ಕರ್ನಾಟಕ

karnataka

ಮಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವಂತೆ ರೈತರ ಆಗ್ರಹ

By

Published : Sep 13, 2019, 5:08 PM IST

ಈ ವರ್ಷ ಸುರಿದ ಭೀಕರ ಮಳೆಯಿಂದಾಗಿ ರಾಜ್ಯದೆಲ್ಲೆಡೆ ಪ್ರವಾಹ ಉಂಟಾಗಿದ್ದು, ರೈತರು ಪರಿಹಾರ ಪಡೆಯಲು ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಆದ ಕಾರಣ ಯಾದವಾಡ, ಲಕಮಾಪೂರ, ಪುಡಕಲಕಟ್ಟಿ ಗ್ರಾಮದ ರೈತರು ಸಮೀಕ್ಷೆ ನಡೆಸಿ ಪರಿಹಾರ ಒದಗಿಸಿ ಎಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪರಿಹಾರ ಒದಗಿಸುವಂತೆ ರೈತರ ಪ್ರತಿಭಟನೆ

ಧಾರವಾಡ:ಈ ವರ್ಷ ಸುರಿದ ಭೀಕರ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಹಳ್ಳಗಳೆಲ್ಲಾ ತುಂಬಿ ಜಮೀನು, ಬೆಳೆಗಳು ಹಾಗೂ ರಸ್ತೆಗಳೆಲ್ಲಾ ಹಾನಿಯಾಗಿದ್ದು, ಈ ಹಾನಿಯ ಬಗ್ಗೆ ಆದಷ್ಟು ಬೇಗ ಸಮೀಕ್ಷೆ ಮಾಡಿ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪರಿಹಾರ ಒದಗಿಸುವಂತೆ ರೈತರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಯಾದವಾಡ, ಲಕಮಾಪೂರ, ಪುಡಕಲಕಟ್ಟಿ ಗ್ರಾಮದ ರೈತರು ಧಿಕ್ಕಾರ ಕೂಗುವುದರ ಮೂಲಕ ಅಸಮಾಧಾನ ಹೊರಹಾಕಿದರು. ತಾಲೂಕಿನ ಗ್ರಾಮಗಳಲ್ಲಿ ಅತಿಯಾದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಹಳ್ಳದ ಎರಡು ಬದಿಯ ಜಮೀನುಗಳು ಅತಿಯಾಗಿ ಹಾನಿಯಾಗಿ, ಜಮೀನಿನಲ್ಲಿ ಬೆಳೆದಿರುವ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಮಳೆಯಿಂದಾಗಿ ಜಮೀನುಗಳಲ್ಲಿ ಕಲ್ಲು, ಮರಳು, ಕಂದಕಗಳು ನಿರ್ಮಾಣವಾಗಿ ಜಲಾವೃತವಾಗಿದ್ದು, ಇಷ್ಟು ದಿನ ಕಳೆದರೂ ಇದುವರೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಯಾವುದೇ ಸಮೀಕ್ಷೆ, ಸ್ಥಳ ಪರಿಶೀಲನೆ ಹಾಗೂ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಈ ಕೂಡಲೇ ಗ್ರಾಮದ ಜಮೀನುಗಳ ಸಮೀಕ್ಷೆ ನಡೆಸಿ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Intro:ಧಾರವಾಡ: ಅತಿಯಾದ ಮಳೆಯಾಗಿ ಪ್ರವಾಹದ ಕಾರಣದಿಂದ ಹಳ್ಳ ತುಂಬಿ ಹರಿದು ಹಳ್ಳದ ಎರಡು ಬದಿಯ ಜಮೀನುಗಳು, ಬೆಳೆಗಳು ಹಾಗೂ ರಸ್ತೆಗಳು ಹಾನಿಯಾಗಿದ್ದು, ಈ ಹಾನಿಯಯ ಬೇಗ ಸಮೀಕ್ಷೆ ಮಾಡಿ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಯಾದವಾಡ ಲಕಮಾಪೂರ ಪುಡಕಲಕಟ್ಟಿ ಗ್ರಾಮದ ರೈತರು ದಿಕ್ಕಾರ ಕೂಗಿ ಅಸಮಾಧಾನ ಹೊರಹಾಕಿದರು.Body:ತಾಲೂಕಿನ ಯಾದವಾಡ, ಲಕಮಾಪುರ ಮತ್ತು ಪುಡಲಕಟ್ಟಿ ಗ್ರಾಮಗಳಲ್ಲಿ ಆತಿಯಾದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಹಳ್ಳದ ಎರಡು ಬದಿಯ ಜಮೀನುಗಳು ಅತಿಯಾಗಿ ಹಾನಿಯಾಗಿ,ಜಮೀನಿನಲ್ಲಿ ಬೆಳೆದಿರುವ ಎಲ್ಲ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಹೀಗಾಗಿ ಜಮೀನುಗಳಲ್ಲಿ ಮಳೆಯಿಂದಾಗಿ ಕಲ್ಲು, ಮರಳು, ಕಂದಕಗಳು ನಿರ್ಮಾಣವಾಗಿ ಜಲಾವೃತಿವಾಗಿದ್ದು, ಇಷ್ಟು ದಿನ ಕಳೆದರೂ ಇದುವರೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಯಾವುದೇ ಸಮೀಕ್ಷೆ, ಸ್ಥಳ ಪರಿಶೀಲನೆ ಹಾಗೂ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಈ ಕೂಡಲೇ ಗ್ರಾಮದ ಜಮೀನುಗಳು ಸಮೀಕ್ಷೆ ನಡೆಸಿ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮೂಲಕ ಮನವಿ ಸಲ್ಲಿಸಿದರು.

ಬೈಟ್: ಮಡಿವಾಳಪ್ಪ ದಿಂಡಲಕೊಪ್ಪ, ಯಾದವಾಡ ಗ್ರಾಮದ ರೈತConclusion:

ABOUT THE AUTHOR

...view details