ಕರ್ನಾಟಕ

karnataka

ಅಯೋಗ್ಯರನ್ನು ಆರಿಸಿದರೆ ಪ್ರಜಾಪ್ರಭುತ್ವ ಹದಗೆಡುತ್ತದೆ: ತೋಂಟದ ಸಿದ್ಧರಾಮ ಸ್ವಾಮೀಜಿ

By

Published : Mar 4, 2021, 11:04 PM IST

ಪಂಚಮಸಾಲಿ ಸಮಾಜ 4 ತಿಂಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಸಮಿತಿ ರಚನೆ ಕಳೆದ 4 ತಿಂಗಳ ಹಿಂದೆಯೇ ಆಗಬೇಕಿತ್ತು. ತಡವಾಗಿ ಸಮಿತಿ ರಚನೆ ಆದರೂ ಸಂತಸದ ವಿಚಾರವಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

thontada-siddrama-swamyji
ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ

ಗದಗ: ಇತ್ತೀಚಿನ ರಾಜಕೀಯ ಬೆಳವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಗದಗದಲ್ಲಿ ಡಾ. ತೋಂಟದ ಸಿದ್ಧರಾಮ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯೋಗ್ಯ ವ್ಯಕ್ತಿಗಳನ್ನು ಆರಿಸಿ ತರಬೇಕು. ಹಣ ಹೆಂಡಕ್ಕೆ ಆಸೆ ಮಾಡಿ ಅಯೋಗ್ಯರನ್ನು ಆರಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಡುತ್ತದೆ. ಬೇವಿನ ಬೀಜವನ್ನು ಬಿತ್ತಿ ಮಾವಿನ ಫಲ ಬೇಕೆಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

5 ವರ್ಷಕ್ಕೊಮ್ಮೆ ಮಹತ್ವದ ಚುನಾವಣೆ ಬರುತ್ತದೆ, ಆ ವೇಳೆ ಚುನಾವಣೆಯಲ್ಲಿ ನಾವೇ ದಾರಿ ತಪ್ಪುತ್ತೇವೆ. ಮುಂದೆ 5 ವರ್ಷವೂ ದಾರಿ ತಪ್ಪುತ್ತೆ ಎಂದರು. ಜನಪ್ರತಿನಿಧಿಗಳದಷ್ಟೇ ದೋಷ ಇರುವುದಿಲ್ಲ. ಅವರನ್ನು ಆಯ್ಕೆ‌ ಮಾಡುವ ಜನರ‌ಲ್ಲೂ ದೋಷವಿದೆ. ಜನರು ಸ್ವಾರ್ಥಕ್ಕಾಗಿ ಆಮಿಷಕ್ಕಾಗಿ ಜನಪ್ರತಿನಿಧಿ ಆಯ್ಕೆ ಮಾಡಿದರೆ ಇದೇ ರೀತಿ ಆಗುತ್ತದೆ ಎಂದರು.

ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ

ಮೀಸಲಾತಿ ಹೋರಾಟ ಬಗ್ಗೆ ಮಾತನಾಡಿದ ಶ್ರೀಗಳು, ಈಗಾಗಲೇ ಪಂಚಮಸಾಲಿ ಸಮಾಜ 4 ತಿಂಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಸಮಿತಿ ರಚನೆ ಕಳೆದ 4 ತಿಂಗಳ ಹಿಂದೆಯೇ ಆಗಬೇಕಿತ್ತು. ತಡವಾಗಿ ಸಮಿತಿ ರಚನೆ ಆದರೂ ಸಂತಸದ ವಿಚಾರವಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಅಲ್ಲದೆ ಮೀಸಲಾತಿ ಮಾಡುವುದರಿಂದ ಯಾರಿಗೆ ತೊಂದರೆ ಆಗುತ್ತದೆ, ಲಾಭ ಯಾರಿಗೆ ಆಗಲಿದೆ ಎಂಬುದು ತಿಳಿಯಬೇಕು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ದೊರೆಯಬೇಕಿದೆ. ಮೀಸಲಾತಿಯನ್ನು ಉಳ್ಳವರು ಪಡೆದುಕೊಳ್ಳುವಂತೆ ಆಗಬಾರದು. ಸಾಮಾನ್ಯ ಜನರಿಗೆ ಮೀಸಲಾತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಸಚಿವರು, ಶಾಸಕರು, ರಾಜಕಾರಣಿಗಳು ಪಕ್ಷ ಬೇಧ ಮರೆತು ಹೋರಾಟ ಮಾಡಬೇಕಿದೆ. ಸಮಾಜದಲ್ಲಿ ಹಿಂದುಳಿದ ಜನರಿಗೆ ಅವಕಾಶ ಒದಗಿಸುವ ಕೆಲಸವೇ ಸರ್ಕಾರದ ಉದ್ದೇಶವಾಗಿದೆ ಎಂದರು.

ಇದನ್ನೂ ಓದಿ:ಚಲಿಸುತ್ತಿದ್ದ ಮಾರುತಿ ವ್ಯಾನ್​ಗೆ ಆಕಸ್ಮಿಕ ಬೆಂಕಿ: ಕಾರು ಸುಟ್ಟು ಭಸ್ಮ

ABOUT THE AUTHOR

...view details