ಕರ್ನಾಟಕ

karnataka

ಹುಬ್ಬಳ್ಳಿಯ ದೀಪಕ್​ ಪಟದಾರಿ ಕೊಲೆ ಪ್ರಕರಣ: ಬಂಧಿತ ಆರೋಪಿಗಳಿಗೆ ಸಿಐಡಿ ಗ್ರಿಲ್​

By

Published : Sep 27, 2022, 1:28 PM IST

ದೀಪಕ್​ ಪಟದಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಇಂದು ಬೆಳಗ್ಗೆ ಆರೋಪಿಗಳನ್ನು ತನಿಖೆ ನಡೆಸಿದ್ದಾರೆ.

Kn_hbl_03_
ದೀಪಕ್​ ಹತ್ಯೆ ಪ್ರಕರಣ ಸಿಐಡಿ ವಿಚಾರಣೆ

ಹುಬ್ಬಳ್ಳಿ:ಗ್ರಾಮ ಪಂಚಾಯತಿ ಸದಸ್ಯ ದೀಪಕ್ ಪಟದಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇಂದು ಸಹ ದೀಪಕ್ ಕೊಲೆಯಲ್ಲಿ ಬಂಧಿತ ಪ್ರಮುಖ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.

ಮೂರು ದಿನಗಳ ಕಾಲ ಬಂಧಿತ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ದೀಪಕ್ ಸಹೋದರ ಸಂಜಯ್ ಪಟದಾರಿಯನ್ನು ಹಾಗೂ ಮೃತ ದೀಪಕ್​ ಪತ್ನಿ ಪುಷ್ಪಾ ಅವರನ್ನೂ ವಿಚಾರಣೆ ನಡೆಸಿದ್ದಾರೆ. ಇಂದು ಬೆಳಗ್ಗೆ ಕಸಬಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ.

ಜುಲೈ 4 ರಂದು ಗ್ರಾಪಂ ಸದಸ್ಯನನ್ನು ಹುಬ್ಬಳ್ಳಿ ತಾಲೂಕಿನ ರಾಯನಾಳ ಬಳಿ ಕೊಲೆ ಮಾಡಲಾಗಿತ್ತು. ಕಳೆದ ಒಂದು ವಾರದ ಹಿಂದೆ ದೀಪಕ್ ಪಟದಾರಿ ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ಅಧಿಕಾರಿಗಳ ತಂಡ ತನಿಖೆ ಚುರುಕುಗೊಳಿಸಿದೆ.

ಹುಬ್ಬಳ್ಳಿಗೆ ಆಗಮಿಸಿರುವ ಆರು ಜನ ಅಧಿಕಾರಿಗಳ ತಂಡ ಹಳೇ‌ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹ ಮಾಡಿತ್ತು. ಅಲ್ಲದೆ ಕೊಲೆಯಾದ ಜಾಗ ರಾಯನಾಳಕ್ಕೂ ಹೋಗಿ ಪರಶೀಲನೆ ಮಾಡಿರೋ ಅಧಿಕಾರಿಗಳು, ಮೃತ ದೀಪಕ್ ಕೊಲೆಯ ಬಗ್ಗೆ ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪಟದಾರಿ ಮರ್ಡರ್ ಕೇಸ್ ತನಿಖೆ ಚುರುಕು: ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ

ABOUT THE AUTHOR

...view details