ಕರ್ನಾಟಕ

karnataka

ಗದಗ: ಮಳೆಯ ಆರ್ಭಟಕ್ಕೆ ಮನೆಗಳಿಗೆ ನುಗ್ಗಿದ ಚರಂಡಿ ನೀರು

By

Published : Jul 11, 2020, 8:33 PM IST

ಜನತಾ ಬಜಾರ, ಜನತಾ ಪ್ಲಾಟ್, ಎಸ್.ಎಂ. ಕೃಷ್ಣ ನಗರ, ಬೆಟಗೇರಿ ಬೈಪಾಸ್ ರಸ್ತೆಯಲ್ಲಿ ‌ಮಳೆ ನೀರು ಮತ್ತು ಚರಂಡಿ ನೀರು ಕೂಡಿ ಮನೆಗಳಿಗೆ ನುಗ್ಗಿದ್ದು, ನೀರನ್ನು ಹೊರ ಹಾಕಲು ಜನ ಪರದಾಡಿದ್ದಾರೆ. ಅಲ್ಲದೇ ಮನೆಯಲ್ಲಿನ ದವಸ ಧಾನ್ಯಗಳಿಗೆ ಹಾನಿಯಾಗಿದೆ.

ಚರಂಡಿ ನೀರು
ಚರಂಡಿ ನೀರು

ಗದಗ:‌ಇಂದು ಹಲವು ಕಡೆ ಸುರಿದ ಧಾರಾಕಾರ ಮಳೆಯಿಂದ ಗದಗ-ಬೆಟಗೇರಿ ಅವಳಿ ನಗರದ ಜನರು ಕಂಗಾಲಾಗಿದ್ದಾರೆ.

ನಗರದ ಜನತಾ ಬಜಾರ, ಜನತಾ ಪ್ಲಾಟ್, ಎಸ್.ಎಂ. ಕೃಷ್ಣ ನಗರ, ಬೆಟಗೇರಿ ಬೈಪಾಸ್ ರಸ್ತೆಯಲ್ಲಿ ‌ಮಳೆ ನೀರು ಮತ್ತು ಚರಂಡಿ ನೀರು ಕೂಡಿ ಮನೆಗಳಿಗೆ ‌ ನುಗ್ಗಿದ್ದು, ನೀರನ್ನು ಹೊರ ಹಾಕಲು ಜನ ಪರದಾಡಿದ್ದಾರೆ. ಅಲ್ಲದೇ ಮನೆಯಲ್ಲಿನ ದವಸ ಧಾನ್ಯಗಳಿಗೆ ಹಾನಿಯಾಗಿದೆ.

ಮಳೆಯ ಆರ್ಭಟಕ್ಕೆ ಮನೆಗಳಿಗೆ ನುಗ್ಗಿದ ಚರಂಡಿ ನೀರು

ನಗರದ ಅಗ್ನಿಶಾಮಕ ದಳ ಸಿಬ್ಬಂದಿಯ ವಸತಿ ಗೃಹಗಳಿಗೂ ಮಳೆ ನೀರು ನುಗ್ಗಿದೆ. ಎಸ್.ಎಂ. ಕೃಷ್ಣ ನಗರದ ರಸ್ತೆಯ ಮೇಲೆ ಚರಂಡಿಯ ನೀರು ಹರಿದು ಬಂದ ಪರಿಣಾಮ ವಾಹನ ಸವಾರರು ಪರದಾಡಿದರು.

ABOUT THE AUTHOR

...view details