ಕರ್ನಾಟಕ

karnataka

ಗ್ರಾ.ಪಂ. ಚುನಾವಣೆಯಲ್ಲಿ ರಾಜಕೀಯ ದ್ವೇಷ: ಅಭ್ಯರ್ಥಿಯ ಶೇಂಗಾ ಬಣವೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

By

Published : Dec 21, 2020, 6:43 AM IST

Updated : Dec 21, 2020, 7:07 AM IST

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪರಸಾಪೂರದಲ್ಲಿ ರಾಜಕೀಯ ದ್ವೇಷಕ್ಕೆ ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಯ ಶೇಂಗಾ ಬಣವೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಈ ಸಂಬಂಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಭ್ಯರ್ಥಿಯ ಶೇಂಗಾ ಬಣವೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು
Perpetrators put fire to candidates groundnut Stack

ಗದಗ: ಸ್ಥಳೀಯ ಗ್ರಾಮ‌ ಪಂಚಾಯಿತಿ ಚುನಾವಣಾ ರಾಜಕೀಯ ದ್ವೇಷಕ್ಕೆ ಅಭ್ಯರ್ಥಿವೋರ್ವನ ಶೇಂಗಾ ಬಣವೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪರಸಾಪೂರದಲ್ಲಿ ನಡೆದಿದೆ.

ಅಭ್ಯರ್ಥಿಯ ಶೇಂಗಾ ಬಣವೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಹನುಮಂತ ಬೇರಗಣ್ಣವರ್ ಎಂಬ ರೈತನಿಗೆ ಸೇರಿದ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಸಾಪೂರ 6ನೇ ವಾರ್ಡ್​ನಿಂದ ಅಭ್ಯರ್ಥಿಯಾಗಿ ರೈತ ಹನುಮಂತ ಕಣಕ್ಕಿಳಿದ್ದರು. ರಾಜಕೀಯ ವೈಷಮ್ಯಕ್ಕೆ ಅಭ್ಯರ್ಥಿಯ ಶೇಂಗಾ ಬಣವೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟು ಈ ದುಷ್ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಓದಿ: ಜಿ.ಪಂ. ಚುನಾವಣೆಗೆ ಗ್ರಾ.ಪಂ. ಚುನಾವಣೆಯನ್ನೇ ಭೂಮಿಕೆ ಮಾಡಿಕೊಂಡ‌ ಬಿಜೆಪ

ಘಟನೆಯಿಂದ ಸುಮಾರು 5 ಎಕರೆಯಲ್ಲಿ ಬೆಳೆದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಶೇಂಗಾ ಹೊಟ್ಟು ಬೆಂಕಿ ಕೆನ್ನಾಲಿಗೆ ಆಹುತಿಯಾಗಿದೆ. ಬಣವೆಗೆ ಹತ್ತಿರುವ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳಿಯರು ನಂದಿಸುವ ಕಾರ್ಯವನ್ನು ನಡೆಸಿದ್ದಾರೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 21, 2020, 7:07 AM IST

ABOUT THE AUTHOR

...view details