ಕರ್ನಾಟಕ

karnataka

ವಾಣಿಜ್ಯ ನಗರಿಯಲ್ಲಿ ಗೋ ಹತ್ಯೆ: ವಿಡಿಯೋ ಮೂಲಕ ಕಮೀಷನರ್​ಗೆ ದೂರು‌ ಕೊಟ್ಟ ವಿಹೆಚ್​ಪಿ

By

Published : Feb 7, 2023, 6:06 PM IST

ಗೋ ಹತ್ಯೆ ನಿಷೇಧ ಕಾನೂನು ಇದ್ದರೂ ಹುಬ್ಬಳ್ಳಿ - ಧಾರವಾಡದಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿ ಖಾನೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್​ ದೂರು ದಾಖಲಿಸಿದೆ.

slaughterhouses
ವಾಣಿಜ್ಯ ನಗರಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಗೋ ಹತ್ಯೆ

ವಾಣಿಜ್ಯ ನಗರಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಗೋಹತ್ಯೆ ನಿಷೇಧಿಸುವಂತೆ ವಿಹೆಚ್​ಪಿ ದೂರು

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅವ್ಯಾಹತವಾಗಿ ಕಸಾಯಿ ಖಾನೆಯಲ್ಲಿ ನೂರಾರು ಗೋವುಗಳ ಹತ್ಯೆ ಮಾಡಲಾಗುತ್ತಿದೆ. ಸರ್ಕಾರ ನಾಮಕೇವಾಸ್ತೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ ಎಂದು ಬಜರಂಗ ದಳ ವಿಭಾಗ ಸಂಚಾಲಕ ಶಿವಾನಂದ ಸತ್ತಿಗೇರಿ ಆರೋಪಿಸಿದರು. ಹಳೇ ಹುಬ್ಬಳ್ಳಿಯ ಅಲ್ತಾಪ್ ನಗರದಲ್ಲಿ ನೂರಾರು ಗೋವುಗಳ ಹತ್ಯೆ ಮಾಡಿರುವ ವಿಡಿಯೋ ಮೂಲಕ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರ್​ಗೆ ದೂರು ನೀಡಿದರು.

ದೂರು ನೀಡಿ ಮಾತನಾಡಿದ ಅವರು, ಕಸಬಾಪೇಟೆ ಠಾಣೆ ವ್ಯಾಪ್ತಿಯಲ್ಲಿ ಗೋ ಹತ್ಯೆ ನಡೆಯುತ್ತಿದ್ದರೂ ಪೊಲೀಸರು ಏನ್ ಮಾಡ್ತಿದಾರೆ ಎಂದು ಆಕ್ರೋಶ ಹೊರಹಾಕಿದರು. ಗೋ ಹತ್ಯೆಗೆ ಚಿಕ್ಕ ಚಿಕ್ಕ ಮಕ್ಕಳ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿದೆ ಕಾನೂನು. ಧಾರವಾಡ ಜಿಲ್ಲಾ ಮಕ್ಕಳ ಕಲ್ಯಾಣ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ಕಾರ್ಯ ನಡೆಯುತ್ತಿದ್ದರೂ, ಸರ್ಕಾರ ಗೋ ಹತ್ಯೆ ನಿಷೇಧ ಮಾಡಿದ್ದರೂ ಕೂಡ ರಾಜಾರೋಷವಾಗಿ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದರು.

ಗೋಹತ್ಯೆ ತಡೆಯುವಲ್ಲಿ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ ವಿಫಲವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಹಿಂದೂಗಳ ನಂಬಿಕೆಯನ್ನು ಉಳಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಇಲ್ಲಿ ಕೇಂದ್ರ ಮಂತ್ರಿ, ಮಾಜಿ ಮುಖ್ಯಮಂತ್ರಿ ಇದ್ದರೂ ಇಂತಹ ಗೋ ಹತ್ಯೆ ನಡೆದರೂ ಕಣ್ಣು ಮುಚ್ಚಿ ಕುಳುತ್ತಿದ್ದಾರೆ. ಹಿಂದೂಗಳ ಸರ್ಕಾರ ಎಂದು ಬಿಜೆಪಿ ಹೇಳತ್ತೆ, ಎಲ್ಲಿ ಗೋ ಕಾಪಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಕಸಾಯಿಖಾನೆಗೆ ಅಟ್ಯಾಕ್ ಮಾಡ್ತೀವಿ:ಪೊಲೀಸ್​ ಇಲಾಖೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆನಾವೇ ಕಸಾಯಿಖಾನೆಗೆ ಅಟ್ಯಾಕ್ ಮಾಡುತ್ತೇವೆ. ಒಂದು ವಾರದಲ್ಲಿ ಕಸಾಯಿಖಾನೆ ರದ್ದು ಮಾಡದೇ ಹೋದಲ್ಲಿ, ನಾವೇ ದಾಳಿ ಮಾಡಿ ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅನಧಿಕೃತ ಕಸಾಯಿ ಖಾನೆ ಮುಚ್ಚಿ: ಹುಬ್ಬಳ್ಳಿ - ಧಾರವಾಡದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಬಂದ ನಂತರವೂ ಅಕ್ರಮವಾಗಿ ಕಸಾಯಿ ಖಾನೆಗಳನ್ನು ನಡೆಸಲಾಗುತ್ತಿದೆ. ಅವುಗಳ ಮೇಲೆ ಅಧಿಕಾರಿಗಳು ಸರಿಯಾದ ಕ್ರಮ ಜರುಗಿಸಬೇಕು. ವಿಶ್ವ ಹಿಂದೂ ಪರಿಷತ್​ ಮತ್ತು ಭಜರಂಗದಳ ಪೊಲೀಸರಿಗೆ ಕ್ರಮ ಜರುಗಿಸ ಹತ್ತು ದಿನಗಳ ಕಾಲಾವಕಾಶ ನೀಡುತ್ತದೆ ನಂತರವೂ ಮುಂದುವರೆದರೆ ನಾವು ದಾಳಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ರೈತ ಮುಖಂಡ ಹೇಮನಗೌಡ ಮಾತನಾಡಿ, ಗೋ ಹತ್ಯೆ ಕಾನೂನಾತ್ಮಕವಾಗಿ ಜಾರಿ ಮಾಡಲಾಗಿದೆ. ಆದರೆ, ಗೋವುಗಳ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ನಿರಂತರವಾಗಿ ಅಕ್ರಮ ಕಸಾಯಿ ಖಾನೆಗಳಲ್ಲಿ ಗೋ ಹತ್ಯೆ ಮಾಡಲಾಗುತ್ತಿದೆ. ಸರ್ಕಾರ ನಾಮಕೇವಾಸ್ತೆ ಕಾನೂನು ಮಾಡಿದೆ. ಹಿಂದೂಗಳ ವೋಟ್​​ ಬ್ಯಾಂಕ್ ಸಲುವಾಗಿ ಕಾನೂನು ತಂದಿದೆ. ಕೂಡಲೇ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಮತಾಂತರ ಮತ್ತು ಗೋ ಹತ್ಯೆ ಕಾನೂನು ಇನ್ನಷ್ಟು ಕಠಿಣ ಆಗಬೇಕಿದೆ: ಪೇಜಾವರ ಶ್ರೀ

ABOUT THE AUTHOR

...view details