ಕರ್ನಾಟಕ

karnataka

ಹುಬ್ಬಳ್ಳಿ: ತಡರಾತ್ರಿ ವಾಹನ ಹರಿದು ವ್ಯಕ್ತಿಯ ದೇಹ ಛಿದ್ರ

By

Published : Apr 7, 2023, 4:48 PM IST

ಪಾದಚಾರಿಯ ಮೇಲೆ ವಾಹನಗಳು ಹರಿದು ದೇಹ ಛಿದ್ರಗೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನನಲ್ಲಿ ನಡೆಯಿತು.

ರಸ್ತೆ ಅಪಘಾತ
ರಸ್ತೆ ಅಪಘಾತ

ಹುಬ್ಬಳ್ಳಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ವಾಹನಗಳು ಹರಿದು ದೇಹ ಸಂಪೂರ್ಣವಾಗಿ ಛಿದ್ರವಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿಂದು ನಡೆದಿದೆ. ಶಿರಗುಪ್ಪಿಯ ನೆಹರು ಪ್ರೌಢಶಾಲೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 40-45 ವರ್ಷದ ವ್ಯಕ್ತಿ ಮೇಲೆ ತಡರಾತ್ರಿ ವಾಹನಗಳು ಹರಿದಿವೆ. ಮೃತನ ಗುರುತು ಪತ್ತೆಯಾಗಿಲ್ಲ. ಮಾಹಿತಿ ತಿಳಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಇದನ್ನೂ ಓದಿ:ಕಾರವಾರದ ಸುದ್ದಿಗಳು: ಸಿಕ್ಕ ಚಿನ್ನ ಮರಳಿಸಿದ ಯುವಕ, ಮನೆಯಲ್ಲಿ ತಲ್ವಾರ್ ಇಟ್ಟ ಆರೋಪಿ ಅರೆಸ್ಟ್​

ಬೇಕರಿಗೆ ಬೆಂಕಿ:ಆಕಸ್ಮಿಕವಾಗಿ ಬೆಂಕಿ ತಗುಲಿ ಬೇಕರಿ ಸುಟ್ಟು ಕರಕಲಾಗಿದೆ. ಈ ಘಟನೆ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ತಡರಾತ್ರಿ ನಡೆದಿದೆ. ಅಂಗಡಿ ಬಂದ್ ಮಾಡಿ ಮನೆಗೆ ಹೋಗಿದ್ದ ಸಂದರ್ಭದಲ್ಲಿಅನಾಹುತ ನಡೆದು ಉತ್ಪನ್ನಗಳು ನಾಶವಾಗಿವೆ. ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ :ರಾಯಚೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಮೂವರು ಮಹಿಳೆಯರಿಗೆ ಗಾಯ

ಮನೆ ಗೇಟ್​ ಬಿದ್ದು ಬಾಲಕ ಸಾವು:ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಮನೆಯೊಂದರ ಗೇಟ್ ಬಿದ್ದ ಪರಿಣಾಮ 7 ವರ್ಷದ ಬಾಲಕ ಮೃತಪಟ್ಟಿರುವ ಘಟನೆ (ಏಪ್ರಿಲ್ 4-2023)ರಂದು ನಡೆದಿತ್ತು. ಮಂಟೂರು ರಸ್ತೆಯ ಗಣೇಶ್ ಕಾಲೋನಿಯ ಮನೆಯೊಂದರ ಸಮೀಪ ಬಾಲಕ ಆಟವಾಡುತ್ತಿದ್ದಾಗ ಅವಘಡ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ಗೇಟ್ ಬಿದ್ದು ಬಾಲಕ ಸಾವು

ABOUT THE AUTHOR

...view details