ಕರ್ನಾಟಕ

karnataka

ಹುಬ್ಬಳ್ಳಿಯಲ್ಲಿ ರಸ್ತೆ ಸಮಸ್ಯೆ ಕಂಡು ಧರೆಗಿಳಿದ ದೇವತೆ..!

By

Published : Oct 4, 2022, 1:19 PM IST

ಹುಬ್ಬಳ್ಳಿಯ ಹರ್ಷಿತಾ ಮೆಹರವಾಡೆ ಎಂಬ ಬಾಲಕಿ ರಾಜಧಾನಿ ಕಾಲೋನಿಯಲ್ಲಿರುವ ರಸ್ತೆ ಅವ್ಯವಸ್ಥೆ ಕುರಿತು ದೇವತೆ ವೇಷದಲ್ಲಿ ಸಾಕ್ಷ್ಯಚಿತ್ರದ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾಳೆ.

short video on Hubli road problem
ಹುಬ್ಬಳ್ಳಿ ರಸ್ತೆ ಸಮಸ್ಯೆ

ಹುಬ್ಬಳ್ಳಿ(ಧಾರವಾಡ):ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಸ್ತೆಗಳ ಪರಿಸ್ಥಿತಿ ನೋಡಿದರೆ ಭಯ ಮೂಡುವಂತಿದೆ. ಇಲ್ಲಿನ ರಸ್ತೆಗಳ ದುಸ್ಥಿತಿ ಬಗ್ಗೆ ಬಾಲಕಿಯೊಬ್ಬಳು ವಿನೂತನ ರೀತಿಯಲ್ಲಿ ಸಮಾಜಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾಳೆ.

ಹುಬ್ಬಳ್ಳಿಯ ಹರ್ಷಿತಾ ಮೆಹರವಾಡೆ ಎಂಬ ಬಾಲಕಿ ರಾಜಧಾನಿ ಕಾಲೋನಿಯಲ್ಲಿರುವ ರಸ್ತೆ ಅವ್ಯವಸ್ಥೆ ಕುರಿತು ದೇವತೆ ವೇಷದಲ್ಲಿ ಸಾಕ್ಷ್ಯಚಿತ್ರದ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾಳೆ. ದಸರಾ ಸಂದರ್ಭದಲ್ಲಿ ಹದಗೆಟ್ಟ ರಸ್ತೆಗಳ ಪರಿಸ್ಥಿತಿಯ ವಿಡಂಬನಾತ್ಮಕ ಪ್ರದರ್ಶನ ಮಾಡಲಾಗಿದೆ.

ದುರ್ಗಾ ದೇವಿ ವೇಶ ಧರಿಸಿರುವ ಬಾಲಕಿ ಹುಬ್ಬಳ್ಳಿಯ ರಸ್ತೆ ಆರೋಗ್ಯವಂತ ಸ್ಥಿತಿಗೆ ಬರಲಿ. ಮುಂದಿನ ನವರಾತ್ರಿಯೊಳಗೆ ಎಲ್ಲವೂ ಸುಧಾರಿಸಲಿ. ಭಕ್ತರೇ ನಗರವನ್ನು ಅಂದಗೊಳೊಸಿ ಎಂದು ಸಂದೇಶ ಸಾರಿದ್ದಾಳೆ. ಪುಟ್ಟ ಪೋರಿಯ ಈ ವಿಡಂಬನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರ್ಷಿತಾ ಮೆಹರವಾಡೆ ಕುಟುಂಬಸ್ಥರು ಈ ವಿಡಿಯೋ ಮಾಡಿದ್ದಾರೆ.

ರಸ್ತೆ ಸಮಸ್ಯೆಯ ವೈರಲ್​ ವಿಡಿಯೋ

ಇದನ್ನೂ ಓದಿ:ಅರಮನೆಯಲ್ಲಿ ಆಯುಧ ಪೂಜೆ.. ಪಟ್ಟದ ಆನೆ ಕುದುರೆ ಪಲ್ಲಕ್ಕಿ ಸೇರಿ ಐಷಾರಾಮಿ ಕಾರುಗಳಿಗೆ ಪೂಜೆ

ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಸಂದೇಶ ಹೊತ್ತು ಈ ಸಾಕ್ಷ್ಯಚಿತ್ರ ಮೂಡಿ ಬಂದಿದ್ದು, ಬಾಲಕಿಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ‌. ಇನ್ನಾದರೂ ಜನಪ್ರತಿನಿಧಿಗಳು ಇಲ್ಲಿನ ರಸ್ತೆ ಅವ್ಯವಸ್ಥೆ ಸುಧಾರಣೆ ಮಾಡುವ ಕಾರ್ಯಕ್ಕೆ ಮುಂದಾಗಬೇಕಿದೆ.

ABOUT THE AUTHOR

...view details