ಕರ್ನಾಟಕ

karnataka

ರಾಹುಲ್ ಗಾಂಧಿ ಜೊತೆ ಜಗದೀಶ್ ಶೆಟ್ಟರ್ ಚರ್ಚೆ: ನಾಗಪುರ ತಂಡ ನನ್ನ ಚಲನವಲನ ತಿಳಿಯುವ ಮುನ್ನ ಚುನಾವಣೆ ಮುಗಿದಿರುತ್ತೆ ಎಂದ ಮಾಜಿ ಸಿಎಂ

By

Published : Apr 23, 2023, 12:06 PM IST

Updated : Apr 23, 2023, 12:46 PM IST

ರಾಹುಲ್ ಗಾಂಧಿ ಅವರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ವಾಗತಿಸಿದರು.

rahul gandhi
ರಾಹುಲ್​ ಗಾಂಧಿ

ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್ ಶೆಟ್ಟರ್

ಹುಬ್ಬಳ್ಳಿ:ಹುಬ್ಬಳ್ಳಿಗೆ ಆಗಮಿಸಿದ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಅವರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್ ನಾಯಕರು ಹೂಗುಚ್ಛ ನೀಡಿ ಸ್ವಾಗತ ಕೋರಿದರು.

ಬಸವ ಜಯಂತಿ ಹಿನ್ನೆಲೆ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಇಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ತೆರಳುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಹೈದರಾಬಾದ್​ ತಲುಪಿ ಅಲ್ಲಿಂದ ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ನಾಗಪುರ ತಂಡ ನನ್ನ ಚಲನವಲನ ಬಗ್ಗೆ ತಿಳಿಯುವದರೊಳಗಾಗಿ ಚುನಾವಣೆ ಮುಗಿದಿರುತ್ತೆ - ಜಗದೀಶ್ ಶೆಟ್ಟರ್: ಬಿಜೆಪಿಯವರು ಲಿಂಗಾಯತ ಸಮುದಾಯಕ್ಕೆ ಮಾಡುತ್ತಿರುವ ಅವಮಾನದ ಬಗ್ಗೆ ರಾಹುಲ್ ಗಾಂಧಿ ಜೊತೆ ಗಂಭೀರ ಚರ್ಚೆ ಮಾಡಲಾಗಿದೆ. ಅವರು ಕೂಡ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದಿದ್ದೂ, ನಾನು ಮಾಹಿತಿ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಚಲನವಲನ ಗಮನಿಸಲು ನಾಗಪುರದಿಂದ ತಂಡ ಬಂದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಬಂದಿದ್ದರೆ ನನ್ನ ಚಲನವಲನ ಗಮನಿಸುವುದರೊಳಗಾಗಿ ಚುನಾವಣೆಯೇ ಮುಗಿದಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು. ನಾಗಪುರದಲ್ಲಿ ಅಷ್ಟೊಂದು ಎಕ್ಸಪರ್ಟ್ ತಂಡಗಳು ಇದ್ದಲ್ಲಿ ಇತ್ತೀಚೆಗೆ ಅಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಏಕೆ ಸೋಲು ಅನುಭವಿಸುತ್ತಿತ್ತು ಎಂದು ಪ್ರಶ್ನಿಸಿದರು.

ಚುನಾವಣೆ ಎಂದ ಮೇಲೆ ನೆಗೆಟಿವ್​ ಹಾಗೂ ಪಾಸಿಟಿವ್​ ಅಭಿಪ್ರಾಯಗಳು ಬಂದೇ ಬರುತ್ತವೆ. ನನ್ನ ಬಗ್ಗೆಯೂ ಇದೀಗ ನೆಗೆಟಿವ್​ ಅಭಿಪ್ರಾಯಗಳು ಬಂದಿವೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಹಲವು ನೆಗೆಟಿವ್​ ಅಭಿಪ್ರಾಯಗಳನ್ನು ನಾನು ಎದುರಿಸಿದ್ದೇನೆ. ಸೆಂಟ್ರಲ್ ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಎಲ್ಲ ಸ್ಥಾನಮಾನ ನೀಡಿದೆ. ಈ ಬಾರಿ ಚುನಾವಣೆಯಲ್ಲಿ ಐವತ್ತು ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡುತ್ತಾರೆ. ಹಾನಗಲ್​​​ನಲ್ಲಿ ಅವರು ಪ್ರಚಾರ ಮಾಡಲಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲೂ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ನನ್ನನ್ನೂ ಪ್ರಚಾರಕ್ಕಾಗಿ ಕರೆಯುತ್ತಿದ್ದಾರೆ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರನ್ನು ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ್ ಸೇರಿ ಹಲವು ಕಾಂಗ್ರೆಸ್​ ನಾಯಕರು ಸ್ವಾಗತಿಸಿದರು. ಬಳಿಕ ಕಾಂಗ್ರೆಸ್​ ಸೇರ್ಪಡೆಗೊಂಡ ಜಗದೀಶ್​ ಶೆಟ್ಟರ್​ ಅವರ ಜೊತೆ ರಾಹುಲ್​ ಗಾಂಧಿ ಕೆಲಕಾಲ ಮಾತುಕತೆ ನಡೆಸಿದರು.

ಇದನ್ನೂ ಓದಿ;ಬಸವೇಶ್ವರರ ಚಿಂತನೆಗಳು ಮಾನವೀಯತೆಯ ಸೇವೆಗೆ ಸ್ಫೂರ್ತಿ: ಕನ್ನಡದಲ್ಲಿ ಟ್ವೀಟ್​ ಮಾಡಿದ ಪ್ರಧಾನಿ ಮೋದಿ

Last Updated : Apr 23, 2023, 12:46 PM IST

ABOUT THE AUTHOR

...view details