿ. ಕುಮಾರಸ್ವಾಮಿಗೆ ಮನವಿ ಮಾಡುವುದಾಗಿ ಹೇಳಿದರು.

ನಾವುಗಳು ಆದರ್ಶ ಪುರುಷರಾದ ಶ್ರೀರಾಮಚಂದ್ರರ ಭಕ್ತರು. ಆದ್ದರಿಂದಲೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಅದರ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲರೂ ಮಾಡೋಣ ಎಂದು ಕೋರಿದರು.

ABOUT THE AUTHOR

...view details