ಕರ್ನಾಟಕ

karnataka

ಪೊಲೀಸ್ ಪೇದೆಗೆ ತರಾಟೆ ತೆಗೆದುಕೊಂಡ ಬೈಕ್ ಸವಾರ... ವಿಡಿಯೋ ವೈರಲ್

By

Published : Sep 9, 2019, 4:53 AM IST

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪೊಲೀಸ್ ಪೇದೆಯೊಬ್ಬನಿಗೆ ಬೈಕ್ ಸವಾರ ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡ ವಿಡಿಯೋ  ಇದೀಗ ವೈರಲ್ ಆಗಿದೆ.

ಪೊಲೀಸ್ ಪೇದೆಗೆ ತರಾಟೆಗೆ ತೆಗೆದುಕೊಂಡ ಬೈಕ್ ಸವಾರ..ವಿಡಿಯೋ ವೈರಲ್

ಹುಬ್ಬಳ್ಳಿ; ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪೊಲೀಸ್ ಪೇದೆಯೊಬ್ಬನಿಗೆ ಬೈಕ್ ಸವಾರ ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.

ಪೊಲೀಸ್ ಪೇದೆಗೆ ತರಾಟೆಗೆ ತೆಗೆದುಕೊಂಡ ಬೈಕ್ ಸವಾರ..ವಿಡಿಯೋ ವೈರಲ್

ಜಿಲ್ಲೆಯ ದಾಜಿಬಾನ್ ಪೇಟೆಯ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕನ್ನು ಟೋಯಿಂಗ್ ವಾಹನದ ಸಿಬ್ಬಂದಿ ತಮ್ಮ ವಾಹನಕ್ಕೆ ಎತ್ತಿ ಹಾಕಿಕೊಂಡಿದ್ದಾರೆ. ಆಗ ಬೈಕ್ ಸವಾರ ದಂಡ ಕಟ್ಟುತ್ತೇನೆ ಎಂದು ಮನವಿ ಮಾಡಿದ್ದಾನೆ. ಆದರೂ ಪೊಲೀಸ್ ಪೇದೆ ಬಿಟ್ಟಿಲ್ಲ. ಆಗ ಮಾತಿಗೆ ಮಾತು ಬೆಳೆದು ಪೊಲೀಸ್ ಪೇದೆ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಬೈಕ್ ಸವಾರ ಟೋಯಿಂಗ್ ವಾಹನ ತಡೆದು ಪೊಲೀಸ್ ಪೇದೆಯನ್ನು ತರಾಟೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾನೆ.

ಆಗ ಅಲ್ಲೆ ಇದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ನಾನು ಕ್ಷಮೆ ಕೇಳುತ್ತೇನೆ ಬಿಡು ಎಂದರೂ ಬೈಕ್ ಸವಾರ ಬಿಡಲಿಲ್ಲ. ಕೊನೆಗೆ ಟೋಯಿಂಗ್ ವಾಹನದಲ್ಲಿಯೇ ಬೈಕ್ ಸವಾರ ಜೋತು ಬಿದ್ದರೂ ಪೊಲೀಸರು ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಇದರಿಂದ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು.

Intro:ಹುಬ್ಬಳ್ಳಿ-01

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ
ಪೊಲೀಸ್ ಪೇದೆಯೊಬ್ಬನಿಗೆ ಬೈಕ್ ಸವಾರ ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡ ವಿಡಿಯೋ ವೈರಲ್ ಆಗಿದೆ.
ಹುಬ್ಬಳ್ಳಿ ದಾಜಿಬಾನ್ ಪೇಟೆಯ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಟೋಯಿಂಗ್ ವಾಹನದ ಸಿಬ್ಬಂದಿ ಹಾಕಿಕೊಂಡಿದ್ದಾರೆ. ಆಗ ಬೈಕ್ ಸವಾರ ದಂಡ ಕಟ್ಟುತ್ತೇನೆ ಎಂದು ಮನವಿ ಮಾಡಿದ್ದಾನೆ. ಆದರು ಪೊಲೀಸ್ ಪೇದೆ ಬಿಟ್ಟಿಲ್ಲ. ಆಗ ಮಾತಿಗೆ ಮಾತು ಬೆಳೆದು ಪೊಲೀಸ್ ಪೇದೆ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಬೈಕ್ ಸವಾರ ಟೋಯಿಂಗ್ ವಾಹನ ತಡೆದು ಪೊಲೀಸ್ ಪೇದೆಗೆ ತರಾಟೆಗೆ ತಗೆದುಕೊಂಡು ಕ್ಷಮೇ ಕೇಳುವಂತೆ ಪಟ್ಟು ಹಿಡಿದಿದ್ದಾನೆ. ಆಗ ಅಲ್ಲೆ ಇದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ನಾನು ಕ್ಷಮೇ ಕೇಳುತ್ತೇನೆ ಬಿಡು ಎಂದರು ಬೈಕ್ ಸವಾರ ಬಿಡಲಿಲ್ಲ. ಕೊನೆಗೆ ಟೋಯಿಂಗ್ ವಾಹನದಲ್ಲಿಯೇ ಬೈಕ್ ಸವಾರ ಜೊತು ಬಿದ್ದರು ಪೊಲೀಸರು ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಇದರಿಂದ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು.Body:HB GaddadConclusion:Etv hubli

ABOUT THE AUTHOR

...view details