ಕರ್ನಾಟಕ

karnataka

ಫೆಬ್ರವರಿಯಲ್ಲಿ ಕೋವಿಡ್​ ಸೋಂಕು ಇಳಿಮುಖವಾಗಬಹುದು: ಪ್ರಹ್ಲಾದ್ ಜೋಶಿ

By

Published : Jan 19, 2022, 7:21 AM IST

ಫೆಬ್ರವರಿಯಲ್ಲಿ ಸೋಂಕು ಇಳಿಮುಖವಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ಪ್ರಮಾಣ ಬಹಳ ಕಡಿಮೆಯಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಸಕಾಲದಲ್ಲಿ ಔಷಧಗಳ ಕಿಟ್ ಮತ್ತು ಆಪ್ತ ಸಮಾಲೋಚನೆ ಮೂಲಕ ಸಲಹೆಗಳು ಸಿಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚಿಸಿದರು.

ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಜನವರಿ ಅಂತ್ಯಕ್ಕೆ ಕೋವಿಡ್ ಗರಿಷ್ಠ ಮಟ್ಟ ತಲುಪುವ ಸಂಭವವಿದೆ. ಫೆಬ್ರವರಿಯಲ್ಲಿ ಸೋಂಕು ಇಳಿಮುಖವಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೋವಿಡ್ 3 ನೇ ಅಲೆ ಎದುರಿಸಲು ಸಮರ್ಪಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಕೋವಿಡ್​ 3ನೇ ಅಲೆ ನಿಯಂತ್ರಣ ಹಾಗೂ ಸಿದ್ಧತೆ ಸಭೆ ಬಳಿಕ ಮಾತನಾಡಿದ ಅವರು, ಜನರು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ವಿಶ್ವಾಸ ಮೂಡಿಸಿಕೊಂಡಿದ್ದಾರೆ. ಮೂರನೇ ಅಲೆಯಲ್ಲಿ ಈ ನಂಬಿಕೆ ಉಳಿಸಿಕೊಳ್ಳುವಂತಹ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಬೇಕು. ಈ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ಪ್ರಮಾಣ ಬಹಳ ಕಡಿಮೆಯಿದೆ.

ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಸಕಾಲದಲ್ಲಿ ಔಷಧಿಗಳ ಕಿಟ್ ಮತ್ತು ಆಪ್ತ ಸಮಾಲೋಚನೆ ಮೂಲಕ ಸಲಹೆಗಳು ಸಿಗಬೇಕು. ಜಿಲ್ಲಾಸ್ಪತ್ರೆ, ಕಿಮ್ಸ್ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ವೈದ್ಯಕೀಯ ಆಕ್ಸಿಜನ್ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಕೋವಿಡ್​ 3ನೇ ಅಲೆ ನಿಯಂತ್ರಣ ಹಾಗೂ ಸಿದ್ಧತೆ ಸಭೆ

ಹೋಂ ಐಸೋಲೇಷನ್​ನಲ್ಲಿರುವವರಿಗೆ ಔಷಧಗಳನ್ನು ತಲುಪಿಸುವ ತಂಡಗಳಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದರೆ ಅವರ ಸೇವೆಯನ್ನು ಪಡೆಯಬಹುದು. ಕೋವಿಡ್ ಪ್ರಮಾಣ ಅತ್ಯಧಿಕ ಮಟ್ಟಕ್ಕೆ ತಲುಪಿದಾಗ ಯಾವುದೇ ಸೋಂಕಿತರಿಗೂ ತೊಂದರೆ ಆಗದಂತೆ ಎಚ್ಚರ ವಹಿಸಿ, ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಓದಿ:INS ರಣವೀರ್​​​ನಲ್ಲಿ ಸ್ಫೋಟ: ನೌಕಾಸೇನೆಯ ಮೂವರು ಸಿಬ್ಬಂದಿ ಸಾವು, 11 ಮಂದಿಗೆ ಗಾಯ

ABOUT THE AUTHOR

...view details