ಕರ್ನಾಟಕ

karnataka

ಹಾವಿಗೆ 12 ವರ್ಷ ದ್ವೇಷ ಅಂತಾರಲ್ಲ ಸಿದ್ದರಾಮಯ್ಯಗೆ ಜೀವನ ಪರ್ಯಂತ ಇರುತ್ತೆ: ಶೆಟ್ಟರ್​​

By

Published : May 17, 2019, 7:34 PM IST

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್,​ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಹುಬ್ಬಳ್ಳಿ: ಸಿದ್ದರಾಮಯ್ಯನವರು ಧಾರವಾಡ ಜಿಲ್ಲೆಯ ಜನರ ಕುಡಿಯುವ ನೀರಿಗೆ ಕಲ್ಲು ಹಾಕಿರುವ ಕೆಟ್ಟ ರಾಜಕಾರಣಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಮಾಜಿ ಸಿಎಂ ಜಗದೀಶ್​ ಶೆಟ್ಟರ್​

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾವಿಗೆ ಹನ್ನೆರಡು ವರ್ಷ ದ್ವೇಷವಾದರೆ ಸಿದ್ದರಾಮಯ್ಯ ಅವರಿಗೆ ಸಾಯುವವರೆಗೂ ದ್ವೇಷ. ಕಾಂಗ್ರೆಸ್ ಚೇಲಾಗಳಿಂದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಸುವ ಕೆಲಸ ಮಾಡಿಸುತ್ತಿದ್ದಾರೆ. ಅವರು ಲೈಫಿನಲ್ಲಿಯೇ ಮುಖ್ಯಮಂತ್ರಿ ಆಗುವುದಿಲ್ಲ. ರಾಜಕೀಯ ದ್ವೇಷ ಮಾಡಲು ಕೊನೆ ಎಂಬುದು ಇರಬೇಕು. ವೀರಶೈವರಿಗೆ ದೊಡ್ಡಮಟ್ಟದ ಅನ್ಯಾಯ‌ ಮಾಡಿರುವುದು ಕಾಂಗ್ರೆಸ್​ನವರು ಎಂದು ಗಂಭೀರ ಆರೋಪ ಮಾಡಿದರು.

ನೂರಾರು ಡಿಕೆಶಿ, ನೂರಾರು ಸಿದ್ದರಾಮಯ್ಯ ಬಂದರೂ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲಲು ಸಾಧ್ಯವಿಲ್ಲ. ಕುಂದಗೋಳ ಕ್ಷೇತ್ರಕ್ಕೆ ಬಿಜೆಪಿ ಸಾಕಷ್ಟು ಅನುದಾನ ನೀಡಿದೆ. ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ವ್ಯವಸ್ಥಿತವಾಗಿ‌ ಪೂರ್ಣಗೊಂಡಿರುವುದು ಬಿಜೆಪಿಯ ಕೊಡುಗೆಯಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸುಮಾರು ಇಪ್ಪತ್ತರಿಂದ ಮುವತ್ತು ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕುಂದಗೋಳದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಗೋಡ್ಸೆ ಸಿದ್ಧಾಂತ ಒಪ್ಪಿಕೊಂಡಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಯಾವುದೇ ಗೋಡ್ಸೆ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ನಾವೇಲ್ಲ ಗೋಡ್ಸೆ ವಿರೋಧಿಗಳು ಎಂದಿದ್ದಾರೆ.

Intro:ಹುಬ್ಬಳಿBody:ಸ್ಲಗ್: ಸಿದ್ಧರಾಮಯ್ಯನವರಿಗೆ ಮಾನ‌ಮರ್ಯಾದೇ ಇಲ್ಲ: ಶೆಟ್ಟರ್

ಹುಬ್ಬಳ್ಳಿ: ನಾಚಿಕೆ ಮಾನ ಮರ್ಯಾದೇ ಇಲ್ಲದ ವ್ಯಕ್ತಿ ಎಂದರೆ ಅದು ಸಿದ್ಧರಾಮಯ್ಯನವರು, ಧಾರವಾಡ ಜಿಲ್ಲೆಯ ಜನರು ಕುಡಿಯುವ ನೀರಿಗೆ ಕಲ್ಲು ಹಾಕಿರುವ ಕೆಟ್ಟ ರಾಜಕಾರಣಿ ಎಂದರೆ ಅದು ಸಿದ್ಧರಾಮಯ್ಯನವರು.ಹಾವಿಗೆ ಹನ್ನೆರಡು ವರ್ಷ ದ್ವೇಷವಾದರೇ ಸಿದ್ದರಾಮಯ್ಯ ಅವರಿಗೆ ಸಾಯುವ ವರೆಗೂ ದ್ವೇಷ. ಸಿದ್ದರಾಮಯ್ಯ ಲೈಫನಲ್ಲಿಯೇ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯ ದ್ವೇಷಮಾಡಲು ಒಂದು ಕೊನೆ ಎಂಬುದು ಇರಬೇಕು. ವೀರಶೈವರಿಗೆ ದೊಡ್ಡಮಟ್ಟದ ಅನ್ಯಾಯ‌ ಮಾಡಿರುವುದು ಕಾಂಗ್ರೆಸನವರು ಎಂದು ಗಂಭೀರವಾಗಿ ಆರೋಪಿಸಿದರು. ನೂರಾರು ಡಿಕೆಸಿ, ನೂರಾರು ಸಿದ್ದರಾಮಯ್ಯ ಬಂದರೂ ಕೂಡ ಕುಂದಗೋಳ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಮಾಜಿ ಸಿಎಂ ಸಿದ್ಧರಾಮಯ್ಯನವರ ಹಾಗೇ ಅವಾಚ್ಯ ಶಬ್ದಗಳನ್ನು ಮಾತನಾಡಲು ಬರುವುದಿಲ್ಲ. ಅವರ ಅಸ್ಲೀಲ ಸಂಸ್ಕೃತಿ ಅವರನ್ನು ಸೂಚಿಸುತ್ತದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಚೇಲಾಗಳಿಂದ ಮುಂದಿನ ಸಿಎಂ ಸಿದ್ಧರಾಮಯ್ಯನವರು ಎಂದು ಹೇಳಿಸುವಂತ ಕೆಲಸ ಮಾಡಿಸುತ್ತಿದ್ದಾರೆ. ಎಚ್.ಎಂ.ಟಿಯಲ್ಲಿ ಸೋಲಲು ಸಿದ್ಧರಾಮಯ್ಯನವರೇ ಕಾರಣ ಸಿದ್ಧರಾಮಯ್ಯನವರು ಲೈಫನಲ್ಲಿಯೇ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಅವರು ಹೇಳಿದರು.
ಧಾರವಾಡ ಫೇಡೆ ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಖಾರವಾಗಿ ಪರಿಣಮಿಸಲಿದೆ.ಉಪಸಮರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಗೆಲವು ನಿಶ್ಚಿತವಾಗಿದೆ‌. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಧಾರವಾಡ ಫೇಡೆಯನ್ನು ನೀಡಿ ಬಿಳ್ಕೊಡುತ್ತೇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ಧರಾಮಯ್ಯನವರ ನೈತಿಕತೆಯ ಬಗ್ಗೆ ನಾನು ಪ್ರಶ್ನಿಸಿದ್ದೀನಿ. ಸಿದ್ದರಾಮಯ್ಯನವರು ಬಿಜೆಪಿ ಮುಖಂಡರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದು ಖಂಡನೀಯವಾಗಿದೆ. ಸಂಶಿಯಲ್ಲಿ ನಿರಂತರ ಜ್ಯೋತಿ ಯೋಜನೆಗೆ ಚಾಲನೆ ನೀಡಿದರು ಆದರೇ ಇದುವರೆಗೂ ಯಾವ ನಿರಂತರವೂ ಇಲ್ಲ ಯಾವ ಜ್ಯೋತಿಯು ಇಲ್ಲ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು. ಬಹಿರಂಗ ಪ್ರಚಾರ ಮುಕ್ತಾಯಗೊಳ್ಳುತ್ತಿದೆ ಇಂತಹ ಸಂದರ್ಭದಲ್ಲಿ ಡಿಬೆಟಗೆ ಬನ್ನಿ ಎಂದು ಕರೆಯುತ್ತಿರುವುದು ಡಿಕೆಸಿಯವರದು ಮುರ್ಖತನದ ಪರಮಾವಧಿ.
ಬಳ್ಳಾರಿಯಲ್ಲಿ ಉಗ್ರಪ್ಪ ಗೆದ್ದಿದ್ದರು ಕೂಡ ಯಾವುದೇ ಜನಪರ ಯೋಜನೆ ಜಾರಿಯಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ಸಾವಿರಾರು ಕೋಟಿ ಅನುದಾನವನ್ನು ಬಿಜೆಪಿಯಿಂದ ಕುಂದಗೋಳ ಕ್ಷೇತ್ರಕ್ಕೆ ನೀಡಲಾಗಿದೆ.ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ವ್ಯವಸ್ಥಿತವಾಗಿ‌ ಪೂರ್ಣಗೊಂಡಿರುವುದು ಅದು ಬಿಜೆಪಿಯ ಕೊಡುಗೆಯಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸುಮಾರು ಇಪ್ಪತ್ತು-ಮುವತ್ತೂ ಗ್ರಾಮಪಂಚಾಯತ ಕಟ್ಟಡ ನಿರ್ಮಾಣ ಮಾಡಲಾಗಿದೆ.ಮಲಪ್ರಭಾ ಕೆನಲ್ ಮೂಲಕ ಕುಂದಗೋಳ ಭಾಗದ 19ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುವರ್ಣ ಗ್ರಾಮ ಯೋಜನೆಯಲ್ಲಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಹಲವಾರು ಜನಪ್ರೀಯ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರದ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ. ಪ್ರತಿಯೊಂದು ಭಾಗದಲ್ಲಿ ಕೂಡ ಉತ್ತಮವಾದ ಜನರ ಬೆಂಬಲ ಸಿಗುತ್ತಿರುವುದನ್ನು ನೋಡಿದರೇ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಗೋಡ್ಸೆ ಸಿದ್ಧಾಂತ ಒಪ್ಪಿಕೊಂಡಿದ್ದಾರೆ ಎಂಬುವಂತ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಯಾವುದೇ ಗೋಡ್ಸೆ ಸಿದ್ದಾಂತವನ್ನು ಒಪ್ಪಿಕೊಳ್ಳುವುದಿಲ್ಲ ನಾವೇಲ್ಲ ಬಿಜೆಪಿಗರು ಗೋಡ್ಸೆ ವಿರೋಧಿಗಳು ಎಂದು ಅವರು ಹೇಳಿದರು. ಇಷ್ಟು ದಿನ ಸುಮ್ಮನೆ ಕುಳಿತು ಚುನಾವಣೆ ಎರಡು ದಿನ ಬಾಕಿ ಇರುವಾಗ ಮಹದಾಯಿ ಬಗ್ಗೆ ಮಾತನಾಡುವುದು ಸರಿಯಲ್ಲ. ರಾಜಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಡಿ.ಕೆ.ಸಿ ವಿರುದ್ಧ ವಾಗ್ದಾಳಿ ನಡೆಸಿದರು. ನೋಟಿಪಿಕೇಶನ್ ಇಸ್ಯೂ ಬಗ್ಗೆ ಯಾಕೆ ಎಚ್.ಡಿ.ಕೆ., ಸಿದ್ಧರಾಮಯ್ಯ, ಡಿ.ಕೆ.ಸಿಯವರು ಉತ್ತರ ನೀಡಲಿ ಎಂದು ಅವರು ಹೇಳಿದರು. ಕಾಂಗ್ರೆಸ್ ಮುಖಂಡರು ಹಣವನ್ನು ಹಂಚಲು ಗೂಡಾಚಾರಿಗಳನ್ನು ನೇಮಕ ಮಾಡುವ ಮೂಲಕ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸುತ್ತಿದ್ದಾರೆ. ಆರೋಪಿಸಿದರು...

_________________________


ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ

TAGGED:

ABOUT THE AUTHOR

...view details