ಕರ್ನಾಟಕ

karnataka

ಕಸದಿಂದ ಇಂಧನ.. ಹು-ಧಾ ಪಾಲಿಕೆ ಜೊತೆ ಎನ್​​ವಿವಿಎನ್ ಒಪ್ಪಂದ

By

Published : Nov 16, 2020, 4:40 PM IST

ಇದಕ್ಕಾಗಿ 12 ಎಕರೆ ಜಮೀನು ಮೀಸಲಿಡಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ, ಸ್ವಚ್ಛ ಪರಿಸರ ನಿರ್ಮಾಣ, ಒಣ ತ್ಯಾಜ್ಯದಿಂದ ಇಂಧನ ತಯಾರಿಸಿ ಬರುವ ಲಾಭಾಂಶದಲ್ಲಿ ಪಾಲಿಕೆಗೂ ಪಾಲು ಸಿಗುವುದಲ್ಲದೇ ಸುಸ್ಥಿರ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಮುಂದಾಗಿದೆ..

Compost waste treatment plant
ಕಾಂಪೋಸ್ಟ್ ತ್ಯಾಜ್ಯ ಸಂಸ್ಕರಣ ಘಟಕ

ಹುಬ್ಬಳ್ಳಿ:ನಿತ್ಯ ಉತ್ಪತ್ತಿಯಾಗುವ ಸುಮಾರು 200 ಟನ್ ಒಣ ತ್ಯಾಜ್ಯದಿಂದ ಇಂಧನ (ಕಸದಿಂದ ಇಂಧನ) ತಯಾರಿಸುವ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜೊತೆ ಎನ್​​ವಿವಿಎನ್ (subsidiary of NTPC, PSU govt.of India) ಒಡಂಬಡಿಕೆ ಮಾಡಿಕೊಂಡಿದೆ.

ಅವಳಿ ನಗರದಲ್ಲಿ ಎರಡು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದ್ದು, ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಲಾಗುತ್ತಿದೆ. ಇದೇ ಕಸದಿಂದ ಈಗ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ 300 ಟನ್ ಸಾಮರ್ಥ್ಯ ಮತ್ತು ಧಾರವಾಡದಲ್ಲಿ 150 ಟಿಪಿಡಿ ಎರೋಬಿಕ್ ವಿಂಡ್ರೋ ಕಾಂಪೋಸ್ಟ್ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗಿದೆ.

ಸುಮಾರು ₹30 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳು ಸಾವಯವ ಕೃಷಿಗೆ ಪೂರಕವಾಗಿವೆ‌. ಒಣ ತ್ಯಾಜ್ಯವನ್ನು ಘನೀಕರಿಸಿ ಟಾರಿಫೈಡ್ ಚಾರ್ಕೋಲ್​​​​ ಮಾಡಲಾಗುತ್ತಿದೆ.

ಈ ಮೂಲಕ ಒಣ ತ್ಯಾಜ್ಯವು ವೈಜ್ಞಾನಿಕವಾಗಿ ಪರಿಸರಕ್ಕೆ ಮಾರಕವಾಗದಂತೆ ವಿಲೇವಾರಿಯಾಗಲು ಅನುಕೂಲವಾಗಲಿದೆ. ವಾಯುಮಾಲಿನ್ಯ ಕಡಿಮೆಯಾಗಲಿದೆ. ಎನ್​ಟಿಪಿಸಿ ಸುಮಾರು 45 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಿದ್ದಪಡಿಸಿದೆ.

ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ್​​ ಇಟ್ನಾಳಂ

ಅದಕ್ಕಾಗಿ 12 ಎಕರೆ ಜಮೀನು ಮೀಸಲಿಡಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ, ಸ್ವಚ್ಛ ಪರಿಸರ ನಿರ್ಮಾಣ, ಒಣ ತ್ಯಾಜ್ಯದಿಂದ ಇಂಧನ ತಯಾರಿಸಿ ಬರುವ ಲಾಭಾಂಶದಲ್ಲಿ ಪಾಲಿಕೆಗೂ ಪಾಲು ಸಿಗುವುದಲ್ಲದೇ ಸುಸ್ಥಿರ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಮುಂದಾಗಿದೆ.

ABOUT THE AUTHOR

...view details