ಕರ್ನಾಟಕ

karnataka

ಭಾರತದ ರೈತರಿಗೆ ವಿಶೇಷ ಗೌರವ,ಪ್ರತಿಯೊಬ್ಬರು ಮಾತೃಭೂಮಿಗೆ ನಮಿಸಬೇಕು: ಸ್ಮೃತಿ ಇರಾನಿ

By

Published : Mar 16, 2023, 3:46 PM IST

Updated : Mar 16, 2023, 11:10 PM IST

ನವಲಗುಂದದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ,ರಾಹುಲ್ ಗಾಂಧಿ ವಿದೇಶದಲ್ಲಿ ದೇಶದ ಗೌರವ ಕಳೆಯುತ್ತಿದ್ದಾರೆ.ನಮ್ಮ ಮಾತೃಭೂಮಿಗೆ ಮಧ್ಯ ಪ್ರವೇಶಿಸಿ ಬನ್ನಿ ಎನ್ನುತ್ತಿದ್ದಾರೆ. ಅವರಿಗೆ ಜನರು ಬುದ್ಧಿ ಕಲಿಸಬೇಕು:ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಕ್ಷೇಪ.

Union Minister Smriti Irani spoke at Navalagum.
ನವಲಗುಂದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದರು.

ಸ್ಮೃತಿ ಇರಾನಿ

ಧಾರವಾಡ: ನವಲಗುಂದ ರೈತ ಬಂಡಾಯದ ನೆಲ.ಭಾರತದಲ್ಲಿ ರೈತರಿಗೆ ವಿಶೇಷ ಗೌರವ ಇದೆ. ನಾವು ಭೂಮಿಯನ್ನು ಮಾತೃಭೂಮಿಯೆಂದು ಪೂಜಿಸುತ್ತೇವೆ.ಪ್ರತಿಯೊಬ್ಬರು ಮಾತೃಭೂಮಿಗೆ ನಮಿಸಬೇಕು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು. ಜಿಲ್ಲೆ ನವಲಗುಂದ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಒಂದು ಕಡೆ ಮೋದಿ ಇದ್ದಾರೆ. ಇನ್ನೊಂದು ಕಡೆ ಗಾಂಧಿ ವಂಶಸ್ಥರ ಓರ್ವ ವ್ಯಕ್ತಿ ಇದ್ದಾನೆ. ಆ ವ್ಯಕ್ತಿ ವಿದೇಶದಲ್ಲಿ ದೇಶದ ಗೌರವ ಕಳೆಯುತ್ತಿದ್ದಾರೆ. ನಮ್ಮ ಮಾತೃಭೂಮಿಗೆ ಮಧ್ಯ ಪ್ರವೇಶಿಸಿ ಬನ್ನಿ ಎನ್ನುತ್ತಿದ್ದಾರೆ. ಅವರಿಗೆ ಜನರೇ ಬುದ್ಧಿ ಕಲಿಸಬೇಕಿದೆ ಎಂದು ಮನವಿ ಮಾಡಿದರು.

ಈ ನೆಲದಲ್ಲಿ ಕಾಂಗ್ರೆಸ್‌‌ರಿಗೆ ಒಂದು ಬೀದಿ ಪಕ್ಕದ ಜಾಗವೂ ಸಿಗಬಾರದು. ರಾಹುಲ್ ಗಾಂಧಿ ಸ್ವಲ್ಪ ಕೇಳಿ ನಾವು ಸತ್ತ ಮೇಲೆ ಗಂಗಾದಲ್ಲಿ ಹರಿಯುವ ನಮ್ಮ ಆಸ್ಥಿಗೆ ಕಿವಿಗೊಟ್ಟು ಕೇಳಿ, ಆಗಲೂ ನಿಮಗೆ ಭಾರತ ಮಾತಾಕಿ ಜೈ ಎಂಬ ಘೋಷಣೆಯೇ ಕೇಳುತ್ತದೆ ಎಂದು ಸವಾಲು ಹಾಕಿದರು. ಇನ್ನು ನವಲಗುಂದದಲ್ಲಿ ಬೃಹತ್ ರೋಡ್ ಯಾತ್ರೆ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಬೃಹತ್ ಪೇರಲ್ ಹಣ್ಣಿನ ಹಾರ ಹಾಕಲಾಯಿತು. ಸಚಿವ ಗೋವಿಂದ ಕಾರಜೋಳ, ಸಿ ಸಿ ಪಾಟೀಲ್, ಶಂಕರ ಪಾಟೀಲ ಮುನೇನಕೊಪ್ಪ ಸಾಥ್ ನೀಡಿದರು.

ಗಂಟೆ ಕಾಯ್ದರೂ, ಸಿಎಂ ಭೇಟಿ ಸಿಗಲಿಲ್ಲ: ಶಾಸಕಿ ಅಸಮಾಧಾನತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತು ಮಾತನಾಡಲು ಬುಧವಾರ ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಬಂದಿದ್ದರು. ಸತತ ಒಂದೂವರೆ ಗಂಟೆಗಳ ಕಾಲ ಕಳೆದರೂ, ಕೂಡ ಬೊಮ್ಮಾಯಿ ಮಾತ್ರ ಭೇಟಿ ಮಾಡದೆ ತೆರಳಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇಂದು ಬೆಳಗ್ಗೆ ಹುಬ್ಬಳ್ಳಿಯ ಆದರ್ಶ ನಗರದಲ್ಲಿ ಸಿಎಂ ನಿವಾಸಕ್ಕೆ ಆಗಮಿಸಿದ್ದ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ತಮ್ಮ ಕ್ಷೇತ್ರದ ಅಭಿವೃದ್ಧಿಯ ವಿಚಾರಕ್ಕೆ ಮಾತನಾಡಲು ಸಿಎಂ ಭೇಟಿ ಮಾಡಲು ಬಂದಿದ್ದರಂತೆ. ಆದರೆ ಸಿಎಂ ಬೊಮ್ಮಾಯಿ ಅವರು ಮನೆಗೆ ಬಂದರೂ ಕೂಡ ಭೇಟಿಯಾಗದೆ ಬೆಳಗಾವಿ ಕಡೆ ಪ್ರಯಾಣ ಬೆಳೆಸಿದರು. ಸತತ ಒಂದೂವರೆ ಗಂಟೆಗಳ ಕಾಲ ಕಾದು ಕುಳಿತರೂ ಸಹ ಅವರು ಭೇಟಿ ಅಗಲಿಲ್ಲ ಎಂದು ಕಾಂಗ್ರೆಸ್ ಶಾಸಕಿ ಶಿವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಶಾಸಕಿ ಕುಸುಮಾವತಿ ಶಿವಳ್ಳಿ ಸ್ಪಷ್ಟನೆ:ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಬಂದಿದ್ದೆ. ಇದಕ್ಕೆ ಯಾವುದೇ ಬೇರೆ ಅರ್ಥ ಕಲ್ಪಿಸುವುದು ಬೇಡ. ಆದರೆ ಸಿಎಂ ಬೊಮ್ಮಾಯಿ ಅವರು ನನ್ನನ್ನು ಭೇಟಿ ಆಗಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಇದೇ ವೇಳೆ ಕುಂದಗೋಳ ಟಿಕೆಟ್ ಆಕಾಂಕ್ಷಿಗಳಿಗೆ ಶಾಸಕಿ ಶಿವಳ್ಳಿ ಟಾಂಗ್ ಕೊಟ್ಟರು.

ಕುಂದಗೋಳ ಕ್ಯಾಂಡಿಡೇಟ್ ನಾನೇ. ಯಾರು ಏನೇ ಮಾಡಿದ್ರು ಟಿಕೆಟ್ ತಪ್ಪಿಸಲು ಆಗೋದಿಲ್ಲ. ಕುಂದಗೋಳ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ. ಕುಂದಗೋಳ ಕಾಂಗ್ರೆಸ್ ಭಿನ್ನಮತವನ್ನು ಸಮರ್ಥಿಸಿಕೊಂಡ ಅವರು, ಭಿನ್ನಮತದಿಂದಾಗಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ರದ್ದಾಗಿಲ್ಲ. ಕಲಘಟಗಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಇಂದೇ ಆಯೋಜನೆ ಮಾಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಮಯದ ಅಭಾವ ಇದ್ದ ಕಾರಣ ಪ್ರಜಾಧ್ವನಿ ಕಾರ್ಯಕ್ರಮ ರದ್ದಾಗಿದೆ ಅಷ್ಟೇ ಎಂದು ಅವರು ಸ್ಪಷ್ಟನೆ ನೀಡಿದ್ದರು.

ಇದನ್ನೂಓದಿ:ಸಿಎಂ ಆಗಲು ಸುಳ್ಳು ಆರೋಪ ಮಾಡುತ್ತಿರುವ ಸಿದ್ದರಾಮಯ್ಯ: ಕಾರಜೋಳ

Last Updated : Mar 16, 2023, 11:10 PM IST

ABOUT THE AUTHOR

...view details