ಕರ್ನಾಟಕ

karnataka

ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರಾ ಭವಾನಿ ರೇವಣ್ಣ?

By

Published : Mar 20, 2021, 7:15 AM IST

Updated : Mar 20, 2021, 9:05 AM IST

150ಕ್ಕೂ ಅಧಿಕ ಮಹಿಳಾ ಸಂಘಟನೆಗಳನ್ನ ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನ ಅದ್ದೂರಿಯಾಗಿ ಭವಾನಿ ರೇವಣ್ಣ ಆಚರಿಸಿದರು.

Bhavani Revanna Celebration World Women's Day in Hassan
ಮಹಿಳಾ ದಿನಾಚರಣೆಯ ನೆಪದಲ್ಲಿ ಹಾಸನದ ಗದ್ದುಗೆ ಹಿಡಿಯಲು ರೆಡಿಯಾದ್ರ ಭವಾನಿ ರೇವಣ್ಣ

ಹಾಸನ:ಹಾಸನದಲ್ಲಿ ರಾಬರ್ಟ್ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಗರಕ್ಕೆ ಕರೆಸುವ ಮೂಲಕ ಭವಾನಿ ರೇವಣ್ಣ ಅದ್ದೂರಿ ಕಾರ್ಯಕ್ರಮ ಮಾಡಿದ್ದರು. ನಂತರ ಸುಮಾರು 150ಕ್ಕೂ ಅಧಿಕ ಮಹಿಳಾ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆ ಆಚರಿಸಿದ್ದರು.

ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರಾ ಭವಾನಿ ರೇವಣ್ಣ

ಎಲ್ಲ ಮಹಿಳಾ ಸಂಘಟನೆಗಳ ಸದಸ್ಯರನ್ನು ಒಗ್ಗಟ್ಟಾಗಿ ಸೇರಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ನಾನು ಬಹಳ ದಿನಗಳಿಂದ ಹೊಂದಿದ್ದೆ. ಆ ನನ್ನ ಅಭಿಲಾಷೆಯನ್ನು ಇಂದು ನೆರವೇರಿಸಿರುವೆ. ಇಂದಿನ ಕಾರ್ಯಕ್ರಮ ಹಾಸನದ ಪ್ರತಿಯೊಬ್ಬ ಮಹಿಳೆಗೂ ಸಂತೋಷ ತಂದಿದೆ ಎಂದು ಭವಾನಿ ರೇವಣ್ಣ ಹೇಳಿದ್ದರು.

"ನಾನು ಮೊದಲೇ ಹೇಳಿದ ಹಾಗೆ ಇದು ಕೇವಲ ಮಹಿಳಾ ದಿನಾಚರಣೆ ಮಾತ್ರ, ಇದು ರಾಜಕೀಯ ಪ್ರೇರಿತ ಕಾರ್ಯಕ್ರಮವಲ್ಲ." ಎಂದು ಭವಾನಿ ರೇವಣ್ಣ ಸ್ಪಷ್ಟಪಡಿಸಿದ್ದರು. ಆದಾಗ್ಯೂ ಈ ರೀತಿ ಮಹಿಳಾ ಸಮಾವೇಶಗಳನ್ನು ಮಾಡುವ ಮೂಲಕ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡಲಿದ್ದಾರಾ ಎಂಬ ಕುತೂಹಲ ಮೂಡಿದೆ.

ಓದಿ : ವಿಶ್ವಾಸ ಬೇರೆ, ರಾಜಕೀಯವೇ ಬೇರೆ.. ಎರಡಕ್ಕೂ ಒಂದೇ ಅರ್ಥ ಕಲ್ಪಿಸಬೇಡಿ.. ಭವಾನಿ ರೇವಣ್ಣ

Last Updated : Mar 20, 2021, 9:05 AM IST

ABOUT THE AUTHOR

...view details