ಕರ್ನಾಟಕ

karnataka

ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರಿಗೆ ಚಾಕು ಇರಿತ: ಕಿಮ್ಸ್​ಗೆ ದಾಖಲು

By

Published : Sep 19, 2022, 9:14 AM IST

ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಇಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ.

hubli
ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರಿಗೆ ಚಾಕು ಇರಿತ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಯುವಕರ ಗುಂಪೊಂದು ಇಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ದೇವಾಂಗಪೇಟೆಯ ಸ್ಮಶಾನದ ಬಳಿ ನಡೆದಿದೆ.

ಕಾರ್ತಿಕ್ ಹಾಗೂ ನಾಗರಾಜ್ ಎಂಬುವರ ಜೊತೆ ಯುವಕರ ಗುಂಪೊಂದು ಜಗಳ ತಗೆದಿದೆ. ‌ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೇರಿದ್ದು, ಇಬ್ಬರ ಕುತ್ತಿಗೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಯುವಕರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ‌

ಇದನ್ನೂ ಓದಿ:ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ.. ತಡವಾಗಿ ದೂರು ನೀಡಿದ‌ ಮಹಿಳೆ

ಚಾಕುವಿನಿಂದ ಇರಿದ ಯುವಕರ ಗುಂಪು ಪರಾರಿಯಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರೇಯಸಿ ಮತ್ತು ಆಕೆಯ ಜೊತೆಗಿದ್ದ ಪ್ರಿಯಕರನಿಗೆ ಚಾಕುವಿನಿಂದ ಇರಿದ ಭಗ್ನ ಪ್ರೇಮಿ

ABOUT THE AUTHOR

...view details