ಕರ್ನಾಟಕ

karnataka

ಪುಟ್ಟ ಪೋರಿಯ ವಿಶಿಷ್ಟ ಸ್ಕೇಟಿಂಗ್ ಕೌಶಲ! ಹುಬ್ಬಳ್ಳಿಯಲ್ಲಿ ಈಕೆಯದ್ದೇ 'ಸ್ತುತಿ'!

By

Published : Jun 23, 2019, 3:03 PM IST

ದೇಶದಲ್ಲೇ ಮೊದಲ ಬಾರಿಗೆ ಮೂರು ರಿಂಗ್ ಬಳಸಿ ಸ್ಕೇಟಿಂಗ್ ಮಾಡುವ ಮೂಲಕ ಇಲ್ಲಿನ ಪೋರಿಯೊಬ್ಬಳು ದಾಖಲೆ ನಿರ್ಮಿಸಿದ್ದಾಳೆ.

ವಿಶ್ವ ದಾಖಲೆ ಬರೆದ ಉತ್ತರ ಕರ್ನಾಟಕದ ಪೊರಿ

ಹುಬ್ಬಳ್ಳಿ :ಇಲ್ಲಿನಬಾಲ ಪ್ರತಿಭೆಯೊಬ್ಬಳು ವಿಶಿಷ್ಟವಾಗಿ ಸ್ಕೇಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ. 9 ವರ್ಷದ ಸ್ತುತಿ ಕುಲಕರ್ಣಿ ಎಂಬ ಬಾಲಕಿಯ ಸ್ಕೇಟಿಂಗ್ ಚಾತುರ್ಯ ನೋಡಿದವರು ಶಹಬಾಸ್‌ ಎನ್ನುತ್ತಿದ್ದಾರೆ.

ಭಾರತದಲ್ಲಿಯೇ ಮೊದಲ ಬಾರಿಗೆ ಮೂರು ರಿಂಗ್ ಬಳಸಿ ಸ್ಕೇಟಿಂಗ್ ಮಾಡುವ ಮೂಲಕಸ್ತುತಿ ಕುಲಕರ್ಣಿ ದಾಖಲೆ ನಿರ್ಮಿಸಿದ್ದಾಳೆ.

ವಿಶ್ವ ದಾಖಲೆ ಬರೆದ ಉತ್ತರ ಕರ್ನಾಟಕದ ಪೊರಿ

ಹುಬ್ಬಳ್ಳಿಯ ಪರಿವರ್ತನಾ ಗುರುಕುಲ ಶಾಲೆಯಲ್ಲಿ 4 ನೇ ತರಗತಿ ಓದುತ್ತಿರುವ ಸ್ತುತಿ, ಕಿಶೋರ್ ಕುಲಕರ್ಣಿ ಹಾಗೂ ರಶ್ಮಿ ಕುಲಕರ್ಣಿ ಅವರ ಸುಪುತ್ರಿ. ಈ ಬಾಲಕಿ ಪ್ರದರ್ಶಿಸುವ ಈ ರೀತಿಯ ವಿಶೇಷ ಸ್ಕೇಟಿಂಗ್‌ ಈಗಾಗಲೇ ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಗೋಲ್ಡನ್ ಬುಕ್ ರೆಕಾರ್ಡ್ ಸೇರಿದೆ. 28 ಸೆಕೆಂಡುಗಳಲ್ಲಿ ಮೂರು ರಿಂಗುಗಳನ್ನು ಸೊಂಟದಲ್ಲಿ ತಿರುಗಿಸುತ್ತಾ ಸ್ಕೇಟಿಂಗ್ ಮಾಡಿ ಈಕೆ ದಾಖಲೆ ನಿರ್ಮಿಸಿದ್ದಾಳೆ.

ABOUT THE AUTHOR

...view details