ಕರ್ನಾಟಕ

karnataka

ಹುಬ್ಬಳ್ಳಿಯಲ್ಲಿ ಎಸ್​​ಡಿಪಿಐ ಮುಖಂಡನ ಮನೆ ಮೇಲೆ‌ ಎನ್ಐಎ ದಾಳಿ

By

Published : Nov 5, 2022, 11:52 AM IST

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ‌ ಶನಿವಾರ ಬೆಳಗ್ಗೆ ಎನ್ಐಎ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

NIA raid on SDPI Ismails house on Saturday
ಎಸ್ ಡಿಪಿಐ ಇಸ್ಮಾಯಿಲ್ ಮನೆ ಮೇಲೆ‌ ಶನಿವಾರ ಎನ್ಐಎ ದಾಳಿ

ಹುಬ್ಬಳ್ಳಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ‌ ಎನ್ಐಎ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

ಶನಿವಾರ ನಸುಕಿನ ಜಾವ 4 ಗಂಟೆಗೆ ಸುಮಾರು ನಾಲ್ಕು ಗಂಟೆಗೆ ಎನ್ಐಎ 10 ಜನ ಅಧಿಕಾರಿಗಳ ತಂಡವೂ ಹಳೇ‌ ಹುಬ್ಬಳ್ಳಿಯ ನುರಾನಿ ಪ್ಲಾಟ್​​ನ ಮನೆಯ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ನಂತರ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್​​ಡಿಪಿಐ ಕಚೇರಿಯಲ್ಲೂ ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ.

ಈ ಮಧ್ಯೆ ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಇಂದು ಬೆಳಗ್ಗೆ ಎನ್​ಐಎ ಏಕಕಾಲಕ್ಕೆ ದಾಳಿ ನಡೆಸಿ, ಕೆಲವರನ್ನು ವಶಕ್ಕೆ ಪಡೆದಿದೆ.

ABOUT THE AUTHOR

...view details