ಕರ್ನಾಟಕ

karnataka

ತುಂತುರು ಮಳೆಗೆ ಹೂವು ಬೆಳೆಗಾರರ ಬದುಕು ತತ್ತರ: ಗಿಡದಲ್ಲೇ ಕೊಳೆಯುತ್ತಿರುವ ಸೇವಂತಿಗೆ

By

Published : Dec 14, 2022, 12:11 PM IST

ಮಾಂಡೌಸ್ ಚಂಡಮಾರುತದಿಂದಾಗಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿದ್ದು, ಧಾರವಾಡ ಜಿಲ್ಲೆಯ ಹೂವು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

flower growers is worried about mandous cyclone
ಗಿಡದಲ್ಲೇ ಕೊಳೆಯುತ್ತಿರುವ ಸೇವಂತಿಗೆ

ಗಿಡದಲ್ಲೇ ಕೊಳೆಯುತ್ತಿರುವ ಸೇವಂತಿಗೆ ಬೆಳೆ.. ರೈತರಿಗೆ ಸಂಕಷ್ಟ

ಧಾರವಾಡ: ಮಾಂಡೌಸ್​ ಚಂಡಮಾರುತದ ಪರಿಣಾಮ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಹೂವು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.

ಧಾರವಾಡ ತಾಲೂಕಿನ ಗೋವನಕೊಪ್ಪ, ಕುರುಬಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹೂವಿನ ಕೃಷಿ ಮಾಡಿದ್ದಾರೆ. ಸೇವಂತಿಗೆ, ಗುಲಾಬಿ ಸೇರಿದಂತೆ ಸುಗಂಧಿ ಹೂವುಗಳನ್ನು ಬೆಳೆದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿರುವುದರಿಂದ ಹೂವಿನ ಬೆಳೆ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ.

ಇದನ್ನೂ ಓದಿ:ಮಾಂಡೌಸ್​ ಚಂಡಮಾರುತ ಎಫೆಕ್ಟ್ .. ಆತಂಕದಲ್ಲಿ ದ್ರಾಕ್ಷಿ ಬೆಳೆಗಾರರು

ಮಳೆಯಿಂದ ಹೂವಿನ ದಳಗಳು ಕೊಳೆಯುತ್ತಿವೆ. ಅಲ್ಲದೇ, ನಿರಂತರವಾಗಿ ತಂಪಿನ ವಾತಾವರಣವಿರುವುದರಿಂದ ಸಹಜವಾಗಿಯೇ ಹೂವುಗಳು ಕೊಳೆಯುವ ಹಂತ ತಲುಪುತ್ತಿವೆ. ಮಾರುಕಟ್ಟೆಗೆ ಹೋದ ಹೂವು ಕೂಡ ವಾಪಸ್ ಬರುತ್ತಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಹಾಳಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details