ಕರ್ನಾಟಕ

karnataka

ಹುಬ್ಬಳ್ಳಿ ಲಾಡ್ಜ್​ಗಳಲ್ಲಿ ಹೈಟೆಕ್​ ವೇಶ್ಯಾವಾಟಿಕೆ: ನಾಲ್ವರ ಬಂಧನ

By

Published : Mar 2, 2022, 9:17 AM IST

ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

prostitution-in-hubballi-four-accused-arrested
ಹುಬ್ಬಳ್ಳಿಯ ಲಾಡ್ಜ್​ಗಳಲ್ಲಿ ಹೈಟೆಕ್​ ವೇಶ್ಯಾವಾಟಿಕೆ

ಹುಬ್ಬಳ್ಳಿ:ನಗರದ ಹೋಟೆಲ್​ಗಳಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ದಂಧೆಗೆ ಬಳಸಿಕೊಂಡಿದ್ದ ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದಲ್ಲಿನ ಎಸ್.ಜಿ. ಟವರ್ಸ್ ಹಾಗೂ ಅಮೃತ ಕಂಫರ್ಟ್‌ ಹೋಟೆಲ್​ ಮೇಲೆ ಗ್ರಾಮೀಣ ಪೋಲಿಸರು ದಾಳಿ ನಡೆಸಿದ್ದಾರೆ. ಲಾಡ್ಜ್ ಮಾಲೀಕ ವೆಂಕಟೇಶ ನಾಯ್ಕ, ಮ್ಯಾನೇಜರ್ ವೀರೇಶ ಮುರುಡೇಶ್ವರ, ಕೆ.ಎಮ್.ಪ್ರದೀಪ್ ಗೌಡ, ಮಂಜುನಾಥ್ ಗೌಡ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಹೊರ ರಾಜ್ಯದಿಂದ ಅಮಾಯಕ ಯುವತಿಯರನ್ನು ಕರೆತಂದು ಈ ದಂಧೆ ನಡೆಸಲಾಗುತ್ತಿತ್ತು. ಆರೋಪಿಗಳು ಆನ್‌ಲೈನ್‌ ಮೂಲಕ ವ್ಯವಹಾರ ಮಾಡುತ್ತಿದ್ದರು.

ಇದನ್ನೂ ಓದಿ:ಉಕ್ರೇನ್​ ಮೇಲೆ ಮುಂದುವರಿದ ರಷ್ಯಾ ಆಕ್ರಮಣ... ಇತರ ದೇಶಗಳ ಮೇಲೂ ಬೀರಿತು ಭಾರಿ ಪರಿಣಾಮ!

ದಾಳಿ ವೇಳೆ ಮೂವರು ಯುವತಿಯರನ್ನು ರಕ್ಷಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details