ಕರ್ನಾಟಕ

karnataka

ಮುಂದೆ ಹೊಗುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು

By

Published : Apr 28, 2021, 1:22 PM IST

ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇರ್ಫಾನ್ ಕ್ಯಾಲಕೊಂಡ ಮೃತ ದುರ್ದೈವಿ.

Bike rider died
ಇರ್ಫಾನ್ ಕ್ಯಾಲಕೊಂಡ ಮೃತ ವ್ಯಕ್ತಿ

ಹುಬ್ಬಳ್ಳಿ:ಮುಂದೆ ಹೊಗುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ಹೊರವಲಯದ ವರೂರ ಬಳಿ ನಡೆದಿದೆ.

ಇರ್ಫಾನ್ ಕ್ಯಾಲಕೊಂಡ ಮೃತ ದುರ್ದೈವಿ. ಹುಬ್ಬಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಕೊರೊನಾ ಕರ್ಫ್ಯೂ ಹಿನ್ನೆಲೆ ಹಾವೇರಿ ಜಿಲ್ಲೆಯ ಯಲವಿಗಿಗೆ ಹೊರಟಿದ್ದ. ದುರದೃಷ್ಟವಶಾತ್ ಊರಿಗೆ ತಲಪುವ ಮಾರ್ಗ ಮಧ್ಯದಲ್ಲಿಯೇ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ.

ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details