ಕರ್ನಾಟಕ

karnataka

ಕುಮಾರಸ್ವಾಮಿ ಎಲ್ಲಿ? ಆರ್‌ಎಸ್‌ಎಸ್‌ ಎಲ್ಲಿ? ರಾಜ್ಯದ ಜನ ಜೆಡಿಎಸ್ ಮರಿಯುತ್ತಿದ್ದಾರೆ; ಈಶ್ವರಪ್ಪ

By

Published : Oct 9, 2021, 12:25 PM IST

ರಾಜ್ಯದಲ್ಲಿ ಜನರು ಜೆಡಿಎಸ್‌ ಅನ್ನು ಮರೆಯುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Where is kumaraswamy? people of state forgetting JDS; Minister Eshwarappa
ಕುಮಾರಸ್ವಾಮಿ ಎಲ್ಲಿ? ಆರ್‌ಎಸ್‌ಎಸ್‌ ಎಲ್ಲಿ? ರಾಜ್ಯದ ಜನ ಜೆಡಿಎಸ್ ಮರಿಯುತ್ತಿದ್ದಾರೆ; ಹೆಚ್‌ಡಿಕೆ ವಿರುದ್ಧ ಸಚಿವ ಈಶ್ವರಪ್ಪ ಕಿಡಿ

ಗದಗ:ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದ್ರೆ ಪ್ರಚಾರ ಸಿಗುತ್ತೆ ಅನ್ನೋ ಭ್ರಮೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಇದ್ದಾರೆ. ಅದಕ್ಕೆ ಪದೇ ಪದೆ ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇಷ್ಟು ಕೀಳು ಮಟ್ಟದ ಪ್ರಚಾರಕ್ಕೆ ಕುಮಾರಸ್ವಾಮಿ ಇಳಿತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಹೆಚ್‌ಡಿಕೆ ವಿರುದ್ಧ ಸಚಿವ ಈಶ್ವರಪ್ಪ ಕಿಡಿ

ಸೂರ್ಯನಿಗೆ ಬೈದ್ರೆ ಜನರು ನೋಡ್ತಾರೆ ಅಂದ್ಕೊತಾರೆ. ಹಾಗೇ ಕುಮಾರಸ್ವಾಮಿ ಆರ್‌ಆರ್‌ಎಸ್ ಟೀಕೆ ಮಾಡಿ ಪ್ರಚಾರ ಪಡೀತಿದ್ದಾರೆ. ಕುಮಾರಸ್ವಾಮಿ ಎಲ್ಲಿ? ಆರ್‌ಎಸ್‌ಎಸ್ ಎಲ್ಲಿ? ಅಂತಾ ಲೇವಡಿ ಮಾಡಿದರು.

ಕಾಶ್ಮೀರ ಪಂಡಿತರ ಸಾವಿಗೆ ಆರ್‌ಎಸ್‌ಎಸ್ ಕಾರಣ ಅಂತಾರೆ. ಭಗವಂತ ಕುಮಾರಸ್ವಾಮಿ ಅವರಿಗೆ ಬೇಗ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿಗೆ ದೇವೇಗೌಡರಿಂದ ಲಾಭ ಇಲ್ಲ. ಆರ್‌ಎಸ್‌ಎಸ್ ಹುಟ್ಟಿದಾಗ ಹೆಚ್‌ಡಿ ದೇವೇಗೌಡರೇ ಹುಟ್ಟಿರಲ್ಲಿಲ್ಲ. ಆರ್‌ಎಸ್‌ಎಸ್ ಬೆಳವಣಿಗೆಗೆ ದೇವೇಗೌಡರ ಪ್ರಭಾವ ಅವಶ್ಯಕತೆ ಇಲ್ಲ. ದೇವೇಗೌಡ, ಅವರ ಮಕ್ಕಳು, ಅವರ ಮೊಮ್ಮಕ್ಕಳು ಆನಂದವಾಗಿ ರಾಜಕೀಯ ಮಾಡಲಿ. ರಾಜ್ಯದಲ್ಲಿ ಜನರು ಜೆಡಿಎಸ್‌ ಅನ್ನು ಮರೆಯುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ರು.

ABOUT THE AUTHOR

...view details