ಕರ್ನಾಟಕ

karnataka

6 ವರ್ಷದ ಹಿಂದೆ ಕ್ರಿಕೆಟ್ ಗಲಾಟೆಯಲ್ಲಿ ಕೊಲೆ: 12 ಆರೋಪಿಗಳ ಅಪರಾಧ ಸಾಬೀತು

By

Published : Dec 24, 2019, 12:10 PM IST

ಆರು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ 12 ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿದೆ.

ಹುಬ್ಬಳ್ಳಿಯ ನ್ಯಾಯಾಲಯ
ಹುಬ್ಬಳ್ಳಿಯ ನ್ಯಾಯಾಲಯ

ಹುಬ್ಬಳ್ಳಿ:ಆರು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ 12 ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿದ್ದು, ನಗರದ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಡಿಸೆಂಬರ್ 30ಕ್ಕೆ ತೀರ್ಪು ಕಾಯ್ದಿರಿಸಿದೆ.

ಬಾನಿ ಓಣಿಯ ನಿವಾಸಿಗಳಾದ ಕಲ್ಲಪ್ಪ ಶಿರಕೋಳ, ಸಿದ್ಧಾರೂಢ ಶಿರಕೋಳ, ಅಯ್ಯಪ್ಪ ಶಿರಕೋಳ, ನಿಂಗಪ್ಪ ಶಿಂಧೆ, ಅಯ್ಯಪ್ಪ ಲಕ್ಕುಂಡಿ, ಮಂಜುನಾಥ ಉಪ್ಪಾರ, ಶ್ರೀಪಾದ ಪೂಜಾರಿ, ಮಂಟೂರ ರಸ್ತೆಯ ವಿಶಾಲ ಜಾಧವ, ಗಣೇಶ ಪೇಟೆಯ ಅಜಯ ಗುತ್ತಲ, ಮಂಜುನಾಥ ಗೋಕಾಕ, ಸಂತೋಷ ಸುನಾಯಿ, ತಬೀಬ ಲ್ಯಾಂಡ್‌ನ ಅನೀಲ ಸಾವಂತ ಅಪರಾಧಿಗಳಾಗಿದ್ದಾರೆ.

ಹುಬ್ಬಳ್ಳಿಯ ನ್ಯಾಯಾಲಯ

2013ರ ಜೂನ್‌ 16ರಂದು ನೆಹರೂ ಮೈದಾನದಲ್ಲಿ ಕ್ರಿಕೆಟ್‌ ಆಡುವಾಗ ಗಲಾಟೆಯಾಗಿ, ಯಲ್ಲಾಪುರ ಓಣಿಯ ನಜೀರ್‌ ಮುದಗಲ್‌ ಎಂಬ ವ್ಯಕ್ತಿಗೆ ಚಿಟಗುಪ್ಪಿ ವೃತ್ತದಲ್ಲಿ ಚಾಕು ಇರಿದಿದ್ದರು. ಕಿಮ್ಸ್‌ಗೆ ದಾಖಲಾಗಿದ್ದ ನಜೀರ್ ನಾಲ್ಕು ದಿನಗಳ ನಂತರ ಮೃತ ಪಟ್ಟಿದ್ದ. ಈ ಕುರಿತಾಗಿ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನ್ಯಾಯಾಧೀಶ ಕೆ.ಎನ್‌. ಗಂಗಾಧರ ಅವರು ವಿಚಾರಣೆ ನಡೆಸಿ, ಸರ್ಕಾರಿ ಅಭಿಯೋಜಕ ಡಿ.ಎ. ಭಾಂಡೇಕರ್‌ ವಾದ ಮಂಡಿಸಿದ್ದರು.

Intro:ಹುಬ್ಬಳ್ಳಿ-01
ಕ್ರಿಕೆಟ್‌ ಆಟಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಚಿಟಗುಪ್ಪಿ ವೃತ್ತದಲ್ಲಿ ಆರು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ 12 ಆರೋಪಿಗಳು ಅಪರಾಧಿಯೆಂದು ನಗರದ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಘೋಷಣೆ ಮಾಡಿದ್ದು, ಡಿ. 30ಕ್ಕೆ ತೀರ್ಪು ಕಾಯ್ದಿರಿಸಿದೆ.

ಬಾನಿ ಓಣಿಯ ನಿವಾಸಿಗಳಾದ ಕಲ್ಲಪ್ಪ ಶಿರಕೋಳ, ಸಿದ್ಧಾರೂಢ ಶಿರಕೋಳ, ಅಯ್ಯಪ್ಪ ಶಿರಕೋಳ, ನಿಂಗಪ್ಪ ಶಿಂಧೆ, ಅಯ್ಯಪ್ಪ ಲಕ್ಕುಂಡಿ, ಮಂಜುನಾಥ ಉಪ್ಪಾರ, ಶ್ರೀಪಾದ ಪೂಜಾರಿ, ಮಂಟೂರ ರಸ್ತೆಯ ವಿಶಾಲ ಜಾಧವ, ಗಣೇಶ ಪೇಟೆಯ ಅಜಯ ಗುತ್ತಲ, ಮಂಜುನಾಥ ಗೋಕಾಕ, ಸಂತೋಷ ಸುನಾಯಿ, ತಬೀಬ ಲ್ಯಾಂಡ್‌ನ ಅನೀಲ ಸಾವಂತ ಅಪರಾಧಿಯೆಂದು ಸಾಬೀತಾದ ವ್ಯಕ್ತಿಗಳು.

2013ರ ಜೂನ್‌ 16ರಂದು ನೆಹರೂ ಮೈದಾನದಲ್ಲಿ ಕ್ರಿಕೆಟ್‌ ಆಡುವಾಗ ಯಲ್ಲಾಪುರ ಓಣಿಯ ನಜೀರ್‌ ಮುದಗಲ್‌ ಎಂಬುವವರ ಜೊತೆ ತಂಟೆ ತೆಗೆದು, ಹಲ್ಲೆ ನಡೆಸಿದ್ದರು. ನಂತರ ಚಿಟಗುಪ್ಪಿ ವೃತ್ತದವರೆಗೆ ಅವರ ಮೇಲೆ ಹಲ್ಲೆ ನಡೆಸುತ್ತ, ಸ್ಟಂಪ್‌ನಿಂದ ತಲೆಗೆ ಹೊಡೆದಿದ್ದರು. ಅಲ್ಲದೆ, ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕು ಇರಿದಿದ್ದರು. ಕಿಮ್ಸ್‌ಗೆ ದಾಖಲಾಗಿದ್ದ ಅವರು, ನಾಲ್ಕು ದಿನ ಬಿಟ್ಟು ಮೃತಪಟ್ಟಿದ್ದರು. ಪ್ರಕರಣ ಶಹರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು.

ನ್ಯಾಯಾಧೀಶ ಕೆ.ಎನ್‌. ಗಂಗಾಧರ ಅವರು ವಿಚಾರಣೆ ನಡೆಸಿದ್ದರು. ಸರ್ಕಾರಿ ಅಭಿಯೋಜಕ ಡಿ.ಎ. ಭಾಂಡೇಕರ್‌ ವಾದ ಮಂಡಿಸಿದ್ದರು.Body:H B GaddadConclusion:Etv hubli

TAGGED:

ABOUT THE AUTHOR

...view details