ಕರ್ನಾಟಕ

karnataka

ಬೆಟಗೇರಿ ನಗರಸಭೆ ಚುನಾವಣೆ ಮೀಸಲಾತಿ ಪಟ್ಟಿ ರಿಲೀಸ್​: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬುಗಿಲೆದ್ದ ಅಸಮಾಧಾನ

By

Published : Sep 9, 2021, 11:17 AM IST

reservation-list-announced-for-betageri-city-corporation-election

ಗದಗ ಜಿಲ್ಲೆಯ ಬೆಟಗೇರಿ ನಗರಸಭೆಗೆ ಕೊನೆಗೂ ಚುನಾವಣೆ ನಿಗದಿಯಾಗಿದೆ. ಆದರೆ, ಮೀಸಲಾತಿ ಪಟ್ಟಿಯಿಂದಾಗಿ ಬಿಜೆಪಿಯಲ್ಲಿ ಅಸಮಾಧಾನ ಬುಗಿಲೆದ್ದಿದೆ. ಮೀಸಲಾತಿ ಪಟ್ಟಿಯಿಂದ ಕಾಂಗ್ರೆಸ್​ಗೆ ಲಾಭವಾಗಲಿದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರು ಆರೋಪಿಸಿದ್ದಾರೆ.

ಗದಗ: ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ನೂತನ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಕಳೆದ ಮೂರು ವರ್ಷಗಳಿಂದ ನಗರಸಭೆ ಚುನಾವಣೆಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ. ಆದರೆ, ಈ ಮೀಸಲಾತಿ ಪಟ್ಟಿ ಬಿಜೆಪಿಯಲ್ಲಿ ಬೆಂಕಿ ಹೊತ್ತಿಸಿದೆ.

ಮೀಸಲಾತಿ ಪಟ್ಟಿಯಿಂದ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಕೇಳಿ ಬಂದಿದ್ದು, ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬುಗಿಲೆದ್ದ ಅಸಮಾಧಾನ

ಟಿಕೆಟ್ ಆಕಾಂಕ್ಷಿಗಳು ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್, ಎಂಎಲ್​​ಸಿ ಎಸ್​​​​.ವಿ ಸಂಕನೂರ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ಬಿಡುಗಡೆಯಾದ ಮೀಸಲಾತಿ ಪಟ್ಟಿ ಹಿನ್ನೆಲೆ ಹಲವು ವಾರ್ಡ್​ನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್​ ಸಿಗುವುದು ಅನುಮಾನ ಎನ್ನುವಂತಾಗಿದೆ.

ಈ ಹಿನ್ನೆಲೆ ಇನ್ನೆರಡು ದಿನಗಳ ಕಾಲ ಮೀಸಲಾತಿ ಕುರಿತಂತೆ ಬದಲಾವಣೆ ಸಮಯಾವಕಾಶವಿದ್ದು, ಶೀಘ್ರ ಬದಲಾವಣೆಯಾಗಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸುತ್ತಿದ್ದಾರೆ.

ಬಿಜೆಪಿ ಜಿಲ್ಲಾ ಮಟ್ಟದ ಸಭೆಯಲ್ಲೂ ಕಾರ್ಯಕರ್ತರು, ಮುಖಂಡರ ಮೀಸಲಾತಿ ಪಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಇದೇ ಪಟ್ಟಿಯ ಅನ್ವಯ ಚುನಾವಣೆ ನಡೆದರೆ ಬಿಜೆಪಿಗೆ ಗೆಲುವು ಕಷ್ಟವಾಗಲಿದೆ ಎಂದು ಕಾರ್ಯಕರ್ತರು ಆತಂಕ ಹೊರಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಭಟ್ಕಳದಲ್ಲಿ ಬೆಳ್ಳಂಬೆಳಗ್ಗೆ 3 ಅಂಗಡಿ, ಮನೆ ದರೋಡೆ: ಬುರ್ಖಾವನ್ನೂ ಬಿಡದ ಖದೀಮರು..

ABOUT THE AUTHOR

...view details