ಕರ್ನಾಟಕ

karnataka

ಅವಾಚ್ಯ ಶಬ್ದಗಳಿಂದ ನಿಂದನೆ... ಒಂದು ಸಮುದಾಯಕ್ಕೆ ಧಮ್ಕಿ​ ಹಾಕಿದ ಜಿ.ಪಂ ಮಾಜಿ ಅಧ್ಯಕ್ಷ

By

Published : Apr 24, 2019, 1:34 PM IST

ರಾಜಕೀಯಕ್ಕೋಸ್ಕರ ದಾವಣಗೆರೆ ಮಾಜಿ ಜಿ.ಪಂ ಅಧ್ಯಕ್ಷ ಮತ್ತೊಂದು ಸಮುದಾಯದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ. ರಾಮಪ್ಪ ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿದ ವೈ.ರಾಮಪ್ಪ

ದಾವಣಗೆರೆ:ತಾಲೂಕಿನ ನೇರ್ಲಗಿ ಗ್ರಾಮದಲ್ಲಿಸಮುದಾಯವೊಂದರ ಜನರನ್ನು ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿದ ವೈ.ರಾಮಪ್ಪ

ನಿನ್ನೆ ನೇರ್ಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ಸಮುದಾಯದ ಮುಖಂಡರನ್ನೇ ಟಾರ್ಗೆಟ್​​ ಮಾಡಿ ಅವರ ಮುಂದೆಯೇ ಬಹಿರಂಗವಾಗಿ ರಾಮಪ್ಪ ನಿಂದಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಕಡೆ ನೀವೇ ಅಧಿಕಾರ ಮಾಡಬೇಕಾ? ನಿಮಗೆ ಈಶ್ವರ ಬಂದು ಲಿಂಗ ಕಟ್ಟಿದ್ದಾನಾ? ಈ ಬಾರಿ ಹಿಂದುಳಿದವರಿಗೆ ಅಧಿಕಾರ ಕೊಡಿ ಎಂದು ಧಮ್ಕಿ ಹಾಕಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ. ಮಂಜಪ್ಪ ಪರವಾಗಿರುವ ರಾಮಪ್ಪ ಈ ದುರ್ವರ್ತನೆ ತೋರಿದ್ದಾರೆ ಎನ್ನಲಾಗ್ತಿದೆ. ರಾಮಪ್ಪ ಅವರ ನಡೆಗೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

Intro:Body:

ವಿಡಿಯೋ ಎಡಿಟರ್​ಗೆ ಕೊಟ್ಟು- ಅಶ್ಲೀಲ ಪದಗಳಿದ್ದಲ್ಲಿ ಬೀಫ್ ಮಾಡಿಸಿ...


Conclusion:

TAGGED:

ABOUT THE AUTHOR

...view details