ಕರ್ನಾಟಕ

karnataka

ಗದಗದಲ್ಲಿ ನಿರಂತರ ಮಳೆಗೆ ಗೋಡೆ ಕುಸಿತ.. 25ಕ್ಕೂ ಹೆಚ್ಚು ಮನೆಗಳು ಹಾನಿ!

By

Published : Jul 23, 2021, 1:19 PM IST

ನಿರಂತರ ಮಳೆಗೆ ಮನೆ ಗೋಡೆಗಳು ಕುಸಿಯುತ್ತಿದ್ದು, ಗದಗ ಜಿಲ್ಲಾದ್ಯಂತ 25ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿರುವ ವರದಿಯಾಗಿದೆ.

25 houses damaged, 25 houses damaged due to wall collapse, 25 houses damaged due to wall collapse in Gadag, Gadag news,  25 ಮನೆಗಳಿಗೆ ಹಾನಿ, ಗೋಡೆ ಕುಸಿತದಿಂದಾಗಿ 25 ಮನೆಗಳು ಕುಸಿತ, ಗದಗದಲ್ಲಿ ಗೋಡೆ ಕುಸಿತದಿಂದಾಗಿ 25 ಮನೆಗಳು ಕುಸಿತ, ಗದಗ ಸುದ್ದಿ,
ಗದಗದಲ್ಲಿ ನಿರಂತರ ಮಳೆಗೆ ಗೋಡೆ ಕುಸಿತ

ಗದಗ:ಕಳೆದ ಕೆಲವು ದಿನಗಳಿಂದ ಗದಗ ಜಿಲ್ಲಾದ್ಯಂತ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಗೆ ಲಕ್ಷ್ಮೇಶ್ವರ ತಾಲೂಕಿನ ಅಡರಗಟ್ಟಿಯಲ್ಲಿ ಮನೆಯ ಗೋಡೆ ಕುಸಿದಿದೆ. ಜಿಲ್ಲಾದ್ಯಂತ ಸುಮಾರು 25 ಕ್ಕೂ ಹೆಚ್ಚು ಮನೆಗಳಿಗೂ ಹಾನಿಯಾಗಿರುವ ವರದಿಯಾಗಿದೆ.

ಮಳೆಯ ಅಬ್ಬರಕ್ಕೆ ಮನೆಗಳು ಛಾವಣಿ ಸಹಿತ ಕುಸಿದ ಬೀಳುತ್ತಿರುವ ಘಟನೆಗಳೂ ನಡೆದಿವೆ‌. ತಾಲೂಕಿನ ಅಡರಕಟ್ಟಿ ಗ್ರಾಮದ ಶಾಂತವ್ವ ಹಡಪದ ಎಂಬವವರ ಮನೆಗೆ ಮಳೆಯಿಂದ ಹಾನಿಯಾಗಿದ್ದು, ನಿನ್ನೆ ರಾತ್ರಿ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ABOUT THE AUTHOR

...view details