ಕರ್ನಾಟಕ

karnataka

ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಕೃಷಿಯಲ್ಲಿ ಪರಿವರ್ತನೆ ಮಾಡಲು ಸಾಧ್ಯವಿರಲಿಲ್ಲ: ಪ್ರಹ್ಲಾದ ಜೋಷಿ

By

Published : Sep 26, 2021, 1:20 AM IST

Updated : Sep 26, 2021, 1:59 AM IST

ದೆಹಲಿಯಲ್ಲಿ ಕೆಲ ರೈತರು, ಇನ್ನು ಕೆಲವು ರೈತರು ಅಲ್ಲದವರು ಹೋರಾಟದಲ್ಲಿದ್ದಾರೆ. ಬಿಜೆಪಿ ವಿರೋಧಿ ಮನಸ್ಸುಗಳು ಈ ಬಂದ್ ಕೆಲಸ ಮಾಡ್ತಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

central-minister-prahlad-joshi-on-congress
ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಕೃಷಿಯಲ್ಲಿ ಪರಿವರ್ತನೆ ಮಾಡಲು ಸಾಧ್ಯವಿರಲಿಲ್ಲ: ಪ್ರಹ್ಲಾದ ಜೋಷಿ

ಗದಗ:ಭಾರತ್ ಬಂದ್ ಯಾವುದೇ ಪರಿಣಾಮ ಬೀರುವುದಿಲ್ಲ. ಪಂಜಾಬ್ ಹಾಗೂ ಇತರೆ 2 ರಾಜ್ಯ ಹೊರತುಪಡಿಸಿ ದೇಶದಲ್ಲಿ ಎಲ್ಲರೂ ಕೃಷಿ ಕಾಯ್ದೆ ಸ್ವಾಗತಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

ಗದಗ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳಿಗೆ ಕೃಷಿಯಲ್ಲಿ ಅಮೂಲ್ಯ ಪರಿವರ್ತನೆ ಮಾಡಲು ಸಾಧ್ಯವಿರಲಿಲ್ಲ. ಬಿಜೆಪಿ ಜಾರಿ ಮಾಡಿದ ಕಾನೂನನ್ನು ಕಾಂಗ್ರೆಸ್ ಮ್ಯಾನಿಫೆಸ್ಟ್​​ನಲ್ಲಿ ಹೇಳಿಕೊಂಡಿದ್ದರು. ಮಾಜಿ‌ ಪ್ರಧಾನಿ ಮನಮೋಹನ್ ಸಿಂಗ್ ಸಹ ಹೇಳಿದ್ದರು ಎಂದಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಆದರೆ ಕಾಂಗ್ರೆಸ್​​ನಲ್ಲಿ ಅದನ್ನು ಜಾರಿ ಮಾಡುವ ಧೈರ್ಯ, ತಾಕತ್ತು ಇಲ್ಲಿರಲಿಲ್ಲ. ನರೇಂದ್ರ ಮೋದಿ ಸರ್ಕಾರ ಧೈರ್ಯದಿಂದ ಅನೇಕ ಸುಧಾರಣೆಗಳನ್ನು ಮಾಡಿದೆ ಎಂದು ಜೋಷಿ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಕೆಲ ರೈತರು, ಇನ್ನು ಕೆಲವು ರೈತರು ಅಲ್ಲದವರು ಹೋರಾಟದಲ್ಲಿದ್ದಾರೆ. ಅವರ ಜೊತೆ 11 ಬಾರಿ ಮಾತುಕತೆಯಾಗಿದೆ. ಬಿಜೆಪಿ ವಿರೋಧಿ ಮನಸ್ಸುಗಳು ಈ ಬಂದ್ ಕೆಲಸ ಮಾಡ್ತಿದ್ದಾರೆ. ಆದರೆ ಜನರು ಕೃಷಿ ಕಾಯ್ದೆ ಪರವಾಗಿದ್ದಾರೆ. ಭಾರತ್ ಬಂದ್​​ನಿಂದ ಯಾವುದೇ ಪ್ರಯೋಜನವಾಗಲ್ಲ. ಇನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡದಂತೆ ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದನ್ನೂ ಓದಿ:ಕೊನೆ ದಿನ ಸದನವನ್ನು ಕಾಂಗ್ರೆಸ್ ಬಹಿಷ್ಕರಿಸಿದ್ದು ನೋವು ತಂದಿದೆ: ಸಚಿವ ಈಶ್ವರಪ್ಪ

Last Updated :Sep 26, 2021, 1:59 AM IST

ABOUT THE AUTHOR

...view details